ಲಖನೌ-ಬೆಳಗಾವಿ: 1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಪ್ರಕರಣ ಅಂತಿಮ ಘಟ್ಟ ತಲುಪಿದೆ. ಇಂದು ಮದ್ಯಾಹ್ನ 12 ಗಂಟೆಗೆ ಐತಿಹಾಸಿಕ ತೀರ್ಪು ಹೊರಬೀಳಲಿದೆ. ಲಖನೌನ ಸಿಬಿಐ ವಿಶೇಷ ನ್ಯಾಯಾಲಯ ಸುದೀರ್ಘ ವಿಚಾರಣೆ ನಡೆಸಿದ ನಂತರ ಇಂದು ತೀರ್ಪು ಪ್ರಕಟಿಸಲಿದೆ. ಈಗಾಗಲೇ ಕೋರ್ಟ್ ಹಾಲ್ ಗೆ ನ್ಯಾಯಾಧೀಶ ಎಸ್.ಕೆ.ಯಾದವ್ ಆಗಮಿಸಿದ್ದಾರೆ. ಅಯೋಧ್ಯೆ ಸಂಸದ ಲಲ್ಲುಸಿಂಗ್, ಸಂಸದ ಸಾಕ್ಷಿ ಮಹಾರಾಜ್ ಸೇರಿದಂತೆ ಕೆಲವು ಆರೋಪಿಗಳು ಕೋರ್ಟ್ ಹಾಲ್ ಗೆ ಆಗಮಿಸಿದ್ದಾರೆ. ಇನ್ನು ಮಾಜಿ ಉಪ ಪ್ರಧಾನಿ ಲಾಲಕೃಷ್ಣ ಅಡ್ವಾಣಿ, ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ ಜೋಶಿ, ಉಮಾಭಾರತಿ ಸೇರಿದಂತೆ ಒಟ್ಟೂ 32 ಪ್ರಮುಖ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಐತಿಹಾಸಿಕ ತೀರ್ಪು ಕುತೂಹಲ ಮೂಡಿಸಿದೆ. ಇನ್ನು ಬಾಬ್ರಿ ಮಸಿದಿ ಧ್ವಂಸ ಪ್ರಕರಣದ ವಿಚಾರಣೆ ಸುಧಿರ್ಘ ಅವದಿಗೆ ನಡೆದಿದ್ದು ಒಂದು ಕಡೆಯಾದ್ರೆ, ಸುಪ್ರೀಂ ಕೋರ್ಟ್ ನೀಡಿರುವ ಅಯೋಧ್ಯೆ ತೀರ್ಪು ಈ ಪ್ರಕರಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಅಯೋಧ್ಯೆ ತೀರ್ಪಿನಲ್ಲಿ ವಿವಾದಿತ ಸ್ಥಳದಲ್ಲಿ ಮಸಿದಿ ಇರಲಿಲ್ಲ ಅನ್ನೊದು ಸ್ಪಷ್ಟವಾಗಿದ್ದ ಹಿನ್ನೆಲೆಯಲ್ಲಿ ಈ ಐತಿಹಾಸಿಕ ತೀರ್ಪು ತೀವ್ರ ಕುತೂಹಲ ಕೆರಳಿಸಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಭದ್ರತೆಗಾಗಿ ಒಟ್ಟು
4 ಎಸಿಪಿ
19 ಸಿಪಿಐ
24 ಪಿಎಸ್ಐ
78 ಎಎಸ್ಐ
632 ಹೆಚ್.ಸಿ/ಪಿಸಿ
12 ಸಿಎಆರ್ ತುಕಡಿ
02 ಕೆ.ಎಸ್.ಅಸರ್.ಪಿ
ತುಕಡಿಗಳನ್ನು ನಗರದ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ. ಉಳಿದಂತೆ ರಾಷ್ಟ್ರಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.