ನೀವು ಮಾಸ್ಕ್ ಧರಿಸದೇ ಮನೆಯಿಂದ ಹೊರಗೆ ಬರ್ತಿರಾ.?ಹಾಗಾದ್ರೆ ಹುಷಾರ್..!
ಬೆಳಗಾವಿ: ಒಂದು ಕಡೆ ಮಾಸ್ಕ್ ಇಲ್ಲದೇ ಹೊರಗಡೆ ಓಡಾಡಿದ್ರೆ ಮಹಾಮಾರಿ ಕೊರೊನಾ ಸೊಂಕು ತಗುಲುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲ ಅದರ ಜೊತೆಗೆ ಇದೀಗ ನಿವು ಭಾರಿ ಪ್ರಮಾಣದಲ್ಲಿ ದಂಡ ಭರಿಸಬೇಕಾಗುತ್ತೆ. ಹೌದು.. ರಾಜ್ಯ ಸರ್ಕಾರದ ಹೊಸ ನಿಯಮಾವಳಿ ಪ್ರಕಾರ ಬೆಳಗಾವಿ ಮಹಾನಗರದಲ್ಲಿ ನಾಳೆ ಬುಧವಾರ 07-10-2020 ರಿಂದ ದಂಡ ಹಾಕುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಬೆಳಗಾವಿ ಪೊಲೀಸ್ ಆಯುಕ್ತರು ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಬುಧವಾರದಿಂದ ಮಾಸ್ಕ್ ಧರಿಸದೆ ಹೊರಗೆ ಹೋದಲ್ಲಿ ಬರೋಬ್ಬರಿ ಒಂದು ಸಾವಿರ ರೂಪಾಯಿ ದಂಡ ಕಟ್ಟುವುದು ಅನಿವಾರ್ಯವಾಗಲಿದೆ. ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಮಾಸ್ಕ್ ಇಲ್ಲದೆ ಹೊರಗಡೆ ಬಂದ್ರೆ ಐದು ನೂರು ರೂಪಾಯಿ ದಂಡ ಕಟ್ಟೊದು ಅನಿವಾರ್ಯವಾಗಲಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರು ಕೂಡ ಕಾರ್ಯಪ್ರವೃತ್ತರಾಗಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ನೀವು ಮಾಸ್ಕ್ ಇಲ್ಲದೇ ಹೊರಗಡೆ ಬಂದ್ರೆ ಐದು ನೂರು ರೂಪಾಯಿ ದಂಡ ಫಿಕ್ಸ್.ನೀವೆನಾದ್ರು ನಾಳೆಯಿಂದ ಮಾಸ್ಕ್ ಧರಿಸದೇ ಮನೆಯಿಂದ ಹೊರಗಡೆ ಬಂದ್ರೆ ನಿಮಗೆ ಒಂದು ಶಾಕ್ ಕಾದಿರೊದಂತು ಗ್ಯಾರಂಟಿ.
ಸಾರ್ವಜನಿಕರು ಯಾರೂ ಕೂಡ ಮಾಸ್ಕ್ ಧರಿಸದೇ ಮನೆಯಿಂದ ಹೊರಗೆ ಬರಬೇಡಿ. ಕೊರೊನಾ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧಾರಣೆ ಕಡ್ಡಾಯ. ಬೆಳಗಾವಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಇಂದಿನಿಂದ ಮಾಸ್ಕ್ ಧರಿಸದೇ ಓಡಾಡುವವರಿಗೆ 500/- ರೂಪಾಯಿ ದಂಡ ವಿಧಿಸಲಾಗುತ್ತಿದೆ.
ಲಕ್ಷ್ಮಣ ನಿಂಬರಗಿ. ಪೊಲೀಸ್ ವರಿಷ್ಠಾಧಿಕಾರಿ, ಬೆಳಗಾವಿ ಜಿಲ್ಲೆ.
ರಾಜ್ಯಾದ್ಯಂದ ಮಾಸ್ಕ್ ಧರಿಸದೇ ಓಡಾಡುವರಿಗೆ ಇನ್ಮುಂದೆ ದಂಡ ಬೀಳಲಿದೆ. ಹೀಗಾಗಿ ನೀವು ಮನೆಯಿಂದ ಹೊರಡುವ ಮುನ್ನ ಜಾಗರೂಕರಾಗಿ. ಇನ್ನು ಮುಂದೆಯಾದರೂ ಮಾಸ್ಕ್ ಧರಿಸದೇ ಮನೆಯಿಂದ ಹೊರಗೆ ಹೋಗುವ ರೂಢಿಯನ್ನು ತಪ್ಪಿಕೊಂಡು ದಂಡದಿಂದ ನಿಮಗೆ ನೀವೆ ವಿನಾಯ್ತಿ ಪಡೆಯಿರಿ. ಒಂದು ವೇಳೆ ನೀವೆನಾದ್ರು ಮರೆತು ಮಾಸ್ಕ್ ಹಾಕದೇ ಹೊರಗೆ ಹೊದ್ರೆ ಮುಲಾಜಿಲ್ಲದೇ ಪೊಲೀಸರು ದಂಡ ಹಾಕೋದಂತು ಗ್ಯಾರಂಟಿ. ಅಷ್ಟೇ ಅಲ್ಲ ನೀವು ಹಾಕಿರೊ ಮಾಸ್ಕ್ ಮಾರ್ಗ ಮಧ್ಯೆ ಎಲ್ಲಾದರೂ ಬಿದ್ದು ಹೊದಲ್ಲಿ ಬಳಸಿಕೊಳ್ಳಲು ಇನ್ನೊಂದನ್ನು ಮಾಸ್ಕನ್ನು ಪರ್ಯಾಯವಾಗಿ ಇಟ್ಟುಕೊಳ್ಳುವುದೂ ಒಳ್ಳೆಯದೆ. ರಾಜ್ಯದಲ್ಲಿ ಮಹಾಮಾರಿ ಕೊರೊನಾ ರಣಕೇಕೆ ಮುಂದುವರೆದಿದೆ. ಕೊರೊನಾ ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ಕಡಿಮೆ ಇದ್ದಾಗ ಸಾರ್ವಜನಿಕರಲ್ಲಿ ಇದ್ದ ಮುಂಜಾಗೃತೆ, ಪ್ರಕರಣಗಳ ಸಂಖ್ಯೆ ಅತೀ ವೇಗವಾಗಿ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಇಲ್ಲವಾಗಿದ್ದು ಆತಂಕ ಸೃಷ್ಟಿಸುವಂತಿದೆ.
ಮಹಾಮಾರಿಯಿಂದ ಇತ್ತಿಚಿಗೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಎಚ್ಚೆತ್ತುಕೊಳ್ಳದ ಜನತೆ, ಮನೆಯಿಂದ ಹೊರಬಿಳುವಾಗ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ಓಡಾಡುತ್ತಿರೊದು ಮಹಾಮಾರಿ ಕೊರೊನಾಗೆ ಖುದ್ದು ಆಹ್ವಾನ ನೀಡಿದಂತಾಗುತ್ತಿದೆ. ಕೊರೊನಾ ಮಹಾಮಾರಿಯಿಂದ ರಕ್ಷಿಸಿಕೊಳ್ಳುವುದು ಹೇಗೆ ಅನ್ನುವ ತಿಳುವಳಿಕೆಯನ್ನು ಸಾರ್ವಜನಿಕರಿಗೆ ಹಲವು ಆಯಾಮಗಳಲ್ಲಿ ನೀಡಿದ್ರು ಎಚ್ಚೆತ್ತುಕೊಳ್ಳದೇ ಇರೋದು ಮಾತ್ರ ದುರಂತ. ಈ ನಿಟ್ಟಿನಲ್ಲಿ ದಂಡಂ ದಶಗುಣಂ ಎಂಬೆಡೆಗೆ ಹೆಜ್ಜೆ ಹಾಕಿದ ರಾಜ್ಯ ಸರ್ಕಾರ ಇದೀಗ ಮಾಸ್ಕ್ ಧರಿಸದಿದ್ದರೆ ನಗರ ಪ್ರದೇಶದಲ್ಲಿ 1000 ರೂಪಾಯಿ ದಂಡ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂಪಾಯಿ ದಂಡ ವಿಧಿಸುವ ನೂತನ ನಿಯಮವನ್ನು ಇದೇ ಅಕ್ಟೋಬರ್ 1ನೇ ತಾರೀಖಿನಿಂದ ಜಾರಿಗೊಳಿಸಿದೆ.