ಕೂಗು ನಿಮ್ಮದು ಧ್ವನಿ ನಮ್ಮದು

ಕಲಾಂ ಗೆ.. ಸಲಾಮ್..

-ದೀಪಕ ಶಿಂಧೇ.

ಪೇಪರ್ ಹಾಕುವ, ಮೀನು ಮಾರುವ ಹುಡುಗನೊಬ್ಬ ಆಕಾಶ ಚುಂಬಿಸಿದ್ದ.. ಭಾರತದ ಹೆಸರನ್ನು ಜಗಕ್ಕೆ ಸಾರಿದ್ದ.. ಇವ ನಮ್ಮವನೆಂದು ಹೇಳಲು ಹೆಮ್ಮೆ ಮೂಡಿಸಿದ್ದ..

ಏಕವಚನ ಸಲ್ಲದು ನಿಮಗೆ ಬಹುವಚನದಿ ಗೌರವಿಸುವೆವು. ಅಪರೂಪಕ್ಕೆ ಸಿಗುವ ಅಣಿಮುತ್ತು ನೀವು..

ನಿಮ್ಮ ಸರಳ ಸಜ್ಜನಿಕೆಯನು ಎಂದಿಗೂ ಸ್ಮರಿಸುವೆವು. ಜನುಮದಿನ ಗೌರವದಿ ಶಿರವ ಬಾಗುವೆವು

ಮನುಷ್ಯರಲ್ಲೂ ದೇವರಿದ್ದಾನೆಂದು ತೋರಿಸಿಕೊಟ್ಟವರು ನೀವು. ಕಷ್ಟಗಳ ಮೆಟ್ಟಿ ನಿಂತು ಬೆಳೆದವರು ನೀವು.

ದೇಶಕ್ಕೆ ನಿಮ್ಮ ಕೊಡುಗೆಯದು ಅಪಾರ. ಯಾರೂ ಹೇಳುವದಿಲ್ಲ, ನಿಮ್ಮ ಗೌರವಿಸಲು ನಕಾರ.

ನೆನಪಾಗುತ್ತದೆ ನಮಗೆ ಸಫಾರಿ ಬಟ್ಟೆಯ ಒಳಗೆ
ನಿಮ್ಮ ಅಡಗಿದ ದೇಹ ಅದರೊಳಗಿತ್ತು ಜಗವ ಪ್ರೀತಿಸುವ ಹೃದಯ ಅದಕ್ಕಾಗಿ ನೀವೆನಗೆ ಸಾಕ್ಷಾತ್ತು ದೈವ..

ಮಕ್ಕಳೊಂದಿಗೆ ಮಗುವಾಗುವ ನಯ-ವಿನಯ ನಿಮ್ಮದು. ಸರಳತೆಯ ಸುಂದರ ಬದುಕು ನಿಮ್ಮದು..

ಯುವ ಪೀಳಿಗೆಗೆ ಸದಾ ಸ್ಪೂರ್ತಿಯ ಸೆಲೆ ನೀವು
ತಲೆಬಾಗಿ ನಮಿಸುವೆವು ಇಂದು ನಿಮಗೆ ನಾವು.

ಮನಸ್ಸಿದ್ದರೆ ಮಾರ್ಗ ಎಂದು ತೋರಿಸಿಕೊಟ್ಟ ಮಹಾನುಭಾವರೇ…. ಓರಗೆಯವರನ್ನು ಹುರಿದುಂಬಿಸಿದ ಹರಿಕಾರರು ನೀವು.

ನನ್ನ ದೇಶದ ಹೆಮ್ಮೆಯ ಮುಕುಟಮಣಿ ನೀವು…
ಮಾಜಿ ರಾಷ್ಟ್ರಪತಿ, ಪದ್ಮಭೂಷಣ, ಭಾರತ ರತ್ನರು ನೀವು.

ಇಂದು ಜನುಮ ದಿನ ನಿಮ್ಮದು. ಇರಬೇಕಿತ್ತು ಇನ್ನಷ್ಟು
ದಿನ ನಮ್ಮೊಂದಿಗೆ ನೀವು. ಒಂದು ಕಡೆ ನಿಮ್ಮ ಪಡೆದ ಹರುಷ ನಮ್ಮದು… ಇತಿಹಾಸ ಸ್ಮರಿಸಲಿದೆ ಅಗಲಿಕೆಯ ನೋವು..

ವರದಿಗಾರರು, ಪ್ರಜಾ ಟಿವಿ, ಚಿಕ್ಕೋಡಿ.                    

error: Content is protected !!