ಲಖನೌ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಐತಿಹಾಸಿಕ ತೀರ್ಪು ಪ್ರಕಟಿಸಿದ ಲಖನೌ ಸಿಬಿಐ ವಿಶೇಷ ನ್ಯಾಯಾಲಯ. ಮಸೀದಿ ಧ್ವಂಸ ಪ್ರಕರಣದ 32 ಆರೋಪಿಗಳಿಗೆ ಖುಲಾಸೆ. ಬಾಬ್ರಿ ಮಸಿದಿ ಧ್ವಂಸ ಘಟನೆ ಪೂರ್ವ ನಿಯೋಜಿತ ಕೃತ್ಯ ಅಲ್ಲ. ಬಾಬ್ರಿ ಮಸಿದಿ ಧ್ವಂಸ ಘಟನೆ ಆಕಸ್ಮಿಕವಾಗಿ ನಡೆದಿದೆ. ಆರೋಪಿಗಳ ವಿರುದ್ದ ಯಾವುದೇ ಪ್ರಬಲವಾದ ಸಾಕ್ಷ್ಯಗಳಿಲ್ಲ ಹೀಗಾಗಿ ಬಾಬ್ರಿ ಮಸಿದಿ ಧ್ವಂಸ ಪ್ರಕರಣದ ಆರೋಪಗಳು ನಿರ್ದೋಷಿಗಳು. ಎಲ್.ಕೆ.ಆಡ್ವಾನಿ, ಉಮಾಭಾರತಿ ಮುರಳಿ ಮನೋಹರ ಜೋಷಿಗೆ ಕ್ಲೀನ್ ಚೀಟ್. ಬಿಜೆಪಿ ಹಿರಿಯ ನಾಯಕರಿಗೆ ಬಿಗ್ ರಿಲೀಫ್. ಮಹತ್ವದ ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಎಸ್.ಕೆ.ಯಾದವ್.