ಬಳ್ಳಾರಿ: ಬಳ್ಳಾರಿಯಲ್ಲಿ ದಂಪತಿ ಸಾವಿನಲ್ಲೂ ಒಂದಾಗುವ ಮೂಲಕ ಈ ಹಿಂದೆ ಸಾವಿನಲ್ಲಿ ಒಂದಾದವರ ಪಟ್ಟಿಗೆ ಸೇರಿದ್ದಾರೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹಾಳ್ಯಾದ ದಂಪತಿ ಸಾವಿನಲ್ಲೂ ಒಂದಾದ ಸತಿ-ಪತಿಯಾಗಿದ್ದಾರೆ. ಕೂಡ್ಲಿಗಿ ಪಟ್ಟಣದ ಹ್ಯಾಳ್ಯಾದ ಓಬಣ್ಣ (58) ಮತ್ತು ಪತ್ನಿ ನಿಂಗಮ್ಮ (47) ಸಾವಿನಲ್ಲೂ ಒಂದಾದ ದಂಪತಿ. ಅನಾರೋಗ್ಯದಿಂದ ಭಾನುವಾರ ರಾತ್ರಿ 8 ಗಂಟೆಗೆ ಪತ್ನಿ ನಿಂಗಮ್ಮ ಮೃತಪಟ್ಟಿದ್ದರು. ಇನ್ನು ಪತ್ನಿಯ ನಿಧನದ ಹಿನ್ನೆಲೆ ಇಡೀ ರಾತ್ರಿ ಭಜನೆ ಮಾಡುವಾಗಲೂ ಜತೆಗಿದ್ದ ಪತಿ ಓಬಣ್ಣ ಸೋಮವಾರ ಬೆಳಿಗಿನ ಜಾವ 4 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. ಈ ಮೂಲಕ ಸಾವಿನಲ್ಲಿ ಒಂದಾದ ಸತಿ-ಪತಿ ಪಾರ್ಥಿವ ಶರೀರ ಅಕ್ಕಪಕ್ಕದಲ್ಲಿ ಹೂಳಿ ಅಂತ್ಯಕ್ರಿಯೆ ನೆರವೇರಿಸಲಾಯಿತು.