ಹುಬ್ಬಳ್ಳಿ: ಶಾಂತವಾಗಿದ್ದ ಅವಳಿ ನಗರದಲ್ಲಿ ಮತ್ತೆ ಚಾಕು ಇರಿತ ಸದ್ದು ಮಾಡಿದೆ. ಇಬ್ಬರು ಯುವಕರ ಮೇಲೆ ಎಲ್ಲೆಂದರಲ್ಲಿ ರಾತ್ರೋ ರಾತ್ರಿ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹೌದು.. ಈ ಎರಡು ಘಟನೆಗಳಿಗೆ ಸಾಕ್ಷಿಯಾಗಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿ. ಶಾಂತವಾಗಿದ್ದ ನಗರದ ಎರಡು ಕಡೆಗಳಲ್ಲಿ ಚಾಕು ಇರಿತವಾಗಿವೆ. ಸ್ಥಬ್ದವಾಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಚಾಕುಗಳು ಸದ್ದು ಮಾಡಿವೆ. ನಗರದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಶೋಯೆಬ್ ಅಬ್ಬನ್ನವರ (24) ಎಂಬ ಯುವಕನಿಗೆ ದುಷ್ಕರ್ಮಿಗಳು ಚಾಕು ಇರಿದ್ದಿದ್ದಾರೆ. ತೊಡೆಯ ಹಿಂದಿನ ಭಾಗದಲ್ಲಿ ಚಾಕು ಹಾಕಿದ್ದು ಬಲವಾಗಿ ಪೆಟ್ಟು ಬಿದ್ದಿರುವ ಶೊಯೇಬ್ ಚಾಕುವಿನೊಂದಿಗೆ ಕಿಮ್ಸ್ ಆಸ್ಪತ್ರೆಗೆ ಬಂದು ದಾಖಲಾಗಿದ್ದಾನೆ. ಇನ್ನೂ ಇತ್ತ ನಗರದ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಚಾಕು ಇರಿತ ಪ್ರಕರಣವಾಗಿದ್ದು ಮಾಧವ ನಗರದಲ್ಲಿ ಘಟನೆ ನಡೆದಿದೆ. 22 ವಯಸ್ಸಿನ ರಮೇಶ ಕಟ್ಟಿಮನಿ ಎಂಬ ಯುವಕನಿಗೆ ಚಾಕು ಇರಿಯಲಾಗಿದ್ದು, ಪಕ್ಕಡಿ ಮತ್ತು ಎದೆ ಭಾಗದಲ್ಲಿ ಚಾಕು ಇರಿತ ಮಾಡಲಾಗಿದೆ. ನಗರದಲ್ಲಿ ಒಂದೇ ದಿನ ರಾತ್ರಿಯಲ್ಲಿ ಎರಡು ಕಡೆಗಳಲ್ಲಿ ಚಾಕು ಇರಿತಗಳಾಗಿದ್ದು ಮಾಹಿತಿಯನ್ನು ಪಡೆದುಕೊಂಡಿರುವ ಹಳೇ ಹುಬ್ಬಳ್ಳಿ ಮತ್ತು ಅಶೋಕ ನಗರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಚಾಕು ಇರಿದು ಎಸ್ಕೇಫ್ ಆಗಿರುವ ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.