ಬೆಳಗಾವಿ: ಮಾಜಿ ಮಂತ್ರಿ ವಿನಯ ಕುಲಕರ್ಣಿ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಮತ್ತೆ ರೆಕ್ಕೆ ಪುಕ್ಕ ಬಂದಿದೆ. ಸಚಿವ ರಮೇಶ್ ಜಾರಕಿಹೊಳಿಯೇ ವಿನಯ ಕುಲಕರ್ಣಿಗೆ ಬಿಜೆಪಿಗೆ ಬರುವಂತೆ ಆಹ್ವಾಸಿದ್ದಾರೆ. ಅವರು ಕರೆದ್ರು ನಾನು ಬರಲ್ಲ ಅಂತಾ ಕೈ ಮುಗಿದೆ ಅಂತಾ ವಿನಯ ಕುಲಕರ್ಣಿ ಹೇಳಿದ್ದಾರೆ. ಗೋಕಾಕ ಸಾಹುಕಾರನ ಈ ನಡೆ ಬಿಜೆಪಿ ಪಾಳ್ಯದಲ್ಲಿ ಸಂಚಲನ ಮೂಡಿಸಿದೆ.
ಹೌದು.. ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲದ ವಾಸನೆ ಬಡಿಯುತ್ತಿದೆ. ಕಳೆದ ಕೆಲ ದಿನಗಳಿಂದ ಮಾಜಿ ಸಚಿವ ವಿನಯ ಕುಲಕರ್ಣಿ ಬಿಜೆಪಿ ಸೇರ್ತಾರೆ. ದೆಹಲಿಯಲ್ಲಿ ಬಿಜೆಪಿ ಸೇರಲು ಕದತಟ್ಟಿದ್ದಾರೆ ಎಂಬ ಮಾತುಗಳು ಚಾಲ್ತಿಯಲ್ಲಿತ್ತು. ಈಗ ಬಿಜೆಪಿ ಸರ್ಕಾರದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರೇ ವಿನಯ ಕುಲಕರ್ಣಿ ಅವರನ್ನ ಬಿಜೆಪಿ ಬರುವಂತೆ ಆಫರ್ ನೀಡಿದ್ದಾರೆ. ಇಂದು ಬೆಳಗಾವಿ ಸುವರ್ಣ ವಿಧಾನ ಸೌಧ ಮುಂದೆ ಪಂಚಮಸಾಲಿ ಸಮುದಾಯದಕ್ಕೆ ಮೀಸಲಾತಿ ನೀಡುವಂತೆ ಹೋರಾಟ ನಡೆಯಿತು. ಕೂಡಲಸಂಗಮ ಬಸವ ಜಯಮೃತ್ಯುಂಜ ಸ್ವಾಮೀಜಿ ಸಮ್ಮುಖದಲ್ಲಿ ಸಚಿವ ಜಾರಕಿಹೊಳಿಗೆ ವಿನಯ ಕುಲಕರ್ಣಿ ಸಮುದಾಯದ ಪರವಾಗಿ ಮನವಿ ಅರ್ಪಿಸಿದ್ರು. ಅಲ್ಲದೇ ನಮ್ಮ ಸಮುದಾಯದ ಮನವಿಗೆ ಸ್ಪಂದಿಸುವಂತೆ ವಿನಯ ಕುಲಕರ್ಣಿ ಮನವಿ ಮಾಡಿದ್ರು. ಆಗ ಸಚಿವ ರಮೇಶ್ ಜಾರಕಿಹೊಳಿ ತಾವು ಧರಿಸಿದ್ದ ಮಾಸ್ಕ ತೆಗೆದು, ಮಾಜಿ ಸಚಿವ ವಿನಯ ಕುಲಕರ್ಣಿನಿಗೆ ನೀನೆ ಬಿಜೆಪಿಗೆ ಬರ್ತಿಯಲ್ಲಾ ಎಂದು ಹೇಳಿದ್ರು. ವೇದಿಕೆಯಲ್ಲಿದ್ದ ಸ್ವಾಮೀಜಿ, ಬಿಜೆಪಿ ನಾಯಕರು ಸೇರಿ ವಿನಯ ಕುಲಕರ್ಣಿ ಒಂದು ಕ್ಷಣ ಕಕ್ಕಾಬಿಕ್ಕಿ ಆಗ್ತಾರೆ.
ಇನ್ನೂ ರಮೇಶ್ ಜಾರಕಿಹೊಳಿ ಬಿಜೆಪಿ ಆಹ್ವಾನ ಕೊಟ್ಟ ಬಗ್ಗೆ ಮಾಜಿ ವಿನಯ ಕುಲಕರ್ಣಿ ಮಾಧ್ಯಮದಗಳಿಗೆ ಪ್ರತಿಕ್ರಿಯೆ ನೀಡಿದ್ರು. ಸಚಿವ ರಮೇಶ ಕುಲಕರ್ಣಿ ನನಗೆ ಬಿಜೆಪಿಗೆ ಬಾ ಅಂತಾ ಕರದ್ರು. ನಾನು ಒಲ್ಲೆ ಅಂದೆ, ನಾನು ಒಲ್ಲೆ ಅಂತಾ ಕೈ ಮುಗಿದೆ. ನಾನು ಕಾಂಗ್ರೆಸ್ ನಲ್ಲಿ ಆರಾಮಾಗಿದ್ದೇನೆ. ಎಲ್ಲಿಯೂ ಹೋಗಲ್ಲ. ನಾನು ಬಿಜೆಪಿ ಹೋಗೊ ವಿಚಾರ ಅದು ಮಾಧ್ಯಮಗಳ ಸೃಷ್ಟಿ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ.
ಒಟ್ಟಿನಲ್ಲಿ ಮೀಸಲಾತಿ ಹೋರಾಟದ ವೇದಿಕೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿಗೆ ಬಿಜೆಪಿ ಆಫರ್ ಕೊಟ್ಟಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಉಪ ಚುನಾವಣೆ ಬಳಿಕ ಮತ್ತೆ ರಾಜ್ಯದಲ್ಲಿ ರಾಜಕೀಯ ದೃವೀಕರಣ ಆಗುತ್ತಾ ಎನ್ನುವ ಅನುಮಾನಗಳು ಬಿಜೆಪಿ ನಾಯಕರ ನಡೆಯಿಂದ ದಟ್ಟವಾಗುತ್ತಿದೆ.