ಕೂಗು ನಿಮ್ಮದು ಧ್ವನಿ ನಮ್ಮದು

ಅಮ್ಮನ ಬೆತ್ತಲೆ ಫೋಟೊ ತೆಗೆದು ಎಲ್ಲರಿಗೂ ಕಳಿಸಿದ ಮಗು: ಆನ್ಲೈನ್ ಕ್ಲಾಸ್ ತಂದ ಪಜೀತಿಗೆ ಶಾಕ್ ಆದ ತಾಯಿ

ನ್ಯೂಯಾರ್ಕ್: ಇತ್ತೀಚಿನ ಆಧುನಿಕ ಯುಗದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಮೊಬೈಲ್ ಗೀಳಿಗೆ ಅಂಟಿಕೊಂಡು ಬಿಟ್ಟಿದ್ದಾರೆ. ಈಗ ಕೊರೊನಾ ಹಾವಳಿಯಲ್ಲಂತೂ ಆನ್ಲೈನ್ ಕ್ಲಾಸ್ ಮಕ್ಕಳಿಗೆ ನೆಪವಾಗಿದೆ ಅಂದ್ರೆ ತಪ್ಪಾಗಲ್ಲ. ಆನ್ಲೈನ್ ಕ್ಲಾಸ್ ಗೆ ತೆಗೆದುಕೊಂಡ ಮೊಬೈಲ್, ಕ್ಲಾಸ್ ಗಿಂತ ಮಕ್ಕಳ ಆಟಾಟೋಪಕ್ಕೆ ಜಾಸ್ತಿ ಬಳಕೆಯಾಗ್ತಿದೆ. ನೀವೂ ಕೂಡ ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ನೂರು ಭಾರಿ ಯೋಚನೆ ಮಾಡಿ. ಯಾಕೆಂದರೆ ಈಗ ಆನ್ಲೈನ್ ಕ್ಲಾಸಿನ ಕಾರಣಕ್ಕೆ ಮಕ್ಕಳ ಕೈಗೆ ಮೊಬೈಲ್ ಕೊಡುವುದು ಸಹಜ ಹಾಗೂ ಅನಿವಾರ್ಯ ಕೂಡ ಆಗಿದೆ. ಹೀಗೆ ಆನ್ಲೈನ್ ಕ್ಲಾಸ್ ಗೆ ಅಂತ ಮಗು ಕೈಯಲ್ಲಿ ನೀಡಿದ ಮೊಬೈಲ್ ಇದೀಗ ದೊಡ್ಡ ಎಡವಟ್ಟಿಗೆ ಕಾರಣವಾಗಿದೆ. ಹೌದು.. ಅಮೇರಿಕದಲ್ಲಿ ಮಗುವೊಂದು ಮಾಡಬಾರದ ಕೆಲಸ ಮಾಡಿ ಬಿಟ್ಟಿದೆ. ಆನ್ಲೈನ್ ಕ್ಲಾಸ್ ವೇಳೆ ಮೊಬೈಲ್ ನಲ್ಲಿ ತನ್ನ ಅಮ್ಮನ ಬೆತ್ತಲೆ ಫೋಟೋ ತೆಗೆದಿದೆ. ಅಷ್ಟೇ ಆಗಿದ್ರೆ ಬಹುಷಃ ಇವತ್ತು ಈ ಸುದ್ದು ಆಗುತ್ತಿರಲಿಲ್ಲವೆನೋ.. ತನ್ನ ತಾಯಿಯ ಬೆತ್ತಲೆ ಫೋಟೊ ತೆಗೆದ ಮಗು, ತನ್ನ ತಾಯಿಯ ಸಹೋದ್ಯೋಗಿಗಳು ಸೇರಿದಂತೆ ಮೊಬೈಲ್ ಕಾಂಟ್ಯಾಕ್ಟ್ ನಲ್ಲಿ ಇರೋ ಎಲ್ಲರಿಗೂ ಫೋಟಿವನ್ನು ಕಳುಹಿಸಿದೆ. ಅಮೆರಿಕದ ಓವಿಯೋ ನಗರದಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಟ್ರೆಂಡ್ ಸೃಷ್ಟಿಯಾಗಲು ಕಾರಣವಾಗಿದೆ.

ಅಮೆರಿಕದ ಓವಿಯೋದಲ್ಲಿ ವಾಸಮಾಡುವ “ಎಮಿಲಿ ಸ್ಮಿತ್” ಎಂಬ 30 ವರ್ಷದ ಮಹಿಳೆ ತನ್ನ ಮಗುವಿನ ಕೈಗೆ ಮೊಬೈಲ್ ನೀಡಿ ಮುಜುಗರ ತರಿಸಿಕೊಂಡಿದ್ದಾರೆ. ಸ್ನಾನ ಮುಗಿಸಿಕೊಂಡು ಬಂದ ಎಮಿಲಿ ಸ್ಮಿತ್ ಬೆತ್ತಲೆಯಾಗಿಯೇ ನಿಂತು ಬಟ್ಟೆ ಒಣಗಿಸುತ್ತಿರುವಾಗ, ಅದನ್ನು ಗಮನಿಸಿದ ಮಗು ಫೋಟೋ ಕ್ಲಿಕ್ಕಿಸುವ ಮೂಲಕ ಎಲ್ಲರಿಗೂ ಶೇರ್ ಮಾಡಿದೆ. ಫೋಟೊ ಮೆಸೇಜ್ ಸೆಂಡ್ ಕೂಡ ಆಗಿದೆ. ಇದಾದ ಮೇಲೆ ಎಮಿಲಿ ಸ್ಮಿತ್ ಮೊಬೈಲ್ ಗೆ ಆಕೆಯ ಸಹೋದ್ಯೋಗಿಯೊಬ್ಬರು ಮೆಸೇಜ್ ಕಳಿಸಿದ್ದಾರೆ. ಅದರಲ್ಲಿ ಫೋಟೋ ಕಳಿಸಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ಆದ್ರೆ ಮಾಡೋದೇನು.. ಅಷ್ಟರಲ್ಲಿ ಕಾಲ ಮಿಂಚಿಹೋಗಿತ್ತು. ತನ್ನ ಬೆತ್ತಲೆ ಫೋಟೋ ಅಷ್ಟರಲ್ಲಿ ಎಲ್ಲರ ಮೊಬೈಲ್ ಗೂ ಹೋಗಿದ್ದು, ಮಹಿಳೆಗೆ ಗೊತ್ತಾಗಿದೆ. ಇನ್ನು ಕೆಲವರಿಗೆ ಮಹಿಳೆಯ ಫೋಟೋ ಬದಲು ಮನೆಯ ಗೊಡೆ ಮತ್ತು ಫ್ಯಾನ್ ಫೋಟೋಸ್ ಸೆಂಡ್ ಆಗಿದೆ. ಇಷ್ಟೆಲ್ಲಾ ಆದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಹಂಚಿಕೊಂಡ ಏಮಿಲಿ ಸ್ಮಿತ್, ತಮಗೆ ಅಪಮಾನ ಮತ್ತು ಮುಜುಗರ ಒಟ್ಟೊಟ್ಟಿಗೆ ಆಗಿದೆ. ಏನು ತಿಳಿಯದೇ ಆದ ಘಟನೆಯಿಂದ ಧೈರ್ಯ ಗೆಡಬಾರದು ಎಂದು ಹೇಳಿಕೊಂಡಿದ್ದಾರೆ.

error: Content is protected !!