ವಿಜಯಪುರ: ಗ್ರಾಮ ಪಂಚಾಯತಿ ಚುನಾವಣಾ ಕಾವು ಗ್ರಾಮೀಣ ಪ್ರದೇಶಗಳಲ್ಲಿ ದಿನೆ ದಿನೆ ಹೆಚ್ಚಾಗುತ್ತಿದೆ. ನಿನ್ನೆಯಷ್ಟೇ ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಮುಕ್ತಾಯವಾಗಿದ್ದು ಅಧಿಕೃತ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಇನ್ನು ವಿಜಯಪುರದಲ್ಲಿ ಗಂಡ-ಹೆಂಡತಿ ಇಬ್ಬರೂ ಗ್ರಾಮ ಪಂಚಾಯತಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಊರಲ್ಲಿ ಟೈಲರಿಂಗ್ ಮಾಡಿಕೊಂಡಿದ್ದವ ಒಂದು ವಾರ್ಡ್ ಗೆ ಸ್ಪರ್ಧೆಗೆ ನಿಂತಿದ್ದರೇ ಆತನ ಪತ್ನಿ ಮತ್ತೊಂದು ವಾರ್ಡ್ ಗೆ ಸ್ಪರ್ಧಿಸಿದ್ದಾಳೆ. ಗ್ರಾಮ ಪಂಚಾಯತಿ ಮಾಜಿ ಸದಸ್ಯ ತನ್ನ ಪತ್ನಿಯೊಂದಿಗೆ ಮತ್ತೊಮ್ಮೆ ಅದೃಷ್ಠ ಪರೀಕ್ಷೆಗೆ ಇಳಿದಿದ್ದಾನೆ.
ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ.ಪಿ.ಬಿ ಗ್ರಾಮ ಪಂಚಾಯತಿಗೆ ಈ ದಂಪತಿ ಸ್ಪರ್ಧೆಗೆ ಇಳಿದಿದ್ದಾರೆ. ಸಂಕನಾಳ ಗ್ರಾಮದ ಹುಸೇನಸಾಬ್ ಮುಲ್ಲಾ ಹಾಗೂ ಆತನ ಪತ್ನಿ ಮಾಲನಬಿ ಮುಲ್ಲಾ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು. 3ನೇ ವಾರ್ಡ್ ನ ಸಾಮಾನ್ಯ ಅಭ್ಯರ್ಥಿಯಾಗಿ ಹುಸೇನಸಾಬ್ ಅಖಾಡಕ್ಕೆ ಇಳಿದರೇ, 4ನೇ ವಾರ್ಡ್ ಹಿಂದುಳಿವ ವರ್ಗ ಅ ಮಹಿಳಾ ಸ್ಥಾನಕ್ಕೆ ಪತ್ನಿ ಮಾಲನಬಿ ಮುಲ್ಲಾ ಸ್ಪರ್ಧೆಯನ್ನು ಅಖಾಡದಲ್ಲಿದ್ದಾರೆ. 66ನೇ ಇಳಿ ವಯ್ಯಸ್ಸಿನಲ್ಲಿಯೂ ಜನಸೇವೆ ಮಾಡಲು ಚುನಾವಣಾ ಅಖಾಡಕ್ಕೆ ಇಳಿದಿರುವ ಈ ದಂಪತಿಗಳ ಚುನಾವಣಾ ಸ್ಪರ್ಧೆ ಸಾಕಷ್ಟು ಕುತೂಹಲ ಕೆರಳಿಸಿದೆ.