ಹುಬ್ಬಳ್ಳಿ: ಕೊಲೆ ಪ್ರಕರಣದಲ್ಲಿ ಮತ್ತೇ ಜೈಲು ಸೇರಿದ ಮಾಜಿ ಸಚಿವ ವಿನಯ ಕುಲಕರ್ಣಿ, ವಿಡಿಯೋ ಕಾನ್ಪರನ್ಸ್ ಮೂಲಕ ವಿಚಾರಣೆ ಮಾಡಿದ ನ್ಯಾಯವಾದಿಗಳಿಂದ ಆದೇಶ, ನೆಚ್ಚಿನ ನಾಯಕನನ್ನು ನೋಡಲು ಬಂದವರಿಗೆ ನಿರಾಶೆ ಮುಖ ನೋಡಲಾಗದೇ ಸಪ್ಪೆ ಮುಖ ಮಾಡಿಕೊಂಡು ತೆರಳಿದ ಅಭಿಮಾನಿಗಳು, ಕಾಂಗ್ರೇಸ್ ಪಕ್ಷದ ಮುಖಂಡರು, ಕಾರ್ಯಕರ್ತರು. ಇದಿಷ್ಟು ಇವತ್ತಿನ ಯೋಗೀಶ್ ಗೌಡ ಹತ್ಯೆ ಪ್ರಕರಣದ ಡೈರಿ.
ಹೌದು ಜಿಲ್ಲಾ ಪಂಚಾಯತ ಸದಸ್ಯ ಯೊಗೀಶಗೌಡ ಹತ್ಯೆ ಪ್ರಕರಣದ ತನಿಖೆ ಜೋರಾಗಿದೆ. ಈಗಾಗಲೇ ಹತ್ಯೆಯ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಸಿಬಿಐ ಕಸ್ಟಡಿ ಅವಧಿ ಮುಗಿದ ಹಿನ್ನಲೆಯಲ್ಲಿ ಇಂದು ನ್ಯಾಯಾಲಯಕ್ಕೇ ಹಾಜರು ಮಾಡಲಾಯಿತು. ಬೆಳಿಗ್ಗೆ ಹನ್ನೊಂದು ಘಂಟೆಯ ಒಳಗಾಗಿ ನ್ಯಾಯಾಧೀಶರ ಮುಂದೆ ವಿನಯ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ಹಾಜರು ಮಾಡಬೇಕಾಗಿತ್ತು. ಆದರೆ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಪೊಲೀಸರ ಸೂಚನೆಯಂತೆ ಸಿಬಿಐ ಅಧಿಕಾರಿಗಳು ವಿಡಿಯೋ ಕಾನ್ಪರನ್ಸ್ ಮೂಲಕ ಹಾಜರು ಮಾಡುವಂತೆ ನ್ಯಾಯಾಧೀಶೆ ಎಂ.ಪಂಚಾಕ್ಷರಿ ಅವರಿಗೆ ಪತ್ರವನ್ನು ಸಲ್ಲಿಸಿದ್ರು. ಇದಕ್ಕೇ ಒಪ್ಪಿದ ನ್ಯಾಯಾಧೀಶರು ವಿಡಿಯೋ ಕಾನ್ಪರನ್ಸ್ ಮೂಲಕ ವಿನಯ ಕುಲಕರ್ಣಿಯನ್ನು ಹಾಜರು ಮಾಡಿದ್ರು. ವಿಚಾರಣೆ ಮಾಡಿದ ನ್ಯಾಯಾಧೀಶರು ಬಂಧಿತರಾಗಿರುವ ವಿನಯ್ ಕುಲಕರ್ಣಿಗೆ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಆದೇಶ ನೀಡಿದ್ರು. ಜಿಲ್ಲಾ ಮೂರನೇ ಸೆಷನ್ಸ್ ನ್ಯಾಯಾಲಯದಲ್ಲಿ ಇಂದು ವಾದಗಳನ್ನ ಆಲಿಸಿದ ಜಡ್ಜ್ ಈ ಆದೇಶ ನೀಡಿದ್ರು.
ಸಿಬಿಐ ಬಂಧನದಲ್ಲಿದ್ದ ಮಾಜಿ ಸಚಿವರಿಗೆ ದಿನದಿಂದ ದಿನಕ್ಕೇ ಈ ಒಂದು ಕೇಸ್ ನಲ್ಲಿ ಸಂಕಷ್ಟವಾಗುತ್ತಿದ್ದು. ಇಂದು ಮತ್ತೇ ಬಿಗ್ ಶಾಕ್ ಎದುರಾಗಿದೆ. 3 ದಿನಗಳ ಕಾಲ ಸಿಬಿಐ ವಶದಲ್ಲಿದ್ದ ವಿನಯ್ ಗೆ ಇಂದಾದ್ರು ಜೈಲಾ ಅಥವಾ ಮತ್ತೆ ಸಿಬಿಐ ವಿಚಾರಣೆಯಾ ಎನ್ನೋ ಪ್ರಶ್ನೆಗಳ ನಡುವೆಯೇ 14 ದಿನಗಳ ನ್ಯಾಯಾಂಗ ಬಂಧನಕ್ಕೇ ನ್ಯಾಯಾಧೀಶರು ಒಪ್ಪಿಸಿ ಆದೇಶ ನೀಡಿದ್ದಾರೆ. ಇತ್ತ ನ್ಯಾಯಾಲಯದ ಆದೇಶ ಬರುತ್ತಿದ್ತಂತೆ ಸಿಬಿಐ ಅಧಿಕಾರಿಗಳು ನ್ಯಾಯಾಲಯದ ಪ್ರತಿಯನ್ನು ತಗೆದುಕೊಂಡು ಬಂದು ಹುಬ್ಬಳ್ಳಿಯ ಸಿಎಆರ್ ಮೈದಾನದಿಂದ ಬೆಳಗಾವಿಯ ಹಿಂಡಗಲಾ ಜೈಲಿಗೆ ಕರೆದುಕೊಂಡು ಹೋದ್ರು.
ನ್ಯಾಯಾಲದ ಸುತ್ತ ಮುತ್ತಲೂ ಪೊಲೀಸ್ ಭದ್ರತೆ. ಬಂಧಿತ ವಿನಯ ಕುಲಕರ್ಣಿ ಬಂಧನದ ಅವಧಿ ಮುಗಿದ ಹಿನ್ನಲೆಯಲ್ಲಿ ಇಂದು ನ್ಯಾಯಾಲಯಕ್ಕೇ ವಿನಯ ಕುಲಕರ್ಣಿಯನ್ನು ಹಾಜರು ಮಾಡುತ್ತಾರೆ ಎಂದು ಕಾಂಗ್ರೇಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ನ್ಯಾಯಾಲಯಕ್ಕೆ ಬರುತ್ತಾರೆ ಎಂದು ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಡಿಸಿಪಿ, ಎಸಿಪಿ, ಪೊಲೀಸ್ ಇನಸ್ಪೇಕ್ಟರ್ ನೇತ್ರತ್ವದಲ್ಲಿ ಒಟ್ಟು ಎರಡು ನೂರಕ್ಕೂ ಹೆಚ್ಚು ಪೊಲೀಸರ ಭದ್ರತೆಗೆ ವ್ಯವಸ್ಥೆ ಮಾಡಲಾಗಿತ್ತು. ಇಷ್ಟೇಲ್ಲ ಭದ್ರತೆಯ ವ್ಯವಸ್ಥೆ ಮಾಡಿಕೊಂಡ ಪೊಲೀಸರಿಗೆ ಕೊನೆಗೂ ಸಿಬಿಐ ಅಧಿಕಾರಿಗಳು ಶಾಕ್ ನೀಡಿ ವಿಡಿಯೋ ಕಾನ್ಪರನ್ಸ್ ಮೂಲಕ ಹಾಜರು ಮಾಡಿದ್ರು. ಇನ್ನು ನೆಚ್ಚಿನ ನಾಯಕ ನ್ಯಾಯಾಲಯಕ್ಕೆ ಬರುತ್ತಾರೆಂದುಕೊಂಡು ಕಾಂಗ್ರೇಸ್ ಪಕ್ಷದ ಮುಖಂಡರು, ವಿನಯ ಕುಲಕರ್ಣಿ ಅಭಿಮಾನಿಗಳು ನ್ಯಾಯಾಲಯದ ಮುಂದೆ ಬಂದಿದ್ದರು. ನ್ಯಾಯಾಲಯಕ್ಕೇ ಕರೆದುಕೊಂಡು ಬರದೇ ವಿಡಿಯೋ ಕಾನ್ಪರನ್ಸ್ ಮೂಲಕ ವಿಚಾರಣೆ ಮಾಡಲಾಯಿತು. ಇದರಿಂದ ನೆಚ್ಚಿನ ನಾಯಕ ಬರಲಿಲ್ಲ ಎಂಬ ಕಾರಣಕ್ಕಾಗಿ ಮುಖ ನೋಡಲಾಗದೆ ನಿರಾಶೆಯಿಂದ ಸಪ್ಪೆ ಮುಖ ಮಾಡಿಕೊಂಡು ಮನೆಯತ್ತ ಹೋರಟರು.
ಒಟ್ಟಾರೆ ಇಂದು ಸಿಬಿಐ ವಕೀಲರಾದ ಸುದರ್ಶನ್ ಮತ್ತು ಅತ್ತ ವಿನಯ್ ಪರ ವಕೀಲರಾದ ಬಾಹುಬಲಿ ವಾದಗಳನ್ನ ಮಂಡಿಸಿದ್ರು. ನಿರಂತರ 30 ನಿಮಿಷಗಳ ಕಾಲ ನಡೆದ ಈ ವಿಚಾರಣೆಯಲ್ಲಿ ಮೂರನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಪಂಚಾಕ್ಷರಿ.ಎಂ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಸಿಬಿಐ ಮತ್ತೆ ಕಷ್ಟಡಿಗೂ ಕೇಳದೆ ಇರುವುದರಿಂದ ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಸಲಾಗಿದೆ. ಒಟ್ಟಾರೆ ಯೋಗೀಶ್ ಗೌಡ ಹತ್ಯೆ ಪ್ರಕರಣ ತನಿಖೆ ಚುರುಕುಗಿಳಿಸಿರುವ ಸಿಬಿಐ ಸಾಕ್ಷ್ಯ ನಾಶದ ಬಗ್ಗೆಯೂ ಹೆಚ್ಚೆಚ್ಚು ಮಾಹಿತಿ ಕಲೆಹಾಕುತ್ತಿದೆ. ಬಂಧನವಾಗಿರುವ ವಿನಯ್ ಮತ್ತೆ ಜೈಲಿನಲ್ಲೇ ಈ ಬಾರಿಯ ದೀಪಾವಳಿ ಆಚರಿಸೋದು ಬಹುತೇಕ ಪಕ್ಕಾ ಆಗಿದೆ. ಈಗಾಗಲೇ ನಿನ್ನೆ ಹಲವಾರು ಜನರ ವಿಚಾರಣೆ ನಡೆಸಿರುವ ಸಿಬಿಐ ಮತ್ತೆ ಮುಂದಿನ ದಿನಗಳಲ್ಲಿ ಹೆಚ್ಚು ಜನರ ವಿಚಾರಣೆ ನಡೆಸುವ ಸಾಧ್ಯತೆ ಇದೆ.