ಬೆಳಗಾವಿ: ಬೆಳಗಾವಿ ನಗರವನ್ನೇ ಬೆಚ್ಚಿ ಬೀಳಿಸಿದ ಡಬಲ್ ಮರ್ಡರ್ ಕೇಸ್ ಈಗಾ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಡಬಲ್ ಮರ್ಡರ್ ಕೇಸ್ ಹಿಂದಿದೆ ಡಬಲ್ ಪ್ರೇಮ್ ಕಹಾನಿ. ಹಣ ಕೊಟ್ಟು ಹೆಣ ಕೆಡವಲು ಪ್ಲಾನ್ ಹಾಕಿದ್ದ ಪಾಪಿ ಹೆಣ್ಣು ಹಾಗೂ ಸಹೋದರ ಮತ್ತು ಆತನ ಸ್ನೇಹಿತರು ಈಗಾ ಅಂದರ್ ಆಗಿದ್ದು, ಡಬಲ್ ಪ್ರೇಮ್ ಕಹಾನಿಯ ಹಿಂದಿನ ಡಬಲ್ ಮರ್ಡರ್ ಕೇಸ್ ನ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.
ಬೆಳಗಾವಿಯನ್ನೇ ಬೆಚ್ಚಿ ಬೀಳಿಸಿದ್ದ ಡಬಲ್ ಮರ್ಡರ್ ಕೇಸ್ ಆರೋಪಿಗಳು ಅಂದರ್.
ಹಣಕೊಟ್ಟು ಹೆಣ ಕೆಡವಲು ಪ್ಲಾನ್ ಮಾಡಿದ ಪಾಪಿ ಹೆಣ್ಣಿಗೆ ಜೈಲೂಟ ಫಿಕ್ಸ್.
ಚಿಗುರು ಮಿಸೆಯ ಯುವಕರಿಂದ ನಡೆಯಿತು ಡಬಲ್ ಮರ್ಡರ್.
ಬೆಳಗಾವಿ ನಗರದ ಹೊರ ವಲಯದ ಮಚ್ಚೆಯಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣ ಬೆಳಗಾವಿ ನಗರವನ್ನು ಬೆಚ್ಚಿ ಬೀಳಿಸಿತ್ತು. ಆ ಡಬಲ್ ಮರ್ಡರ್ ಪ್ರಕರಣದ ರಹಸ್ಯ ಕೊನೆಗೂ ಬಯಲಾಗಿದೆ. ಮರ್ಡರ್ ರಹಸ್ಯ ಬೇಧಿಸಿದ ಬೆಳಗಾವಿ ಗ್ರಾಮೀಣ ಠಾಣೆ ಸಿಪಿಐ ಸುನಿಲ್ ನಂದೇಶ್ವರ್ ಮತ್ತು ತಂಡ ಇಬ್ಬರು ಮಹಿಳೆಯರ ಡಬಲ್ ಮರ್ಡರ್ ಹಿಂದೆ ಡಬಲ್ ಪ್ರೇಮ್ ಕಹಾನಿ ಇರೋದನ್ನ ಪತ್ತೆ ಹಚ್ಚಿದ್ದಾರೆ. ಹೌದು.. ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ಸೆಪ್ಟೆಂಬರ್ 26 ರಂದು ಸಂಜೆ ನಾಲ್ಕು ಘಂಟೆಗೆ ರೋಹಿಣಿ (21) ಮತ್ತು ರಾಜಶ್ರೀ (21) ಹೆಸರಿನ ಇಬ್ಬರು ಗೃಹಿಣಿಯರು ಬರ್ಬರವಾಗಿ ಹತ್ತೆಯಾಗಿದ್ದು ನಗರವನ್ನು ಬೆಚ್ಚಿ ಬೀಳಿಸಿತ್ತು. ಅವತ್ತು ಕೊಲೆಯಾದ ರೋಹಿಣಿ 6 ತಿಂಗಳ ಗರ್ಭಿಣಿ. ಅವತ್ತು ಮಚ್ಚೆ ಗ್ರಾಮದ ಹೋರವಲಯದಲ್ಲಿ ವಾಕಿಂಗ್ ಮಾಡುತ್ತಿದ್ದಾಗ ದುಷ್ಕರ್ಮಿಗಳು ಕಣ್ಣಿಗೆ ಕಾರದ ಪುಡಿ ಎರಚಿ, ಮಾರಕಾಸ್ತ್ರದಿಂದ ಇರಿದು ಹತ್ಯಗೈದಿದ್ದರು. ಅವಾಗಿನಿಂದ ಹತ್ಯೆಗೈದು ತಲೆ ಮರೆಸಿಕೊಂಡಿದ್ದ ಆರೋಪಿಗಳು ಇಂದು ಅರೆಷ್ಟ ಆಗಿದ್ದಾರೆ.
ಅಷ್ಟಕ್ಕೂ ಈ ಡಬಲ್ ಮರ್ಡರ್ ಮಿಸ್ಟರಿ ಹಿಂದಿರೋದು ಕಲ್ಪನಾ ಎಂಬ ಹಂತಕಿ. ಯುವತಿಯರ ಕೊಲೆಗೆ ಸಂಚು ರೂಪಿಸಿದ ಕಲ್ಪನಾ ಸೇರಿ 5 ಜನ ಹಂತಕರನ್ನ ಅರೆಸ್ಟ್ ಮಾಡಲಾಗಿದೆ. ಇನ್ನು ಕಲ್ಪನಾ (35) ಮಹೇಶ್ (20), ರಾಹುಲ್(19), ರೋಹಿತ (21), ಶಾನೂರ (18) ಬಂಧಿತ ಆರೋಪಿಗಳಾಗಿದ್ದಾರೆ. ಇನ್ನು ಕೊಲೆಯಾದ ರೋಹಿಣಿಯ ಗಂಡ ಗಂಗಪ್ಪ ಹುಲಮನಿಗೆ ಸುಮಾರು ವರ್ಷಗಳಿಂದ ಹಂತಕಿ ಕಲ್ಪನಾ ಪರಿಚಯವಿತ್ತು. ಮುಂಚೆ ಇಬ್ಬರು ಕದ್ದು-ಮುಚ್ಚಿ ಲವ್ವಿ- ಡವ್ವಿ ಹಾಡಿದ್ದುಂಟು. ಈ ಇಬ್ಬರೂ ಬೆಳಗಾವಿ ತಾಲೂಕಿನ ಕಾಳ್ಯಾನಟ್ಟಿ ಗ್ರಾಮದವರು. ಇವರಿಬ್ಬರು ಒಂದೇ ಗ್ರಾಮದವರಾಗಿದ್ದರಿಂದ ಇಬ್ಬರಿಗೂ ಸಲುಗೆಯಿತ್ತು. ಇವರ ಸ್ನೇಹ ಸಲುಗೆಯಿಂದ ಇದ್ದು ಹಣಕಾಸಿನ ನೆರವು ಕೂಡ ನಡೆದಿತ್ತು. ಆರೊಪಿ ಕಲ್ಪನಾ ಕಡೆಯಿಂದ ಗಂಗಪ್ಪ ಸುಮಾರು 3 ಲಕ್ಷದ ವರೆಗೆ ಹಣದ ಸಹಾಯ ಪಡೆದುಕೊಂಡಿದ್ದ. ನಂತರ ಕಲ್ಪನಾಳನ್ನ ಬಿಟ್ಡು ಗಂಗಪ್ಪ ರೋಹಿಣಿಯನ್ನ ಮದುಯಾಗಿದ್ದ. ಗಂಗಪ್ಪ ಹುಲಮನಿ ರೋಹಿಣಿಯನ್ನ ಮದುವೆಯಾದಾಗಿನಿಂದ, ಆರೋಪಿ ಕಲ್ಪನಾಳನ್ನ ಗಂಗಪ್ಪ ದೂರ ಮಾಡಿದ್ದ. ಸ್ನೇಹ ಪ್ರೀತಿ ಕಡಿಮೆಯಾಗಿದ್ದರಿಂದ ಕೋಪಗೊಂಡ ಆರೋಪಿ ಕಲ್ಪನಾ ಹಣ ನೀಡುವಂತೆ ಗಂಗಪ್ಪನನ್ನು ಪೀಡಿಸುತ್ತಿದ್ದಳು. ನಂತರ ಗಂಗಪ್ಪ ಹುಲಮನಿ ತನ್ನಿಂದ ದೂರ ಆಗುತ್ತಾನೆ ಅನ್ನೊ ಭಯದಿಂದ ತನಗೆ ಅಡ್ದಿಯಾಗಿದ್ದ ಗಂಗಪ್ಪನ ಹೆಂಡತಿ ರೋಹಿಣಿಯ ಕೊಲೆಗೆ ಸಂಚು ರೂಪಿಸಿದ್ದಾಳೆ ಕಲ್ಪನಾ.
ಕಲ್ಪನಾ ಸಹೋದರ ಮಹೇಶ್ ನಾಯಕ ಸೇರಿ 5 ಜನರು ಕೊಲೆ ಸಂಚು ರೂಪಿಸಿದ್ದಾರೆ. ಕಲ್ಪನಾ ತಮ್ಮ ಮಹೇಶ ಸ್ನೇಹಿತರಾದ ರಾಹುಲ್ ಮತ್ತು ರೋಹಿತ್ ಹಾಗೂ ಶಾನೂರ್ 5 ಜನರು ಸೇರಿ ರೋಹಿಣಿಯ ಕೊಲೆಗೆ ಸಂಚು ಮಾಡಿ, ಕಳೆದ ಸೆಪ್ಟೆಂಬರ್ 26 ರಂದು ಮಚ್ಚೆ ಗ್ರಾಮದ ಭ್ರಹ್ಮನಗರ ರಸ್ತೆಯಲ್ಲಿ ವಾಕಿಂಗ್ ಮಾಡುವಾಗ ಬೈಕ್ ಮೇಲೆ ಬಂದು ರೋಹಿಣಿ ಕಣ್ಣಿಗೆ ಕಾರದ ಪುಡಿ ಎರಚಿ ಕೊಲೆ ಮಾಡಿದ್ದಾರೆ. ಕಲ್ಪನಾ ಸೂಚನೆ ಮೇರಿಗೆ ಮಿಸೆ ಚಿಗುರದ ಯುವಕರು ರೋಹಿಣಿ ಹತ್ಯೆ ಮಾಡಿದ್ದಾರೆ. ಹತ್ಯೆ ವೇಳೆ ಜೊತೆಗಿದ್ದ ರಾಜಶ್ರೀ ಸಾಕ್ಷಿ ಹೇಳಬಹುದೆಂಬ ಕಾರಣಕ್ಕೆ ಅವಳನ್ನೂ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ ಹಂತಕರು. ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬೆಳಗಾವಿ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಮೂರು ತಂಡ ರಚಿಸಿದ್ದರು. ಎಲ್ಲಾ ಆಯಾಮದಿಂದ ತನಿಖೆ ಮಾಡಿದ ಬೆಳಗಾವಿಯ ಗ್ರಾಮೀಣ ಠಾಣೆಯ ಪೊಲಿಸರು ಆರೋಪಿಗಳನ್ನ ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಡಿದ್ದಾರೆ. ಉಪ್ಪು ತಿಂದವರು ನೀರು ಕುಡಿಲೇ ಬೇಕು ಅನ್ನೊದನ್ನ ಪೊಲೀಸರು ಸಾಬೀತು ಮಾಡಿದ್ದಾರೆ.