ಅಥಣಿ: ಕೇಂದ್ರ ಸರ್ಕಾರ ವಿದ್ಯುತ್ ಇಲಾಖೆಯ ಖಾಸಗಿಕರಣಕ್ಕೆ ಮುಂದಾಗುತ್ತಿರುವದನ್ನು ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದಿಂದ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ವಿದ್ಯುತ್ ಸರಬರಾಜು ಕೇಂದ್ರದ ಮುಂದೆ ಕೈಗೆ ಕಪ್ಪು ಬಣ್ಣದ ಬಟ್ಟೆ ಕಟ್ಟಿಕೊಂಡು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಇದೆ ವೇಳೆ ಅಥಣಿ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಎನ್.ಪಾಟೀಲ್ ಮಾತನಾಡಿ ಕೇಂದ್ರ ಸರ್ಕಾರ ವಿದ್ಯುತ್ ಇಲಾಖೆಯ ಖಾಸಗಿಕರಣಕ್ಕೆ ಮುಂದಾಗುತ್ತಿರುವುದನ್ನು ವಿರೋಧಿಸಿ
ಇಂಜಿನಿಯರ್ ಅಸೋಸಿಯೆಶನ್ ಬೆಂಗಳೂರು ಹಾಗೂ ಅಕೌಂಟೆಂಟ್ ಅಸೋಸಿಯೆಶನ್ ಬೆಂಗಳೂರು ಮತ್ತು ಎಸಿಎಸಿಐ ಅಸೋಸಿಯೆಶನ್ ಹಾಗೂ ಡಿಪ್ಲೋಮಾ ಅಸೋಸಿಯೆಶನ್ ಬೆಂಗಳೂರು ಈ ಎಲ್ಲಾ ಒಕ್ಕೂಟದಿಂದ ಇವತ್ತು ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ಖಂಡಿಸಿ ಇವತ್ತು ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ.
ಕೇಂದ್ರ ಸರ್ಕಾರ ವಿದ್ಯುತ್ ಖಾಸಗಿಕರಣಕ್ಕೆ ಹಾಗೂ 2003 ಕಾಯ್ದೆ ತಿದ್ದುಪಡಿಗೆ ಮುಂದಾಗಿದ್ದಾರೆ. ಇದರಿಂದಾಗಿ ವಿದ್ಯುತ್ ಇಲಾಖೆಯ ನೌಕರರು ಬೀದಿಗೆ ಬಿಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಏನಾದರೂ ಖಾಸಗಿಕರಣಕ್ಕೆ ವಹಿಸಿದರೆ ನೌಕರರ ಹಾಗೂ ಕುಟುಂಬಗಳಿಗೆ ಸರ್ಕಾರದಿಂದ ಸಿಗುವ ಬತ್ತೆ ಕಡಿಮೆ ಮಾಡುವ ಹುನ್ನಾರ ಇದರಲ್ಲಿ ನಡೆಯುತ್ತಿದೆ ಎಂದು ಆರೋಪ ಮಾಡಿದರು. ಮತ್ತು ಗ್ರಾಹಕರಿಗೆ ರೈತರಿಗೆ ಎಲ್ಲಾ ನೌಕರಿಗೆ ಈ ವಿದ್ಯುತ್ ಖಾಸಗಿಕರಣ ಮಾರಕವಾಗುದರಿಂದ ವಿದ್ಯುತ್ ಖಾಸಗೀಕರಣ ಬೇಡವೆಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈ ನಿರ್ಧಾರವನ್ನು ತಕ್ಷಣವೇ ಕೈ ಬಿಡಬೇಕು ಇಲ್ಲವಾದರೆ ನಾವು ಬೀದಿಗಿಳಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.