ಕೂಗು ನಿಮ್ಮದು ಧ್ವನಿ ನಮ್ಮದು

ಹುಬ್ಬಳ್ಳಿಗೂ ಅಂಟಿದ ರಾಗಿಣಿ ನಂಟು, ರಾಗಿಣಿ ಆಪ್ತ ಗಿರೀಶ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಹು-ಧಾ ಪೊಲೀಸರು: ನೀವು ಹುಬ್ಬೇರಿಸುವ ಮಾಹಿತಿ

ಹುಬ್ಬಳ್ಳಿ: ಸ್ಯಾಂಡಲ್‌ವುಡ್ ನಟಿಯರ ಡ್ರಗ್ಸ್‌ ಪ್ರಕರಣ ದೇಶಾದ್ಯಂತ ಭಾರಿ ಚರ್ಚೆಯಲ್ಲಿರುವಾಗಲೇ ಹುಬ್ಬಳ್ಳಿಯಲ್ಲಿ ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ನಂಟಿನಲ್ಲಿ ಸಿಕ್ಕಿಬಿದ್ದಿರುವ ನಟಿ ರಾಗಿಣಿ ನಂಟು ವಾಣಿಜ್ಯ ನಗರಿ ಹುಬ್ಬಳ್ಳಿಗೂ ಅಂಟಿದೆ..!?

ಈ ಮೂಲಕ ನಟಿ ರಾಗಿಣಿ ಆಪ್ತನ ವಿಚಾರಣೆ ಜೋರಾಗಿಯೇ ನಡೆದಿದೆ. ಹುಬ್ಬಳ್ಳಿ ಮೂಲದ ಕೈ ಮುಖಂಡ ಗಿರೀಶ ಗದಿಗೆಪ್ಪಗೌಡ, ರಾಗಿಣಿಯ ಆಪ್ತನಾಗಿದ್ದು, ರಾಗಿಣಿ ಮೊಬೈಲ್ ನಲ್ಲಿ ಗಿರೀಶ ಭಾವಚಿತ್ರ ಪತ್ತೆಯಾದ ಹಿನ್ನೆಲೆ ಸಿಸಿಬಿ ಅಧಿಕಾರಿಗಳಿಂದ ಗಿರೀಶನ ತೀವೃ ವಿಚಾರಣೆ ನಡೆದಿರುವ ಬಗ್ಗೆ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಪ್ರಕರಣ ತನಿಖೆ ಹಂತದಲ್ಲಿದೆ. ಈವರೆಗೂ ವಿಚಾರಣೆ ಮುಂದುವರೆದಿದೆ‌.

ಬೆಂಗಳೂರು ಸಿಸಿಬಿ ಆಧಿಕಾರಿಗಳ ಸೂಚನೆಯ ಮೇರೆಗೆ ವಿಚಾರಣೆ ನಡೆದಿದ್ದು, ಸತ್ಯಾ ಸತ್ಯತೆ ಬೆಳಕಿಗೆ ಬಂದ ನಂತರ ಮಾಹಿತಿ ನೀಡಲಾಗುವುದು ಎಂದಿದ್ದಾರೆ. ಸಧ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಕೈ ಮುಖಂಡನ ವಿಚಾರಣೆ ಮುಂದುವರೆದಿದೆ. ನಟಿ ರಾಗಿಣಿ ಜೊತೆಗೆ ಸಂಪರ್ಕ ಹೊಂದಿದ್ದ ಕೈಮುಖಂಡ ಗೀರಿಶ್ ಗದಿಗೆಪ್ಪಗೌಡರ ಗೋವಾದಲ್ಲಿ ಕ್ಯಾಸಿನೋ ನಡೆಸುತ್ತಿರುವ ರಾಜಕಾರಣಿ ಅಂತ ಹೇಳಲಾಗುತ್ತಿದೆ. ನಟಿ ರಾಗಿಣಿ ಕೈಯಿಂದ ಕ್ಯಾಸಿನೋ ಓಪನಿಂಗ್ ಮಾಡಿಸಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಇದೇ ಕಳೆದ ಮಾರ್ಚ್‌ ನಲ್ಲಿ ನಟಿ ರಾಗಿಣಿ ಕ್ಯಾಸಿನೋ ಓಪನಿಂಗ್ ಮಾಡಿದ್ದರು ಎನ್ನಲಾಗಿದೆ.

ಗೋವಾದ ಪಣಜಿಯಲ್ಲಿರುವ ಕಾಡಿಲಾಕ್ ಕ್ಯಾಸಿನೋ ಹಾಗೂ ನಟಿ ರಾಗಿಣಿ‌ ನಂಟು ಹಿಡಿದು ಸಿಸಿಬಿ ಪೊಲೀಸರು ಹುಬ್ಬಳ್ಳಿಗೆ ಬಂದಿದ್ದು, ನಟಿ‌ ರಾಗಿಣಿ ಜೊತೆಗೆ ನಿಕಟ ಸಂಪರ್ಕ ಹೊಂದಿರುವ ಹಿನ್ನೆಲೆ ಗಿರ್ ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನು ರಾಗಿಣಿ ಬಂಧನ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿನ ರಾಗಿಣಿ ಜೊತೆಗಿನ ಫೋಟೊಗಳನ್ನು ಗಿರೀಶ್ ಡಿಲಿಟ್ ಮಾಡಿದ್ದು, ಈ ಬಗ್ಗೆಯೂ ಗಿರೀಶ್ ಗದಿಗೆಪ್ಪಗೌಡರ ವಿಚಾರಣೆ ಚುರುಕಾಗಿ ಸಾಗಿದೆ.

error: Content is protected !!