ಕೂಗು ನಿಮ್ಮದು ಧ್ವನಿ ನಮ್ಮದು

ನಾಡದ್ರೋಹಿ ಎಂಇಎಸ್ ವಿರುದ್ದ ಬೀದಿಗಿಳಿದ ಕನ್ನಡ ಕಟ್ಟಾಳುಗಳು: ಗೋಕಾಕ್ ನಲ್ಲಿ ಕರವೇ ಪ್ರತಿಭಟನೆ

ಬೆಳಗಾವಿ: ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಮತ್ತೆ ಪುಂಡಾಟ ಶುರು ಹಚ್ಚಿಕೊಂಡಿದೆ. ಭಾಷಾ ವಿವಾದದ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ನಾಡದ್ರೋಹಿಗಳು ನವೆಂಬರ್ 1 ರ ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಕರಾಳ ದಿನಾಚರಣೆಗೆ ಅನುಮತಿ ಕೋರಿದ್ದಾರೆ. ಈ ಮೂಲಕ ಮುಗ್ದ ಮರಾಠಿಗರ ಭಾವನೆಗಳನ್ನು ಕೆದಕುವ ಮೂಲಕ ಭಾಷಾ ರಾಜಕಾರಣ ಮಾಡಲು ಹೊಂಚು ಹಾಕುತ್ತಿರುವ ನಾಡದ್ರೋಹಿಗಳ ವಿರುದ್ಧ ಕನ್ನಡ ಕಟ್ಟಾಳುಗಳು ಸಿಡಿದೆದ್ದಿದ್ದಾರೆ.

ಕರವೇ ಪ್ರತಿಭಟನೆ, ಎಂಇಎಸ್ ಪ್ರತಿಕೃತಿ ದಹನ

ನಾಡದ್ರೋಹಿಗಳ ವಿರುದ್ದ ಗೋಕಾಕ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಗೋಕಾಕ್ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ನಾಡದ್ರೋಹಿ ಎಂಇಎಸ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ನಾಡದ್ರೋಹಿಗಳಿಗೆ ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ನಾಡದ್ರೋಹಿಗಳು ಕರಾಳ ದಿನಾಚರಣೆ ಮಾಡಿದ್ರೆ ಅವರಿದ್ದಲ್ಲಿಗೇ ಹೋಗಿ ನಾಡದ್ರೋಗಿ ಎಂಇಎಸ್ ಗೆ ತಕ್ಕಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ ಕರವೇ ಅಧ್ಯಕ್ಷ ಬಸವರಾಜ್ ಖಾನಪ್ಪನವರ್, ಅಲ್ಲಾಗುವ ಎಲ್ಲಾ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತೆ ಎಂದಿದ್ದಾರೆ.

ಇನ್ನು ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ಶೆಟ್ಟೆಪ್ಪಾ ಗಾಡಿವಡ್ಡರ, ಮುಗುಟ ಪೈಲ್ವಾನ್, ಅಶೋಕ ಬಂಡಿವಡ್ಡರ, ನಿಜಾಮ ನಧಾಪ, ರಮೇಶ ಕಮತಿ, ರಾಮ ಕುಡೆಮ್ಮಿ, ಮಂಜುನಾಥ ಪ್ರಭುನಟ್ಟಿ, ಯಲ್ಲಪ್ಪಾ ಧರ್ಮಟ್ಟಿ, ಶಂಕರಲಿಂಗ ಗಾಡಿವಡ್ಡರ, ಮಾರುತಿ ಗಾಡಿವಡ್ಡರ, ಶಂಕರ ಗಾಡಿವಡ್ಡರ, ಮಹಾಂತೇಶ ಹಿರೇಮಠ, ರಾಜೇಂದ್ರ ಕೆಂಚನಗುಡ್ಡ, ಸತ್ತಾರ ಬೇಪಾರಿ, ವಿಠ್ಠಲ ಹಂಜಿ, ಪ್ರತೀಕ ಪಾಟೀಲ, ಸಂತೋಷ ಕೋಲಕಾರ ಭಾಗವಹಿಸಿದ್ದರು.

error: Content is protected !!