ಕೂಗು ನಿಮ್ಮದು ಧ್ವನಿ ನಮ್ಮದು

ಹೆದರಿಸಿ ಬೆದರಿಸಿ ರಾಜಕಾರಣ ಮಾಡೋದು ಕನಕಪುರ ಸ್ಟೈಲ್: ಡಿಕೆಶಿಗೆ ಸಚಿವ ಸಿ.ಟಿ.ರವಿ ಟಾಂಗ್

ಚಿರ್ತದುರ್ಗ: ಹೆದರಿಸಿ ಬೆದರಿಸಿ ರಾಜಕಾರಣ ಮಾಡುವುದು ಕನಕಪುರ ಸ್ಟೈಲ್. ಡೆಮಾಕ್ರಸಿಯಲ್ಲಿ ಹೆದರಿಸಿ ಬೆದರಿಸಿ ರಾಜಕಾರಣ ಮಾಡೋಕೆ ಆಗಲ್ಲ. ಜಾತಿನಿಂದನೆ ಪ್ರಕರಣ ದಾಖಲು ಮಾಡಿಸುವುದು, ಮನೆ ಮೇಲೆ ಕಲ್ಲು ಹೊಡೆಸುವುದು ಬಿಜೆಪಿ ಸಂಸ್ಕೃತಿಯಲ್ಲ. ಇದು ಕನಕಪುರ ಸ್ಟೈಲ್ ಈ ಸಂಸ್ಕೃತಿಯನ್ನು ರಾಜ್ಯದಾದ್ಯಂತ ವಿಸ್ತರಿಸಲು ನಾವು ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದಾರೆ. ಸಿ.ಟಿ.ರವಿ ಅವರು ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ‌ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದು ನಂತರ ಮಾಧ್ಯಗಳೊಂದಿಗೆ ಮಾತನಾಡಿದ್ರು. ಸಿದ್ದರಾಮಯ್ಯ ತಾವು ಸಿಎಂ ಆಗಿದ್ದಾಗ ಮಾಡಿದ್ದನ್ನು ನೆನಪಿಸಿಕೊಂಡು ಆರೋಪವನ್ನು ಮಾಡುತ್ತಿದ್ದಾರೆ.

ಪರ್ಸೆಂಟೇಜ್ ಸರ್ಕಾರ ಇದ್ದಿದ್ದು ಅವರದ್ದು. ಅಂದು ಗ್ರಾಂಟ್, ಎಲ್ ಓಸಿ ತೆಗೆದುಕೊಳ್ಳಲು ಲಂಚ ಕೊಡಬೇಕಾದ ಸ್ಥಿತಿ ಇತ್ತು. ಇದು ನಮ್ಮ ಸಂಸ್ಕೃತಿ ಅಲ್ಲ. ಒಂದು ಕಾಲದಲ್ಲಿ ವಿಧಾನ ಪರಿಷತನ್ನು ವ್ಯಾಪಾರಕ್ಕಿಟ್ಟ ಪಕ್ಷಗಳಿದ್ದವು. ರಾಜ್ಯ ಸಭೆಯನ್ನು ಕುದುರೆ ವ್ಯಾಪಾರಕ್ಕಿಟ್ಟ ಪಕ್ಷಗಳನ್ನು ನೋಡಿದ್ದೆವೆ. ಬಿಜೆಪಿಗೆ ಬಂದವರೆಲ್ಲಾ ಬಿಜೆಪಿಯವರೆ. ನೆರೆ ಸಂತ್ರಸ್ತರ ಪರಿಸ್ಥಿತಿಯನ್ನು ಅವಲೋಕಿಸಲು ಸಿಎಂ ಹೋಗುತ್ತಿದ್ದಾರೆ. ಸಂತ್ರಸ್ತರ ನೆರವಿಗೆ ಬರುವುದು ನಮ್ಮ ಜವಾಬ್ದಾರಿ. ಅದರಲ್ಲಿ ಲೋಪವಾಗಿದ್ದರೆ ನಾವು ತಿದ್ದಿಕೊಳ್ಳುತ್ತೆವೆ. ಸಂತ್ರಸ್ತರ ನೆರವಿಗೆ ಬರುವುದು ನಮ್ಮ ಆದ್ಯತೆ. ಯಾವುದೇ ಕಾರಣಕ್ಕೂ ನಾವು ಕೈ ಬಿಡುವುದಿಲ್ಲ. ಇನ್ನು ಕಾಡು ಗೊಲ್ಲರ ಅಭಿವೃದ್ದಿ ನಿಗಮ ಸ್ಥಾಪಿಸಿ ಅದರಿಂದ ಗೊಲ್ಲರ ಮಧ್ಯೆ ಗೊಂದಲ ಉಂಟು‌ಮಾಡುವುದು ನಮ್ಮ ಉದ್ದೇಶವಲ್ಲ. ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವುದು ನಮ್ಮ ಕರ್ತವ್ಯ ಎಂದು‌ ಇದೇ ವೇಳೆ ಸಚಿವ ಸಿ.ಟಿ.ರವಿ ಹೇಳಿದರು.

error: Content is protected !!