ಶಿರಸಿ: ಸಿದ್ದಾಪುರ ತಾಲೂಕಿನ ಹೆಗ್ಗರಣಿ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಉರುಳಿದೆ. ನಿನ್ನೆ ಗುರುವಾರ ಕೋಡನಮನೆ ಎಂಬಲ್ಲಿ ಸೇತುವೆಯಿಂದ ಕೆಳಗುರುಳಿದ ಕಾರು ನೀರಿನಲ್ಲೇ ಅರ್ಧ ಕಿಲೋ ಮೀಟರ್ ನಷ್ಟು ದೂರ ಕೊಚ್ಚಿಕೊಂಡು ಹೋಗಿದೆ. ಇನ್ನು ಈ ಘಟನೆ ಬುಧವಾರ ರಾತ್ರಿಯೇ ನಡೆದಿದ್ದು ನಿನ್ನೆ ಗುರುವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ. ಕಾರಿನೊಳಗೆ 4 ರಿಂದ 5 ಜನರು ಇದ್ದರು ಎನ್ನಲಾಗುತ್ತಿದ್ದು, ಉಂಚಳ್ಳಿ ಜಲತಾಪಕ್ಕೆ ಹೋಗಿ ವಾಪಾಸ್ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಸಧ್ಯ ಕಾರಿನಲ್ಲಿದ್ದ ಇಬ್ಬರು ಯುವಕರು ಹಾಗೂ ಓರ್ವ ಯುವತಿಯ ಶವಗಳನ್ನು ಹೊರ ತೆಗೆಯಲಾಗಿದ್ದು, ಉಳಿದವರಿಗಾಗಿ ಶೋದಕಾರ್ಯ ಮುಂದುವರೆದಿದೆ. ಇನ್ನು ಅಪಘಾತಕ್ಕಿಡಾದ ಕಾರಿಗೆ ಧಾರವಾಡದ ನೊಂದಣಿ ಸಂಖ್ಯೆಯಿದ್ದು, ಮೃತರನ್ನು ಹುಬ್ಬಳ್ಳಿ ಕೇಶ್ವಾಪುರ ಮೂಲದ ರೋಷನ್, ಅಕ್ಷತಾ, ರೋಷನ್ ಹಾಗೂ ಸುಷ್ಮಾ ಎಂದು ಗುರುತಿಸಲಾಗಿದೆ. ಇನ್ನೊರ್ವ ಯುವತಿಯ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೂವರೂ 25 ವರ್ಷದ ಒಳಗಿನವರಾಗಿದ್ದಾರೆ. ಸ್ಥಳೀಯರು ಹೊಳೆಯಲ್ಲಿ ಕಾರನ್ನು ಗಮನಿಸಿದ್ದರಿಂದ ಘಟನೆ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಆಗಮಿಸಿದ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.