ಕೂಗು ನಿಮ್ಮದು ಧ್ವನಿ ನಮ್ಮದು

ಖಾಸಗಿ ವಿಡಿಯೋ ಲೀಕ್ ಮಾಡೋದಾಗಿ ಬೇದರಿಕೆ: ಬಿಜೆಪಿ ತಾಲೂಕಾ ಅಧ್ಯಕ್ಷನಿಂದ ಲಕ್ಷಾಂತರ ರೂ ಪೀಕಿದ ಮುಖಂಡರು ಅಂದರ್

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಹನಿಟ್ರ್ಯಾಪ್ ಮಾದರಿಯಲ್ಲಿ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿಗಿಳಿದಿದ್ದ ಆರೋಪಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮೈಸೂರಿನ ಬಿಜೆಪಿ ಮುಖಂಡರಿಂದ, ಬಿಜೆಪಿ ಮುಖಂಡನಿಗೇ ಬ್ಲ್ಯಾಕ್ ಮೇಲ್ ಮಾಡಿ, ಸುಲಿಗೆ ಮಾಡಲಾಗಿದೆ. ಖಾಸಗಿ ವಿಡಿಯೋವುಳ್ಳ ಮೆಮೊರಿ ಕಾರ್ಡ್‌ಗಾಗಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಲಾಗಿದೆ.

ಬ್ಲ್ಯಾಕ್ ಮೇಲ್ ಗೆ ಒಳಗಾದ ವೈದ್ಯ, ಪಿರಿಯಾಪಟ್ಟಣ ತಾಲ್ಲೂಕು ಬಿಜೆಪಿ ಅಧ್ಯಕ್ಷ

ಆರೋಪಿಗಳ ಹಣದ ದಾಹ ತೀರದೇ ಇದ್ದುದಕ್ಕೆ ಬರೋಬ್ಬರಿ ಒಂದು ವರ್ಷದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೈಸೂರಿನ ಡಾ.ಕೆ.ಪ್ರಕಾಶ್ ಬಾಬು ರಾವ್ ಈ ದೂರನ್ನು ನೀಡಿದ್ದು, ತಮಗೆ ಬ್ಲ್ಯಾಕ್ ಮೇಲ್ ಮಾಡಿದ ರೀತಿಯನ್ನು ಇಂಚಿಂಚಾಗಿ ಬಿಚ್ವಿಟ್ಟಿದ್ದಾರೆ. ಡಾ.ಕೆ.ಪ್ರಕಾಶಬಾಬು ದೂರು ಆದರಿಸಿ ಆರೋಪಿಗಳಾದ ನೇರಳಕುಪ್ಪೆ ನವೀನ್, ಶಿವರಾಜ್ ಅಲಿಯಾಸ್ ಸ್ನೇಕ್ ಶಿವರಾಜ್, ಹರೀಶ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು

ಇನ್ನುಳಿದ ಆರೋಪಿಗಳಾದ
ಅನಿತಾ, ವಿಜಿ ಹಾಗೂ ಇತರೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇನ್ನು ಮೈಸೂರಿನ ಪಿರಿಯಾ ಪಟ್ಟಣದಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ‌.ಪ್ರಕಾಶ್ ಬಾಬುರಾವ್, ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಹಾಗೂ ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷರಾಗಿದ್ದಾರೆ.

ಅಲ್ಲದೇ ಆರೋಪಿ ನೇರಳಕುಪ್ಪೆ ನವೀನ್ ಎಂಎಲ್‌ಸಿ ಅಡಗೂರು‌ ಎಚ್.ವಿಶ್ವನಾಥ್ ಆಪ್ತ ಹಾಗೂ ಬಿಜೆಪಿ ಮುಖಂಡನಾಗಿದ್ದು, ಡಾಕ್ಟರ್ ಮೊಬೈಲ್‌ ಫೋನ್‌ನಲ್ಲಿದ್ದ ಮೆಮರಿ ಚಿಪ್ ಕಳವು ಮಾಡಿ ಬ್ಲಾಕ್ ಮೇಲ್ ಮಾಡಿದ್ದರು. ನಂತರ ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ನವೀನ್, ಕಳೆದ ಜನವರಿಯಿಂದ ಅಕ್ಟೋಬರ್ ವರೆಗೆ 31.30 ಲಕ್ಷ ರೂಪಾಯಿಯನ್ನು ವೈದ್ಯನಿಂದ ವಸೂಲಿ ಮಾಡಿದ್ದರು.

ಆಸ್ತಿ ಮಾರಾಟ ಮಾಡಿ 27 ಲಕ್ಷ ರೂಪಾಯಿ ನೀಡಿದರೂ ಆರೋಪಿಗಳು ಮೆಮರಿ ಚಿಪ್ ಹಿಂದಿರುಗಿಸದ್ದರಿಂದ ಅಂತಿಮವಾಗಿ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಜಾಡು ಹಿಡಿದ ಪೊಲೀಸರು ಮೂವರು ಆರೋಪಗಳನ್ನು ಬಂಧಿಸಿದ್ದು, ಉಳಿವರಿಗಾಗಿ ಬಲೆ ಬೀಸಿದ್ದಾರೆ.

error: Content is protected !!