ಕೂಗು ನಿಮ್ಮದು ಧ್ವನಿ ನಮ್ಮದು

ಭೀಕರ ರಸ್ತೆ ಅಪಘಾತ ಸವದತ್ತಿ ಮೂಲದ ಒಂದೆ ಕುಟುಂಬದ ನಾಲ್ವರ ದುರ್ಮರಣ

ಗೋಕಾಕ: ಗೋಕಾಕ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿದ್ದು, ಒಂದೇ ಕುಟುಂಬದ ನಾಲ್ವರು ದುರ್ಮರಣ್ಣಕ್ಕಿಡಾಗಿದ್ದಾರೆ. ಈ ಮೂಲಕ ದೀಪಾವಳಿ ಅಮಾವಾಸ್ಯೆ ದಿನ ಜವರಾಯ ತನ್ನ ಅಟ್ಟಹಾಸ ಮೇರೆದಿದ್ದು, ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದವ್ರು ಮಸಣ ಸೇರಿದ್ದಾರೆ. ಟಾಟಾ ಸುಕ್ರೋ ಗೂಡ್ಸ ವಾಹನ ನಂಬರ KA24 A 2088 ಮತ್ತು MH04 EQ 0771 ನಂಬರಿನ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಕಾಕ್ ತಾಲೂಕಿನ ಸಂಕೇಶ್ವರ – ನರಗುಂದ ರಾಜ್ಯ ಹೆದ್ದಾರಿ ಮಮದಾಪೂರ ಕ್ರಾಸ್ ಬಳಿ ನಡೆದಿದೆ.

ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರ ಸಾವು

ಓರ್ವ ಯುವಕ, ಇಬ್ಬರು ಮಹಿಳೆಯರು, ಒಂದು ಹೆಣ್ಣುಮಗು ಸೆರಿ ಒಂದೇ ಕುಟುಂಬದ ನಾಲ್ಕು ಜನ ದುರ್ಮರಣ ಹೊಂದಿದ್ದು, ಮೂವರು ತೀವ್ರ ಗಾಯಗೊಂಡಿದ್ದಾರೆ. ಇನ್ನು ಮೃತಪಟ್ಟವರು ಹಾಗೂ ಗಾಯಗೊಂಡವರು ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದವರು ಎನ್ನಲಾಗಿದ್ದು, ಮೃತರನ್ನು ಹಣಮಂತ ಫಕೀರಪ್ಪ ಪರಕನಟ್ಟಿ (28), ಮಾಲವ್ವ ಹಣಮಂತ ಪರಕಣಟ್ಟಿ (25), ಸಿದ್ದವ್ವ ಪಕಿರಪ್ಪ ಪರಕನಟ್ಟಿ (50) ಮತ್ತು 6 ವರ್ಷದ ಕೀರ್ತಿ ಹಣಮಂತ ಪರಕನಟ್ಟಿ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಪಿಎಸ್ಐ ನಾಗರಾಜ್ ಕಿಲಾರೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದಿವರೆದಿದೆ.

error: Content is protected !!