ಕೂಗು ನಿಮ್ಮದು ಧ್ವನಿ ನಮ್ಮದು

ಕಾರಿಗೆ ಅಳವಡಿಸಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟ: ಓಮಿನಿ ಕಾರು ಭಸ್ಮ, ಯಾವುದೇ ಜೀವಹಾನಿ ಇಲ್ಲ

ಚಿತ್ರದುರ್ಗ: ಗ್ಯಾಸ್ ಸಿಲಿಂಡರ್ ಸ್ಟೋಟಗೊಂಡು ಓಮಿನಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ವಿಠ್ಠಲ ನಗರದಲ್ಲಿ ಈ ಘಟನೆ ನಡೆದಿದೆ. ಚಳ್ಳಕೆರೆಯ ಸಿಎನ್ಸಿ ಕಾಲೋನಿಯ ಶಬ್ಬಿರ್ ಎಂಬಾತನಿಗೆ ಸೇರಿದ ಓಮಿನಿ ಕಾರು ಇದಾಗಿದ್ದು, ಒಮಿನಿ ಕಾರಿಗೆ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಆಕಸ್ಮಿಕವಾಗಿ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿದೆ.

ಬೆಂಕಿಯಿಂದಾಗಿ ಸುಟ್ಟು ಕರಕಲಾಗಿರುವ ಓಮಿನಿ ಕಾರು ಒಂದು ಕಡೆಯಾದರೇ ಸಿಲಿಂಡರ್ ಸಿಡಿದು ದೂರದ ರಸ್ತೆಯಲ್ಲಿ ಬಿದ್ದಿದೆ. ಇನ್ನು ಸಿಲಿಂಡರ್ ಸ್ಪೋಟಕ್ಕೆ ಸ್ಥಳಿಯರು ಬೆಚ್ಚಿ ಬಿದ್ದಿದ್ದು, ಭಯದಿಂದ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದು, ಅದೃಷ್ಟವಷಾತ್ ಯಾವುದೆ ಜೀವ ಹಾನಿಯಾಗಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಬಂದ ಪಿಎಸ್ಐ ಮಂಜುನಾಥ ಲಿಂಗಾರೆಡ್ಡಿ ಪರಿಶೀಲನೆ ನಡೆಸಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!