ಕೂಗು ನಿಮ್ಮದು ಧ್ವನಿ ನಮ್ಮದು

ವಿದ್ಯುತ್ ದರ ಏರಿಕೆ ಖಂಡಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಬೆಳಗಾವಿ: ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ ಜನ್ಮ ದಿನವನ್ನು ಆಚರಿಸಲಾಯಿತು. ನಂತರ ವಿದ್ಯುತ್ ಬೆಲೆಯೇರಿಕೆಯನ್ನು ಖಂಡಿಸಿ ಬೆಳಗಾವಿ ಕಾಂಗ್ರೆಸ್ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ಕೂಡಲೇ ವಿದ್ಯುತ್ ದರ ಏರಿಕೆ ಕೈ ಬಿಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಬೆಳಗಾವಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ವಿನಯ ನಾವಲಗಟ್ಟಿ, ಸುನೀಲ ಹನಮನ್ನವರ, ಶೇಖರ ಈಟಿ, ಮೋಹನ ರೆಡ್ಡಿ, ಪರಶುರಾಮ ವಗ್ಗನ್ನವರ, ಗಜು ಧರನಾಯ್ಕ್, ಸಿದ್ಧೀಕ್ ಅಂಕಲಗಿ, ಬಾಳೇಶ ದಾಸನಟ್ಟಿ, ಮಂಜು ಕಾಂಬಳೆ, ಜಗದೀಶ ಸಾವಂತ, ಮಾರುತಿ ಜೋಯಿ, ಗುರುರಾಜ ಪೂಜೇರ, ಜಯಶ್ರೀ ಮಾಳಗಿ, ಅನ್ನಪೂರ್ಣ ಅಸುರಕರ್, ಆಯೇಶಾ ಸನದಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!