ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿಯಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ : ವಿವಿಧ ಸಂಘಟನೆಗಳಿಂದ ರಾಜ್ಯ-ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ

ಬೆಳಗಾವಿ: ಗಡಿ ಜಿಲ್ಲೆಯಲ್ಲಿ ಕರ್ನಾಟಕ್ ಬಂದ್ ಗೆ ಬೆಂಬಲಿಸಿ ಬೀದಿ ಚಳುವಳಿ ಜೋರಾಗಿತ್ತು. ಚನ್ನಮ್ಮ ವೃತ್ತ, ರಾಷ್ಟ್ರೀಯ ಹೆದ್ದಾರಿ ಸುವರ್ಣ ವಿಧಾನಸೌಧ ಮುಂದೆ ರೈತರ ಹೋರಾಟದ ಹೌಡ್ರಾಮಾವೇ ನಡೆದು ಹೋಯಿತು. ಕರ್ನಾಟಕ ಬಂದಗೆ ಬೆಳಗಾವಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ಬಂದ್ ಗೆ ಬೆಂಬಲಿಸಿ ಬೆಳಗಾವಿ ಜಿಲ್ಲೆಯಲ್ಲಿ ಬೀದಿ ಚಳುವಳಿ ಜೋರಾಗಿತ್ತು. ಬೆಳಗ್ಗೆಯಿಂದಲೇ ಕನ್ನಡ ಹೋರಾಟಗಾರರು 3 ಗಂಟೆಗಳ ಕಾಲ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟಿಸುವ ಮೂಲಕ ಬಸ್ ಸಂಚಾರ ಸ್ಥಗಿತಗೊಳಿಸಿದರು. ಆ ಬಳಿಕ ಸಂಚಾರ ಆರಂಭವಾಗುತ್ತಿದ್ದಂತೆ ರೈತ ಮುಖಂಡ ಚೂನಪ್ಪ ಪೂಜಾರಿ ಕೆಎಸ್ಆರ್.ಟಿಸಿ ಡಿಸಿ ಮಹಾದೇವ ಮುಂಜಿ ಕಾಲಿಗೆ ಬಿದ್ದು ಬಸ್ ಬಂದ್ ಮಾಡುವಂತೆ ಪರಿಪರಿ ಬೇಡಿಕೊಂಡರು.

ಅನಂತರ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ರೈತರು, ಕನ್ನಡಪರ, ದಲಿತ ಸಂಘಟನೆ ನೂರಾರು ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು. ಇದೇ ಸಂದರ್ಭದಲ್ಲಿ ಟಾಯರಗೆ ಬೆಂಕಿ ಹಚ್ಚಲು ಹೋರಾಟಗಾರರು ಮುಂದಾದಾಗ, ಪೊಲೀಸ್ರು ಮತ್ತು ಕರವೇ ಕಾರ್ಯಕರ್ತರ ಮಧ್ಯೆ ಟಾಯರಗಾಗಿ ಫೈಟ್ ನಡೆಯಿತು. ಟಾಯರ ಕಿತ್ತುಕೊಳ್ಳಲು ಹೋದ ಪೊಲೀಸ ನೆಲಕ್ಕೆ ಬಿದ್ದ ಘಟನೆ ನಡೆಯಿತು. ಅನಂತರ ರೈತರು ನೇಗಿಲು ಹಿಡಿದು ಬಾರಕೋಲ ಚಳುವಳಿ ಮಾಡಿದ್ರೆ. ಅತ್ತ ಮಹಿಳೆಯರು ಕೈಯಲ್ಲಿ ಪೊರಕೆ ಹಿಡಿದು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ರು.

ಇನ್ನು ಬೆಳಗಾವಿ ಚನ್ನಮ್ಮ ವೃತ್ತದಿಂದ ಪ್ರಾರಂಭವಾದ ಸುವರ್ಣ ವಿಧಾನಸೌಧ ಮುತ್ತಿಗೆ ಪ್ರತಿಭಟನಾ ಮೇರವಣಿಗೆ ರಾಷ್ಟ್ರೀಯ ಹೆದ್ದಾರಿ ತಲುಪುತ್ತಿದ್ದಂತೆ ಹೌಡ್ರಾಮಾವೇ ಸೃಷ್ಟಿಯಾಯಿತು. ರಾಷ್ಟ್ರೀಯ ಹೆದ್ದಾರಿಯನ್ನ ಬಂದ್ ಮಾಡಿ ಪ್ರತಿಭಟಿಸಲು ಆರಂಭಿಸಿದ ರೈತರನ್ನ ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದು ಬಸ್ಸಿನಲ್ಲಿ ತುಂಬಲು ಆರಂಭಿಸಿದ್ರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರ ಮದ್ಯೆ ಜಟಾಪಟಿಯೇ ನಡೆಯಿತು. ಪೊಲೀಸ ಸರ್ಪಗಾವಲು ತಪ್ಪಿಸಿ ಹೋರಾಟಗಾರರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೆದ್ದಾರಿಯ ಮೇಲೆ ಓಡಿ ಓಡಿ ಹೋಗಲು ಆರಂಭಿಸಿದ್ರು. ಇದರಿಂದ ಪೊಲೀಸರು ಪ್ರತಿಭಟನಾಕಾರರನ್ನ ನಿಯಂತ್ರಿಸಲು ಹರಸಾಹಸ ಪಡುವಂತಾಯಿತು. ಪೊಲೀಸರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಅವಕಾಶ ಕೊಡದಿದ್ದಾಗ ರೈತನೊರ್ವ ಅರೆಬೆತ್ತಲೇಯಾಗಿ ಡ್ರಾಮಾವನ್ನೇ ಸೃಷ್ಟಿಸಿದರು. ಮಹಿಳಾ ಮತ್ತು ಪುರುಷ ಹೋರಾಟಗಾರರನ್ನ ಪೊಲೀಸರು ಬಲವಂತವಾಗಿ ತಳ್ಳಾಡಿದ್ದರಿಂದ ಮತ್ತೆ ಸಂಘರ್ಷ ಉಂಟಾಯಿತು.

ಆ ಬಳಿಕ ಡಿಸಿಪಿ ಡಾ. ವಿಕ್ರಮ್ ಅಮಟೆ ರೈತರ ಮನವೊಲಿಸಿದ ಬಳಿಕ 400ಕ್ಕೂ ಅಧಿಕ ಹೋರಾಟಗಾರರನ್ನ ವಶಕ್ಕೆ ಪಡೆದರು. 1 ಗಂಟೆಗಳ ಕಾಲ ಪುನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಹೋರಾಟಗಾರರು- ಪೊಲೀಸರ ಮಧ್ಯೆ ಜಟಾಪಟಿ ನಡೆಸಿದ್ದರಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಒಟ್ಟಿನಲ್ಲಿ ಕರ್ನಾಟಕ ಬಂದಗೆ ಬೆಂಬಲಿಸಿ ಜಿಲ್ಲೆಯಲ್ಲಿ ಬೆಳಗಾವಿ ನಗರ, ಅಥಣಿ, ಚಿಕ್ಕೋಡಿ, ಗೋಕಾಕ, ಕಿತ್ತೂರು ಬೈಲಹೊಂಗಲ ತಾಲೂಕಿನಲ್ಲಿ ಬೀದಿ ಹೋರಾಟ ಜೋರಾಗಿತ್ತು. ಆದ್ರೆ ಕರ್ನಾಟಕ ಬಂದಗೆ ಎಲ್ಲಾ ಸಂಘಟನೆಗಳು ಬೆಂಬಲ ನೀಡದ ಕಾರಣ ನಿರಸ ಪ್ರತಿಕ್ರೆಯೆ ವ್ಯಕ್ತವಾಯ್ತು. ಪ್ರಯಾಣಿಕರು ಕೊಂಚ ಪರದಾಡುವಂತಾದ್ರೆ. ಪ್ರತಿಭಟನಾ ಮಾರ್ಗದಲ್ಲಿ ಕೆಲ ಕಾಲ ಅಂಗಡಿಗಳು ಬಂದ್ ಮಾಡಿರುವ ದೃಶ್ಯಗಳು ಕಂಡು ಬಂದವು.

error: Content is protected !!