ಕೂಗು ನಿಮ್ಮದು ಧ್ವನಿ ನಮ್ಮದು

ಇಂದು 4 ರಿಂದ 6 ಗಂಟೆಯೊಳಗೆ ಸಾಹುಕಾರ ಸಿಡಿಸಲಿರುವ ಬಾಂಬ್ ಎಂಥದ್ದು..!?

ಬೆಂಗಳೂರು: ಸಿಡಿ ಲೇಡಿ ತನ್ನ ಸಹೋದರನ ಜೊತೆ ಮಾತನಾಡಿದ ಮೊಬೈಲ್ ಆಡಿಯೋ  ಸಂಭಾಷಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಗೆ ಒಳ್ಳೆಯದಾಗಲಿ, ಆಡಿಯೋದಲ್ಲಿ ಅವರ ಹೆಸರಿದ್ದ ಮಾತ್ರಕ್ಕೆ ಅವರು ಅಪರಾಧಿಯಲ್ಲ ಎಂದು ಹೇಳಿದ್ದಾರೆ.

ಸಿಡಿಯಲ್ಲಿದ್ದ ಯುವತಿಯ ಆಡಿಯೋ ಸಂಭಾಷಣೆ ವೈರಲ್ ಹಿನ್ನೆಲೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ನನ್ನ ಹಳೇ ಸ್ನೇಹಿತ. ಅವರಿಗೆ ಒಳ್ಳೆಯದಾಗಲಿ. ಆಡಿಯೋದಲ್ಲಿ ಹೆಸರಿದ್ದ ಮಾತ್ರಕ್ಕೆ ಅವರು ಆರೋಪಿಯಲ್ಲ. ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬಾರದು. ನನಗಾದ ಅನ್ಯಾಯ ಅವರಿಗೆ ಆಗಬಾರದು. ನಾಳೆ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಮಹಾ ಬಾಂಬ್ ಇದೆ. ಈ ವೇಳೆ ನಾನೇ ಮಾತನಾಡುತ್ತೇನೆ. ಅಲ್ಲಿಯವರೆಗೆ ಕಾಯಬೇಕು ಎಂದು ಹೇಳುವ ಮೂಲಕ ಹೊಸ ಸೂಚನೆ ನೀಡಿದ್ದು, ಎಲ್ಲರ ಚಿತ್ತ ಇವತ್ತಿನ ಸಾಹುಕಾರ ಸಿಡಿಸಲಿರುವ ಬಾಂಬ್ ಮೇಲೆ ನೆಟ್ಟಿದೆ

ಇನ್ನು ಸಿಡಿ ಪ್ರಕರಣದಲ್ಲಿ ನನ್ನ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಎಫ್ ಐಆರ್ ದಾಖಲಾದ ಮಾತ್ರಕ್ಕೆ ನಾನು ಅಪರಾಧಿಯಲ್ಲ. ನಾನು ಯಾವುದೇ ಜಾಮೀನು ಪಡೆದುಕೊಳ್ಳುವ ಅವಶ್ಯಕತೆ ಇಲ್ಲ. ಜಾಮೀನು ಪಡೆಯುವ ತಪ್ಪು ನಾನು ಮಾಡಿಲ್ಲ ಎಂದು ಹೇಳಿದ್ದಾರೆ.

error: Content is protected !!