ಕೂಗು ನಿಮ್ಮದು ಧ್ವನಿ ನಮ್ಮದು

ರಾಣಿ ಚನ್ನಮ್ಮ ವಿವಿ ಅವಾಂತರ, ಗೋಲ್ಡ್ ಮೆಡಲಿಸ್ಟ್ ಗಳಿಗೆ ಅವಮಾನ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಆಕ್ರೋಶ

ಬೆಳಗಾವಿ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರತಿಭಾವಂತ ಗೋಲ್ಡ್ ಮೆಡಲಿಸ್ಟ್ ಗಳಿಗೆ ಗೋಲ್ಡ್ ಮೆಡಲ್ ಗಳನ್ನು ನೀಡಿ ಗೌರವಿಸದೆ ವಿದ್ಯಾರ್ಥಿಗಳನ್ನು ತಿರಸ್ಕರಿಸಿ ಅವಮಾನಿಸಿದೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ, ಕೆಪಿಸಿಸಿ ರಾಜ್ಯ ವಕ್ತಾರೆ ಲಕ್ಷ್ಮಿ ಹೆಬ್ಬಾಳಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಜರುಗಿದ್ದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎಂಟನೇಯ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಬೆಳಗಾವಿ ನಗರದ ನಿವಾಸಿ ಸೃಷ್ಟಿ ಗ್ಯಾನಿ ಎಂಬ ವಿದ್ಯಾರ್ಥಿನಿ ಇದೇ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದು, ಕ್ರಿಮಿನಾಲಾಜಿ ಕ್ರಿಮಿನಲ್ ಜಸ್ಟಿಸ್ ವಿಭಾಗದಲ್ಲಿ ಗೋಲ್ಡ್ ಮೆಡಲ್ ನ್ನು ತಗೆದುಕೊಂಡಿದ್ದಳು.

ಆರ್.ಸಿ.ಯು ವಿದ್ಯಾರ್ಥಿಗಳಿಗೆ ನೀಡಿದ ಡಿಡಿ

ಇದೇ ರೀತಿ 22ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯಾ ವಿಭಾಗದಲ್ಲಿ ಗೋಲ್ಡ್ ಮೆಡಲ್ ಗಳಿಗೆ ಅರ್ಹತೆಯನ್ನು ಪಡೆದಿದ್ದಾರೆ. ಹೀಗಿದ್ದರೂ ಕೂಡ ಯಾವುದನ್ನು ಪರಿಗಣಿಸದೇ ಹಾಗೂ ಗೋಲ್ಡ್ ಮೆಡಲ್ ಗಳನ್ನು ನೀಡದೇ ವಿಶ್ವವಿದ್ಯಾಲಯ ತಿರಸ್ಕರಿಸಿ ಅವಮಾನಿಸಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅಸಮಾಧಾನ ಹೊರಹಾಕಿದ್ದಾರೆ. ಈ ವಿದ್ಯಾರ್ಥಿನಿ ಹಾಗೂ ಅವಳ ತಂದೆ ನನ್ನನ್ನು ಭೇಟಿ ಮಾಡಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ತಮಗಾದ ನೋವನ್ನು ವ್ಯಕ್ತಪಡಿಸಿದ್ದು, ಸಮಾಧಾನಕರ ಬಹುಮಾನ ಎಂಬಂತೆ ಪ್ರತಿಯೊಬ್ಬ ಗೋಲ್ಡ್ ಮೆಡಲಿಸ್ಟ್ ಗಳಿಗೆ 1070 ರೂಪಾಯಿಗಳ ಡಿಡಿ ನೀಡಿ ನಿರಾಸೆಗೊಳಿಸಲಾಗಿದೆ. ಹೀಗಾಗಿ ಇದು ನಮ್ಮಲ್ಲಿಯ ಪ್ರತಿಭೆಗಳಿಗೆ ಮಾಡಿದ ಅವಮಾನವಾಗಿದೆ ಎಂದು ಹೆಬ್ಬಾಳಕರ್ ಹೇಳಿದ್ದಾರೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಅಭಿನಂದನೆಯನ್ನು ಸಲ್ಲಿಸಿ‌ ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಕೋರಿದ್ದೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

error: Content is protected !!