ಕೋಲಾರ: ಅದು ಕೋಟಿ ಕೋಟಿ ಹಣಕ್ಕಾಗಿ ಕರಾವಳಿ ಭಾಗದಲ್ಲಿ ಉದ್ಯಮಿಯೊಬ್ಬರ ಮಗನನ್ನು ಕಿಡ್ನಾಪ್ ಮಾಡಿದ್ದ ಪ್ರಕರಣ. ಆದ್ರೆ ಅದು ಕಳೆದ ಮೂರು ದಿನಗಳಿಂದ ಸುತ್ತಾಡಿದ್ದ ಕಿಡ್ನಾಪ್ ಪ್ರಕರಣ, ಕೊನೆಗೆ ಬಯಲು ಸೀಮೆ ಕೋಲಾರದಲ್ಲಿ ಬಂದು ಸುಖಾಂತ್ಯ ಕಂಡಿದೆ. ಮೂರು ದಿನಗಳಿಂದ ಕಿಡ್ನಾಪರ್ಸ್ ವಶದಲ್ಲಿದ್ದ ಮಗು ಇದೀಗ ಹೆತ್ತವರ ಮಡಿಲು ಸೇರಿದೆ. ಹೌದು.. ಮಗುವನ್ನು ಬಿಗಿದಪ್ಪಿಕೊಂಡು ಮುತ್ತಿಟ್ಟ ತಾಯಿ, ಮತ್ತೊಂಡೆ ಕಿಡ್ನಾಫರ್ಸ್ರನ್ನು ಬಂಧಿಸಿ ಕರೆದುಕೊಂಡು ಹೋದ ಪೊಲೀಸರು. ಇದೆಲ್ಲಾ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಮಾಸ್ತಿ ಪೊಲೀಸ್ ಠಾಣೆ ಎದುರು.
ಅಷ್ಟಕ್ಕೂ ಮಂಗಳೂರಿನ ಉಜಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜಾಯ್ ಅನ್ನೋ ಉದ್ಯಮಿಯೊಬ್ಬರ 8 ವರ್ಷದ ಮಗ ಅನುಭವ್ನನ್ನು ಡಿಸೆಂಬರ್ 17 ರಂದು ನಾಲ್ವರು ಕಿಡ್ನಾಫರ್ಸ್ ಇಂಡಿಕಾ ಕಾರ್ನಲ್ಲಿ ಕಿಡ್ನಾಪ್ ಮಾಡಿದ್ದರು. ಕಿಡ್ನಾಪ್ ಮಾಡಿದ್ದ ಕಿಡ್ನಾಪರ್ಸ್, ಮಗುವಿನ ಹೆತ್ತವರಿಂದ 100 ಬಿಟ್ಕಾಯಿನ್ ಅಂದ್ರೆ 17 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಪ್ರಕರಣದ ಬೆನ್ನು ಹತ್ತಿದ್ದ ಮಂಗಳೂರು ಪೊಲೀಸರು ಕಳೆದ ರಾತ್ರಿ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಕೂರ್ನಹೊಸಹಳ್ಳಿ ಗ್ರಾಮದಲ್ಲಿ ಅಪಹರಕ್ಕಿಡಾದ ಮಗುವನ್ನು ರಕ್ಷಿಸಿದ್ದಾರೆ. ಅಲ್ಲದೇ ಆರು ಜನ ಕಿಡ್ನಾಪರ್ಸ್ರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಗುವನ್ನು ರಕ್ಷಣೆ ಮಾಡಿದ ಪೊಲೀಸರು ಕಿಡ್ನಾಫ್ ಮಾಡಿದ್ದ ಮೈಸೂರಿನ ಗಂಗಾಧರ್, ಮಂಡ್ಯದ ರಂಜಿತ್,
ಹನುಮಂತು, ಮತ್ತು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಮಲ್ ಎಂಬಾತನನ್ನು ಬಂಧಿಸಿದ್ದಾರೆ.
ಜೊತೆಗೆ ಕಿಡ್ನಾಪರ್ಸ್ಗೆ ರಕ್ಷಣೆ ನೀಡಿದ್ದ ಕೂರ್ನಹೊಸಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಮಹೇಶ್ ಎಂಬಾತನನ್ನು ಬಂಧಿಸಿದ್ದಾರೆ. ಇನ್ನು ಡಿಸೆಂಬರ್ 17 ರಂದು ಕಿಡ್ನಾಪ್ ಆದ ನಂತರ ಕಿಡ್ನಾಪರ್ಸ್ ಬೆನ್ನು ಹತ್ತಿದ್ದ ಮಂಗಳೂರು ಪೊಲೀಸರ ವಿಶೇಷ ತಂಡ ಅವರ ಪೋನ್ ಕಾಲ್ ಡಿಟೇಲ್ಸ್ ಜಾಡು ಹಿಡಿದು ಅವರನ್ನು ಫಾಲೋ ಮಾಡುತ್ತಿತ್ತು. ಹೀಗಿರುವಾಗಲೇ ಕಳೆದ ರಾತ್ರಿ ಕಿಡ್ನಾಪರ್ಸ್ ಕೋಲಾರದ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂರ್ನಹೊಸಳ್ಳಿ ಗ್ರಾಮಕ್ಕೆ ಬಂದಿರುವುದು ಕನ್ಫರ್ಮ್ ಆಗಿತ್ತು. ಈ ವೇಳೆ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಯವರ ಆದೇಶದ ಮೇರೆಗೆ ಮಾಸ್ತಿ ಪೊಲೀಸ್ ಠಾಣೆಯ ಪಿಎಸ್ಐ ಪ್ರದೀಪ್ ಹಾಗೂ ಅವರ ಸಿಬ್ಬಂದಿ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮಹೇಶ್ ಅವರ ಮನೆಯಲ್ಲಿದ್ದ ಕಿಡ್ನಾಪರ್ಸ್ರನ್ನು ಬಂಧಿಸಿ, ಮಗುವನ್ನು ರಕ್ಷಣೆ ಮಾಡಿದ್ರು.
ಈ ವೇಳೆ ಅವರಿಗೆ ಆಶ್ರಯ ನೀಡಿದ ಮಹೇಶ್ ಹಾಗೂ ಮಂಜುನಾಥ್ರನ್ನು ಬಂಧಿಸಿದ್ದಾರೆ. ಇನ್ನು ವಿಷಯ ತಿಳಿದ ಮಗುವಿನ ಪೊಷಕರು ಮಂಗಳೂರಿನಿಂದ ಕೋಲಾರದ ಮಾಸ್ತಿ ಗ್ರಾಮಕ್ಕೆ ಓಡೋಡಿ ಬಂದರು. ಮದ್ಯಾಹ್ನದ ಸುಮಾರಿಗೆ ತಲುಪಿದ ಅವರು ಕಿಡ್ನಾಪ್ ಆಗಿದ್ದ ಮಗುವನ್ನು ಕಂಡಾಕ್ಷಣ ಬಿಗಿದಪ್ಪಿಕೊಂಡು ಕಣ್ಣೀರು ಹಾಕಿದ ಪೊಷಕರು ಹೋದ ಜೀವ ಮತ್ತೆ ಬಂದಂತಾಗಿದೆ ಎಂದು ಮಗುವನ್ನು ಮರಳಿ ತಮ್ಮ ಮಡಿಲಿಗೆ ಸೇರಿಸಿದ ಪೊಲೀಸರಿಗೆ ಧನ್ಯವಾದ ಹೇಳಿದ್ರು. ಇನ್ನು ಕಿಡ್ನಾಪ್ ಆಗಿದ್ದ ಬಾಲಕ ಅವರು ನಾನು ಕೇಳಿದ್ದೆಲ್ಲವನ್ನೂ ಕೊಡಿಸುತ್ತಿದ್ದರು ಆದ್ರೆ ನಾನು ಏನು ತಿನ್ನಲಿಲ್ಲ ಅವರೊಟ್ಟಿಗೆ ಚೆನ್ನಾಗಿ ಇದ್ದೆ ಎಂದಿದ್ದಾನೆ. ಒಟ್ಟಾರೆ ಕರಾವಳಿ ಭಾಗದಲ್ಲಿ ಕಿಡ್ನಾಪ್ ಆಗಿದ್ದ ಬಾಲಕ ಕೊನೆಗೂ ಬಯಲು ಸೀಮೆಯಲ್ಲಿ ಬಂದು ಪೊಷಕರ ಮಡಿಲು ಸೇರಿದ್ದಾನೆ. ಒಟ್ಟಾರೆ ಹಣಕ್ಕಾಗಿ ಕಿಡ್ನಾಪ್ ಮಾಡಿದ ಕಿಡ್ನಾಪರ್ಸ್ ಸಧ್ಯ ಸಿಕ್ಕಿದ್ದು, ಕಿಡ್ನಾಪ್ನ ಅಸಲಿ ಕಥೆ ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ.