ಕೂಗು ನಿಮ್ಮದು ಧ್ವನಿ ನಮ್ಮದು

ನಾಪತ್ತೆಯಾಗಿದ್ದ 19 ರ ಯುವತಿ ಶವವಾಗಿ ಪತ್ತೆ: ಬಟ್ಟೆ ಬೇರೆಡೆ ಎಸೆದು ಶವ ಮಣ್ಣಲ್ಲಿ ಹುತಿಟ್ಟಿದ್ದ ದುಷ್ಕರ್ಮಿಗಳು

ರಾಮನಗರ: ರಾಮನಗರದಲ್ಲಿ ದುಷ್ಕರ್ಮಿಗಳು ತಮ್ಮ ಅಟ್ಟಹಾಸ ಮೇರೆದಿದ್ದಾರೆ. 19 ವರ್ಷದ ಯುವತಿಯನ್ನು ಹತ್ಯೆಗೈದು ಶವ ಮುಚ್ವಿ ಪರಾರಿಯಾಗಿದ್ದಾರೆ. ಅಂದಹಾಗೆ ಇದೇ ಅಕ್ಟೋಬರ್ 8 ರಂದು ಮನೆಯಿಂದ ನಾಪತ್ತೆಯಾಗಿದ್ದ ಯುವತಿ ಇಂದು ಶವವಾಗಿ ಪತ್ತೆಯಾಗಿದ್ದಾಳೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಈ ಧಾರುಣ ಘಟನೆ ನಡೆದಿದ್ದು ಕೊಲೆಯಾದ ಯುವತಿಯನ್ನು 19 ವರ್ಷದ ಹೇಮಲತಾ ಎಂದು ಗುರುತಿಸಲಾಗಿದೆ. ಅಕ್ಟೋಬರ್ 8 ರಂದು ಮನೆಯಿಂದ ನಾಪತ್ತೆಯಾಗಿದ್ದ ಹೇಮಲತಾ ಕುರಿತು ಅಕ್ಟೋಬರ್ 9 ರಂದು ಕುದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದೂರು ನೀಡಲಾಗಿತ್ತು.

ಅದರೆ ದುರ್ದೈವ ಇಂದು ಇಂದು ಮನೆಯ ಸಮೀಪವೇ ಇರುವ ದೊಡ್ಡಪ್ಪನ ಜಮೀನಿನಲ್ಲಿ ಹೇಮಲತಾ ಶವವಾಗಿ ಪತ್ತೆಯಾಗಿದ್ದಾಳೆ. ಯುವತಿಯ ದೊಡ್ಡಪ್ಪ ರವೀಂದ್ರಕುಮಾರ್ ಎಂಬುವವರ ಜಮೀನಿನಲ್ಲಿ ಶವ ಪತ್ತೆಯಾಗಿದ್ದು, ಯುವತಿಯ ಬಟ್ಟೆಗಳನ್ನ ಬೇರೆಡೆ ಎಸೆದು, ಮಣ್ಣಿನಲ್ಲಿ ‌ಮುಚ್ಚಿದ ದುಷ್ಕರ್ಮಿಗಳು ಹಲವು ಅನುಮಾನಗಳಿಗೆ ಎಡೆಮಾಡಿದ್ದಾರೆ. ಯುವತಿಯ ಬಟ್ಟೆಗಳು ಬೇರೆಡೆ ಸಿಕ್ಕಿದ್ದು, ಯಾರಿಗೂ ಗೊತ್ತಾಗಬಾರದು ಅನ್ನೊ ಕಾರಣಕ್ಕೆ ಹಂತಕ ದುರುಳರು ಯುವತಿಯನ್ನು ಮಣ್ಣಿನಲ್ಲಿ ಮುಚ್ಚಿದ್ದಾರೆ. ಇನ್ನು ವಿಷಯ ತಿಳಿದ ಕುದುರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕುಟುಂಬಸ್ಥರು, ಸ್ಥಳಿಯ ಪಂಚರ ಸಮ್ಮುಖದಲ್ಲಿ ಪಂಚನಾಮೆ ನಡೆಸಿದ ಪೊಲೀಸರು, ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರನ್ನು ಬಳಸಿಕೊಂಡು ಹಂತಕರ ಪತ್ತೆಗೆ ಮುಂದಾಗಿದ್ದು, ಆರೋಪಿ ಹಂತಕರನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ರಾಮನಗರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

error: Content is protected !!