ಹುಬ್ಬಳ್ಳಿ: ಯೊಗೇಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ವಿಚಾರಣೆಯನ್ನು ಸಿಬಿಐ ಅಧಿಕಾರಿಗಳು ಆರಂಭ ಮಾಡಿದ್ದಾರೆ. ನಿನ್ನೇ ನ್ಯಾಯಾಲಯ ತೀರ್ಪು ನೀಡುತ್ತಿದ್ದಂತೆ ಇಂದು ಸಿಬಿಐ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಪಿಲ್ಡಿಗಿಳಿದಿದ್ದಾರೆ. ಧಾರವಾಡದಿಂದ ಬೆಳಗಾವಿಗೆ ಹೋಗಿ ಸೂರ್ಯ ಉದಯಿಸುವ ಮುನ್ನವೇ ಕಾರಾಗೃಹದ ಬಾಗಿಲು ತಟ್ಟಿದ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಕರೆದುಕೊಂಡು ಬಂದಿದ್ದಾರೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ವಿನಯ ಕುಲಕರ್ಣಿಯನ್ನು ಕರೆದುಕೊಂಡು ಬಂದಿರುವ ಸಿಬಿಐ ಅಧಿಕಾರಿಗಳು ತನಿಖೆ ಆರಂಭ ಮಾಡಿದ್ದಾರೆ.
ಬಂಧನವಾದ ಮೊದಲ ದಿನ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಸಾಕಸ್ಟು ಪ್ರಮಾಣದಲ್ಲಿ ಗದ್ದಲವಾಗಿತ್ತು ಹೀಗಾಗಿ ಇವತ್ತು ವಿನಯ ಕುಲಕರ್ಣಿಗೆ 52 ನೇ ಹುಟ್ಟು ಹಬ್ಬದ ಸಂಭ್ರಮ ಇದ್ದುದರಿಂದ ಇವತ್ತೂ ಕೂಡಾ ಧಾರವಾಡದಕ್ಕೇ ಕರೆದುಕೊಂಡು ಬಂದರೆ ಮತ್ತಷ್ಟು ಗಲಾಟೆ ಗದ್ದಲವಾಗುತ್ತದೆ. ಅಲ್ಲದೇ ಕಾನೂನು ಸುವ್ಯವಸ್ಥೆ ನಿಯಂತ್ರಣವಾಗೊದಿಲ್ಲ ಎಂಬ ಕಾರಣಕ್ಕಾಗಿ ಪೊಲೀಸರು ಬೇರೆಡೆ ಕರೆದುಕೊಂಡು ಹೋಗುವಂತೆ ಸಿಬಿಐ ಅಧಿಕಾರಿಗಳಿಗೆ ಸೂಚಿಸಿದ್ದರು. ಇದರಿಂದ ಧಾರವಾಡದಿಂದ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಹೊಸ ಸಿಎಆರ್ ಮೈದಾನಕ್ಕೆ ವಿನಯ ಕುಲಕರ್ಣಿಯನ್ನು ಕರೆದುಕೊಂಡು ಬಂದಿರುವ ಸಿಬಿಐ ಅಧಿಕಾರಿಗಳು ತನಿಖೆ ಮಾಡ್ತಾಯಿದ್ದಾರೆ. ಹುಬ್ಬಳ್ಳಿಗೆ ಬರುತ್ತಿದ್ದಂತೆ ಸಿಬಿಐ ಅಧಿಕಾರಿಗಳು ಹೊಟೇಲ್ ನಿಂದ ಉಪಹಾರ ತರಿಸಿ ಕೊಟ್ಟರು.
ಇವೆಲ್ಲದರ ನಡುವೆ ಸಿಎಆರ್ ಮೈದಾನದ ಸುತ್ತ ಮುತ್ತಲೂ ಸಾಕಸ್ಟು ಪ್ರಮಾಣದಲ್ಲಿ ಪೊಲೀಸ್ ಭದ್ರತೆಯನ್ನು ಮಾಡಲಾಗಿದ್ದು, ಇಲಾಖೆಯ ಅಧಿಕಾರಿಗಳಿಗೆ ಮಾತ್ರ ಒಳಗಡೆ ಬರಲು ಅವಕಾಶವನ್ನು ಕಲ್ಪಿಸಲಾಗಿದೆ. ಸಧ್ಯ ತನಿಖೆಯನ್ನು ಸಿಬಿಐ ಅಧಿಕಾರಿಗಳು ಮಾಡುತ್ತಿದ್ದು ನ್ಯಾಯಾಲಯದ ಸೂಚನೆಯ ಹಿನ್ನಲೆಯಲ್ಲಿ ಮಧ್ಯಾಹ್ನ 3 ಘಂಟೆ 30 ನಿಮಿಸಕ್ಕೇ ವಿನಯ ಕುಲಕರ್ಣಿ ಕುಟುಂಬದವರ ಭೇಟಿಗೆ ಅವಕಾಶವನ್ನು ಸಿಬಿಐ ಅಧಿಕಾರಿಗಳು ನೀಡಿದ್ದಾರೆ. ಇನ್ನು ಇದರೊಂದಿಗೆ ವಿನಯ ಕುಲಕರ್ಣಿ ಆಪ್ತ ಸಹಾಯಕ ಸೋಮಲಿಂಗ ನ್ಯಾಮಗೌಡನನ್ನು ಧಾರವಾಡದಿಂದ ಹುಬ್ಬಳ್ಳಿಗೆ ತನಿಖೆಗಾಗಿ ಕರೆದುಕೊಂಡು ಹೋಗಿದ್ದಾರೆ. ಇತ್ತ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ವಿನಯ ಕುಲಕರ್ಣಿ ಮನೆ ಸೇರಿದಂತೆ ಧಾರವಾಡದಲ್ಲಿ ನೀರವ ಮೌನ ಆವರಿಸಿದೆ.