ಕೂಗು ನಿಮ್ಮದು ಧ್ವನಿ ನಮ್ಮದು

ಕುಷ್ಟಗಿ ಪೊಲೀಸರ ಕಾರ್ಯಾಚರಣೆ: ಅಕ್ರಮ ಜೂಜು ಅಡ್ಡೆ ಮೇಲೆ ದಾಳಿ: 7 ಜನ ಆರೋಪಿಗಳ ಬಂಧನ

ಕೊಪ್ಪಳ: ಅಕ್ರಮ ಇಸ್ಪೇಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೇನೂರು ಬಳಿ ದಾಳಿ ನಡೆಸಿ, ಜೂಜಾಟದಲ್ಲಿ ತೊಡಗಿದ್ದ 7 ಜನರನ್ನು ಬಂಧಿಸಿದ್ದಾರೆ. ಮುದೆನೂರು ಬಳಿಯ ಮುದ್ದಲ್‌ಗುಂಡಿ ರಸ್ತೆ ಬಳಿಯ ತೆರೆದ ಭೂಮಿಯಲ್ಲಿ ನಡೆಸುತ್ತಿದ್ದ ಜೂಜು ಅಡ್ಡೆ ಮೇಲೆ ಈ ದಾಳಿ ನಡೆದಿದೆ. ಇನ್ನು ಕುಷ್ಟಗಿ ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ನೇತೃತ್ವದಲ್ಲಿ‌ ಕುಷ್ಟಗಿ ಪಿಎಸ್ಐ ಚಿತ್ರಂಜನ್, ತಾವರಗೇರಾ ಪಿಎಸ್ಐ ಗೀತಾಂಜಲಿ ತಂಡದಿಂದ ನಡೆದ ದಾಳಿ ವೇಳೆ 1,08,850 ರೂಪಾಯಿ ನಗದು ಹಣ, 02 ಸ್ವಿಫ್ಟ್ ಡಿಸೈರ್ ಕಾರುಗಳು, 11 ಮೋಟರ್ ಬೈಕ್‌ಗಳು ಮತ್ತು 07 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು, ಚಂದಪ್ಪ ಹಿರೇಮನಿ, ಬಸವರಾಜ್ ರಾಥೋಡ್, ಅಮರೇಶ್ ಹಟ್ಟಿಗುದ್ದಾ, ವೀರೇಶ್ ಹೊಸಮಾನಿ, ರುದ್ರಗೌಡ ಪೊಲೀಸ್ ಪಾಟೀಲ್, ಹನುಮಂತ, ಪ್ರಕಾಶ್ ರಾಥೋಡ್ ಬಂಧಿತ ಆರೋಪಿಗಳಾಗಿದ್ದಾರೆ. ಸದ್ಯ ದಾಳಿ ಸಂಬಂಧ ಪ್ರಕರಣ ದಾಖಲಾಗಿದ್ದು, ಕುಷ್ಟಗಿ ವಿಭಾಗದಲ್ಲಿನ ಅಕ್ರಮ ಅಡ್ಡೆಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಇಸ್ಪೀಟ್ ದಂಧೆಕೊರರಲ್ಲಿ ನಡುಕ ಶುರುವಾಗಿದೆ. ಹಲವು ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ನಡೆಯುತ್ತಿದ್ದ ಈ ಜೂಜು ಅಡ್ಡೆಗೆ ಸುತ್ತಮುತ್ತ ಗ್ರಾಮಗಳಿಂದ ಜೂಜುಕೋರರು ಬರುತ್ತಿದ್ದರು ಎನ್ನಲಾಗಿದೆ.

error: Content is protected !!