ಕೂಗು ನಿಮ್ಮದು ಧ್ವನಿ ನಮ್ಮದು

ಉತ್ತರ ಕರ್ನಾಟಕದ ಸಂಗೀತ ಪ್ರೀಯರಿಗೆ ಸಿಹಿ ಸುದ್ದಿ: ನಿನಾದ ಮ್ಯೂಸಿಕ್ ಸ್ಟುಡಿಯೋ ಲೋಕಾರ್ಪಣೆ ಗೊಳಿಸಿದ ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಸಿನಿಮಾ ಪ್ರೀಯರು, ಸಂಗೀತ ಪ್ರೀಯರು ಹಾಗೂ ಕಲಾವಿದರ ಬಹು ದಿನಗಳ ಬೇಡಿಕೆಯನ್ನ ಈಡೇರಿಸುವಲ್ಲಿ ಬೆಳಗಾವಿಯ ಮೀಡಿಯಾ ಜಂಕ್ಷನ್ ಸಂಸ್ಥೆ ಯಶಸ್ವಿಯಾಗಿದೆ. ಈಗಾಗಲೇ ಬಿಗ್ ನ್ಯೂಸ್ ಕನ್ನಡ ಸುದ್ದಿವಾಹಿನಿ ಹಾಗೂ ನ್ಯೂಸ್ 90 ಕರ್ನಾಟಕ ಸುದ್ದಿವಾಹಿನಿಗಳ ಮೂಲಕ ರಾಜ್ಯ, ದೇಶ, ವಿದೇಶಗಳಲ್ಲಿ ಮನೆ ಮಾತಾಗಿದೆ. ಈ ಭಾಗದ ಜನತೆಯ ಒತ್ತಾಸೆ ಮೇರೆಗೆ ಬೆಳಗಾವಿ ಮೀಡಿಯಾ ಜಂಕ್ಷನ್‌ ಸಂಸ್ಥೆ ಇಂದು “ನಿನಾದಾ ಮ್ಯೂಸಿಕ್‌ ವರ್ಲ್ಡ್‌” ರೆಕಾರ್ಡಿಂಗ್ ಸ್ಟುಡಿಯೋ ಲೋಕಾರ್ಪಣೆ ಗೊಳಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.

ಇಂದು ಮಧ್ಯಾಹ್ನ ಘನ ಸರ್ಕಾರದ ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ “ನೀನಾದ ಮ್ಯೂಸಿಕ್ ವರ್ಲ್ಡ್” ಸ್ಟುಡಿಯೋ ವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಅಥಣಿ ಶಾಸಕ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಟೊಳ್ಳಿ, ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ, ಬಿಜೆಪಿ ಮುಖಂಡ ಕಿರಣ ಜಾಧವ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಚಲನಚಿತ್ರ ಗೀತೆ, ಹಿನ್ನೆಲೆ ಸಂಗೀತ, ಜನಪದ ಗೀತೆ, ಅಲ್ಬಮ್ ಸಾಂಗ್ಸ್, ಮೂವೀ ವಾಯ್ಸ್ ಡಬ್ಬಿಂಗ್, ಕರೋಕೆ ಸಿಂಗಿಂಗ್, ಕರೋಕೆ ಕ್ಲಾಸ್ ಸೇರಿದಂತೆ ಹತ್ತಾರು ಸೌಲಭ್ಯಗಳು ಇನ್ಮುಂದೆ ಬೆಳಗಾವಿಯಲ್ಲಿಯೇ ಸಿಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವಿಶೇಷ ರೆಕಾರ್ಡಿಂಗ್ ಸ್ಟುಡಿಯೋ ಇದಾಗಿದ್ದು ಈ ಮೂಲಕ ಈ ಭಾಗದ ಜನರ ಬೆಂಗಳೂರು ಅವಲಂಬನೆ ತಪ್ಪಿದಂತಾಗಿದೆ.

error: Content is protected !!