ಕೂಗು ನಿಮ್ಮದು ಧ್ವನಿ ನಮ್ಮದು

500-2000 ಮುಖಬೆಲೆಯ ನೋಟು ಪಡೆಯುವಾಗ ಚೆಕ್ ಮಾಡ್ಕೊಳ್ಳಿ: ಯಾಮಾರಿದ್ರೆ ಡಿಸೈನ್ ಡಿಸೈನ್ ಟೋಪಿ ಬಿಳೋದು ಗ್ಯಾರಂಟಿ

ಚಿಕ್ಕಮಗಳೂರು: ಅಂಗಡಿಗೆ ಹೋಗಿ ಚಿಲ್ಲರೆ ಪಡೆಯುವಾಗ ಎಚ್ಚರ…! ಎಚ್ಚರ…! ಲಕ್ಷಾಂತರ ರೂಪಾಯಿ ವ್ಯವಹಾರ ಮಾಡೋವಾಗ ಜೋಪಾನ. ಅದರಲ್ಲೂ 500 ಮತ್ತು 2000 ರೂಪಾಯಿಗಳ ನೋಟ್ ತೆಗೆದುಕೊಳ್ಳಬೇಕಾದರೆ ಒಂದಲ್ಲ-ಎರಡರಲ್ಲ ನಾಲ್ಕೈದು ಬಾರಿ ಚೇಕ್ ಮಾಡಿಕೊಳ್ಳಿ. ಬಿ ಕೇರ್ ಫುಲ್. ನೀವು ಸ್ವಲ್ಪ ಯಾಮಾರಿದ್ರು ನಿಮ್ಗೆ ಡಿಸೈನ್… ಡಿಸೈನ್… ಟೋಪಿ ಗ್ಯಾರಂಟಿ. ನಾವ್ ಸುಮ್ನೆ ಹೆದರಿಸ್ತಿಲ್ಲ. ವ್ಯವಹಾರದಲ್ಲಿ ಮೋಸ ಹೋಗ್ಬೇಡಿ ಅಂತ ಎಚ್ಚರಿಸ್ತಿದ್ದೀವಿ… ಯಾಕೆ ಅಂತೀರಾ ಈ ಸ್ಟೋರಿ ಕಂಪ್ಲೀಟ್ ಓದಿ.

ಒಂದೆಡೆ ಕಾರನ್ನ ರೆಡ್ ಹ್ಯಾಂಡಾಗಿ ಹಿಡಿದಿರೊ‌ ಪೊಲೀಸರು. 500 ಮುಖ ಬೆಲೆಯ ಲಕ್ಷಾಂತರ ರೂಪಾಯಿ ಕ್ಯಾಶ್ ಸೀಜ್. ಇನ್ನೊಂದೆಡೆ 2000 ರೂಪಾಯಿಯ ಲಕ್ಷಾಂತರ ಹಣವೂ ಖಾಕಿಗಳ ಕೈಯಲ್ಲಿ. ಕ್ಯಾಶ್ ಸೀಜ್ ಮಾಡಿದ್ನ ನೋಡಿ ಇಂಗು ತಿಂದ ಮಂಗನಂತೆ ನಿಂತಿರೋ ಖದೀಮರು. ಅಷ್ಟಕ್ಕೂ ಇದು ಅಸಲಿ ಆಟವಲ್ಲ. ಏಕ್ ಮಾರ್ ದೋ ತುಕ್ಡಾ ಅನ್ನೋ ನಕಲಿ ಗೇಮ್. ಅರ್ಥ ಆಗ್ಲಿಲ್ವ. ಇನ್ನೊಮ್ಮೆ ಹೇಳ್ತೀವಿ ಕೇಳಿ.‌ ಇಲ್ಲಿರೋ ಲಕ್ಷಾಂತರ ರೂಪಾಯಿ ಹಣ ಅಸಲಿಯಲ್ಲ. ನಕಲಿ, ಪಕ್ಕಾ ನಕಲಿ. ಹೀಗೆ ನಕಲಿಕೋರರನ್ನ ರೆಡ್ ಹ್ಯಾಂಡಾಗಿ ಬಲೆಗೆ ಹಾಕ್ತಿರೋ ಕಾಫಿನಾಡ ಖಾಕಿಗಳು ನೂರು-ಇನ್ನೂರಲ್ಲ. 500 ಮುಖ ಬೆಲೆಯ 5,50,000 ರೂಪಾಯಿ ನಕಲಿ ನೋಟನ್ನ ಸೀಜ್ ಮಾಡಿದ್ದಾರೆ. ಆ ಖೋಟಾ ಖದೀಮರು ಮಂಗಳೂರಿಂದ ಚಿಕ್ಕಮಗಳೂರಿಗೆ ಹಣ ಸಾಗಿಸ್ತಿದ್ದಾಗ ಅಂದರ್ ಆಗಿದ್ದಾರೆ. ಈ ಖದೀಮರು ಹೋಗ್ತಿದ್ದಿದ್ದು ಅದ್ಯಾವ್ದೊ ರೆಡ್ ಮರ್ಕ್ಯೂರಿಯನ್ನ ಖರೀದಿಸಲಿಕ್ಕಂತೆ. ರೆಡ್ ಮರ್ಕ್ಯೂರಿಯ ಅಸಲಿಯತ್ತೇನೆಂದು ಮತ್ತೊಂದೆಡೆ ಖಾಕಿಗಳು ತನಿಖೆ ನಡೆಸ್ತಿದ್ದಾರೆ. ಸದ್ಯ ಖೋಟಾ ಖದೀಮರನ್ನ ಜೈಲಲ್ಲಿ ಮುದ್ದೆ ಮುರಿಯೋಕೆ ಬಿಟ್ಟಿದ್ದಾರೆ.

ರೆಡ್ ಮರ್ಕ್ಯೂರಿ ಒಂದೆಡೆಯಾದ್ರೆ, ಮತ್ತೊಂದೆಡೆ 2000 ನೋಟಿನ ಪ್ರಿಂಟ್ ಕಥೆ. ಮೂಡಿಗೆರೆಯಲ್ಲಿ ತಂದೆ ಜೊತೆ ಮೆಣಸು, ಏಲಕ್ಕಿ, ಕಾಫಿ ವ್ಯಾಪಾರ ಮಾಡ್ತಿದ್ದ ಪ್ರಮೋದ್ ಹಾಗೂ ತರಕಾರಿ ವ್ಯಾಪಾರಿ ಶಕೀಲ್ ಕೊರೊನಾದಿಂದ ಬ್ಯುಸಿನೆಸ್ ಕೈಕೊಟ್ಟ ಹಿನ್ನೆಲೆ ನೋಟ್ ಪ್ರಿಂಟ್ ಮಾಡೋ ಹೊಸ ವ್ಯವಹಾರಕ್ಕೆ ಇಳಿದಿದ್ರು. ಕಲರ್ ಪ್ರಿಂಟರ್ನಲ್ಲಿ ಗರಿ-ಗರಿ ನೋಟುಗಳನ್ನ ಪ್ರಿಂಟ್ ಮಾಡಿ, ಆ ಹಣವನ್ನ ಚಲಾವಣೆ ಮಾಡಿ ಲಾಭ ಮಾಡಲು ಸಜ್ಜಾಗಿದ್ರು. ಇವ್ರ ಬ್ಯುಸಿನೆಸ್ಸಲ್ಲಿ ಸಣ್ಣ-ಪುಟ್ಟ ನೋಟುಗಳೇ ಇಲ್ಲ. 2000 ರೂಪಾಯಿ ನೋಟಿನ ಮೇಲೆ ಇಬ್ಬರಿಗೂ ಸಿಕ್ಕಾಪಟ್ಟೆ ಪ್ಯಾರ್ ಆಗಿತ್ತು. ಹಾಗಾಗೀ ಅದೇ ನೋಟನ್ನ ಕಲರ್ ಪ್ರಿಂಟ್ ಮಾಡಿ ಜನರನ್ನ ಯಾಮಾರಿಸೋಕೆ ಹೋಗಿದ್ದ ಇಬ್ಬರು ಅಸ್ಸಾಮಿಗಳು ಕಾಫಿನಾಡ ಖಾಕಿಗಳ ಅತಿಥಿಗಳಾಗಿದ್ದಾರೆ. ಒಟ್ಟಾರೆ, ಒಂದೆಡೆ ರೆಡ್ ಮರ್ಕ್ಯೂರಿ ಹಿಂದೆ ಬಿದ್ದು ಮೂವರು ಅಂದರ್ ಆಗಿದ್ರೆ, ಕೊರೊನಾ ನಷ್ಟವನ್ನ ಸರಿದೂಗಿಸೋಕೆ ನೋಟ್ ಪ್ರಿಂಟ್ ಮಾಡೋಕೆ ಹೋಗಿ ಮತ್ತಿಬ್ಬರು ಲಾಕ್ ಆಗಿದ್ದಾರೆ.
ಇಂತವರು ರಾಜ್ಯಾದ್ಯಂತ ಅದೆಷ್ಟೋ ಜನರಿಗೆ ಎಂತೆಂಥಾ ನಕಲಿ ನೋಟ್ ಕೊಟ್ಟು ಯಾಮಾರಿಸಿದ್ದಾರೋ ದೇವ್ರೇ ಬಲ್ಲ. ಯಾವ್ದುಕ್ಕು ನೀವು ವ್ಯವಹಾರ ಮಾಡೋ ಮುನ್ನ ಎಚ್ಚರವಿರಿ. ಇಲ್ದಿದ್ರೆ ಇಂತಹ ಅಸ್ಸಾಮಿಗಳು ನಿಮ್ಗೆ ಟೋಪಿ ಹಾಕೋದ್ರಲ್ಲಿ ಡೌಟೇ ಬ್ಯಾಡ.

error: Content is protected !!