ಬೆಳಗಾವಿ: ಇಂದು ಬಲಿಪಾಡ್ಯಮಿ. ಚಕ್ರವರ್ತಿ ಬಲೀಂದ್ರರು ಭೂಲೋಕಕ್ಕೆ ಬರುವ ದಿನ ಎಂದು ಪ್ರತೀತಿ ಇರುವ ಈ ದಿನ ನಮ್ಮ-ನಿಮ್ಮೆಲ್ಲರ ಮನೆಗಳಲ್ಲಿ ಸಂಭ್ರಮವನ್ನು ತರಲಿ. ಅಂಧಕಾರವನ್ನು ಕಳೆಯುವ ಕಾರ್ತಿಕ ಮಾಸ ಪ್ರಾರಂಭವಾಗುವುದೇ ಪಾಡ್ಯದ ಈ ದಿನದಂದು ಬೆಳಗುವ ದೀಪದ ಬೆಳಕಿನಿಂದ. ಇದು ಎಲ್ಲರ ಬಾಳನ್ನು ಬೆಳಗಿಸಲಿ. ಸಂಕಷ್ಟಗಳು ಹಾಗೂ ಸಾಂಕ್ರಾಮಿಕದ ಕತ್ತಲು ಕಳೆದು ಸಂತಸ ಸಂಭ್ರಮಗಳ ಬೆಳಗು ಮೂಡಲಿ ಎಂದು ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಶುಭ ಕೋರಿದ್ದಾರೆ.
ನಮ್ಮನ್ನು ಕಾಯುತ್ತಿರುವ ಭಾರತೀಯ ಯೋಧರ ಹಾಗೂ ಅವರ ಕುಟುಂಬದವರ ಕರ್ತವ್ಯನಿಷ್ಠೆ, ತ್ಯಾಗಗಳಿಗೆ ನಮ್ಮ ಕೃತಜ್ಞತೆಗಳ ಪ್ರತೀಕವಾಗಿ ಒಂದು ದೀಪ ಹಚ್ಚೋಣ ಎಂದು ಜಲಸಂಪನ್ಮೂಲ ಸಚಿವರು ಇದೇ ಸಂದರ್ಭದಲ್ಲಿ ಕರೆ ನೀಡಿದ್ದಾರೆ. ಹಾಗೆಯೇ ಕನ್ನಡ ನಾಡಿನ ಸಮಸ್ತ ಜನತೆಗೆ ಬಲಿ ಪ್ರತಿಪದಾ ದೀಪಾವಳಿ ಹಬ್ಬ ದ ಹಾರ್ದಿಕ ಶುಭಾಶಯಗಳನ್ನು ಸಚಿವ ರಮೇಶ್ ಜಾರಕಿಹೊಳಿ ಕೋರಿದ್ದಾರೆ.