ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಇದೀಗ ಸಿಬಿಐ ಸಂಕಷ್ಟ ಎದುರಾಗಿದೆ. ಬೆಳಿಗ್ಗೆ 6 ಗಂಟೆಗೆ ಡಿ.ಕೆ.ಶಿವಕುಮಾರ್ ಮನೆ ಮೆಲೆ ಸಿಬಿಐ ದಾಳಿ ನಡೆದಿದೆ. ಬೆಳಿಗ್ಗೆ 6 ಗಂಟೆಯಿಂದ ಸಿಬಿಐ ಡಿಕೆಶಿಗೆ ಸೇರಿದ 14 ಕಡೆ ನಡೆಸಿದ ಶೋಧಕಾರ್ಯದಲ್ಲಿ 50 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. 50 ಲಕ್ಷ ಹಣವನ್ನು ಸಿಬಿಐ ಜಪ್ತಿ ಮಾಡಿಕೊಂಡಿದ್ದಾರೆ. ಇನ್ನು ಸಿಕ್ಕ ನಗದು ಅಕ್ರಮವೋ ಸಕ್ರಮವೊ ಗೊತ್ತಾಗಬೇಕಿದೆ. ಡಿ.ಕೆ.ಶಿವಕುಮಾರ್ ಮನೆ, ಕಚೇರಿ ಸೇರಿ ಅವರಿಗೆ ಸಂಬಂಧಿಸಿದ ಹಲವು ಕಡೆ ಏಕ ಕಾಲಕ್ಕೆ ಈ ದಾಳಿ ನಡೆದಿದೆ. ಇಡಿ ವಿಚಾರಣೆ ಬಳಿಕ ಇದೀಗ ಡಿ.ಕೆ.ಶಿವಕುಮಾರ್ ಗೆ ಸಿಬಿಐ ಸಂಕಷ್ಟ ಎದುರಾಗಿದೆ. ಅಣ್ಣನ ಜೊತೆಗೆ ತಮ್ಮ ಡಿ.ಕೆ.ಸುರೇಶ ಗೂ ಸಂಕಷ್ಟ ಎದುರಾಗಿದೆ. ಡಿ.ಕೆ.ಸುರೇಶ್ ಮನೆ ಮೇಲೂ ಸಿಬಿಐ ದಾಳಿ ನಡೆದಿದೆ. ಬೆಂಗಳೂರಿನ ಸದಾಶಿವ ನಗರದಲ್ಲಿನ ನಿವಾಸ ಸೇರಿ ಕನಕಪುರದಲ್ಲೂ ಈ ದಾಳಿ ನಡೆದಿದೆ.