ಕೂಗು ನಿಮ್ಮದು ಧ್ವನಿ ನಮ್ಮದು

ಸಿಡಿ ಲೇಡಿ ಪಿಜಿ ರೂಮಲ್ಲಿ 23 ಲಕ್ಷ ನಗದು ಜಪ್ತಿ ಮಾಡಿದ ಎಸ್ ಐಟಿ: ಹಣ ಬಂದಿದ್ದು ಎಲ್ಲಿಂದ..?

ಬೆಂಗಳೂರು: ಸಾಹುಕಾರ್ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಯುವತಿ ತಂಗಿದ್ದ ಪಿಜಿಯಲ್ಲಿ ಬರೋಬ್ಬರಿ 23 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದೆ. ನಿನ್ನೆ ಸಂಜೆ ಬೆಂಗಳೂರಿನ ಆರ್.ಟಿ.‌ ನಗರದಲ್ಲಿ ಯುವತಿ ವಾಸವಿದ್ದ ಪಿಜಿಯ ರೂಮಲ್ಲಿ ಸರ್ಚ್ ವಾರಂಟ್ ಪಡೆದು ಎಸ್ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಒಟ್ಟು 23 ಲಕ್ಷ ರೂಪಾಯಿ ನಗದು ಹಣ ಮತ್ತು ಮಹತ್ವದ ದಾಖಲೆಗಳು ಪತ್ತೆಯಾಗಿವೆ.

ಕಳೆದ ವಾರವೇ ಎಸ್ ಐಟಿ ಅಧಿಕಾರಿಗಳು ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಮನೆಗೆ ನೋಟೀಸ್ ಅಂಟಿಸಿದ್ದರು. ನಂತರ ಈವರೆಗೆ ಒಟ್ಟು ಮೂರು ನೋಟಿಸ್ ಗಳನ್ನು ಯುವತಿಯ ಪಿಜಿ ರೂಮ್, ವಿಜಯಪುರ ಬಲಕಿಯ ಮನೆ, ಯುವತಿಯ 3 ಇಮೇಲ್ ಹಾಗೂ ವಾಟ್ಸಪ್ ಗೆ ಕಳಿಸಲಾಗಿದೆ. ಆದರೆ ಯುವತಿ ಮಾತ್ರ ನಾಪತ್ತೆಯಿದ್ದು, ಈವರೆಗೂ ವಿಚಾರಣೆಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಬರೋಬ್ಬರಿ 23 ಲಕ್ಷ ರೂಪಾಯಿ ಹಣ ಪತ್ತೆಯಾಗಿದ್ದು, ಹಲವು ತಿರುವುಗಳಿಗೆ ಕಾರಣವಾಗಿದೆ.

error: Content is protected !!