ಕಲಬುರ್ಗಿ: ನಿಮ್ಗೆ ಹುಷಾರಿಲ್ವಾ.. ಆಸ್ಪತ್ರೆಗೆ ಹೋಗೋಕೆ ಆಗ್ತಿಲ್ವಾ.. ಅಯ್ಯೋ ಸಣ್ಣಪುಟ್ಟದಕ್ಕೆಲ್ಲ ದವಾಖಾನೆಗೆ ಹೋಗ್ಬೇಕಾ ಅಂತ ಚಿಂತೆ ಮಾಡ್ತಿದ್ದೀರಾ.. ಡೊಂಟ್ ವರಿ. ಸರ್ಕಾರವೇ ನಿಮಗಾಗಿ ತಂದಿದೆ ಒಂದು ಹೊಸ ಪ್ಲಾನ್. ಇನ್ನೇನಿದ್ರೂ ಮನೆಲೀ ಕುತ್ಕೊಂಡೆ ಮೆಡಿಸಿನ್ ತಗೋರಿ. ಅರೆ ಇದೇನಿದು ಹೊಸ ಪ್ಲಾನ್ ಅಂತಿರೇನು ಹಂಗಾದ್ರ ಇದನ್ನ ಪೂರ್ತಿ ಓದ್ರಿ.
ಕೆಮ್ಮಾಯ್ತು.. ನೆಗಡಿಯಾಯ್ತು.. ಹೋಗ್ಲಿ ಮೈಕೈ ಬ್ಯಾನಿಯಾದ್ರೂ ನೀವು ದವಾಖಾನೆಗೆ ಹೋಗ್ಲೇ ಬೇಕು. ಪಾಳಿ ನಿಲ್ಲಲೇಬೇಕು. ಆದ್ರೆ ಸರ್ಕಾರ ಇದಕ್ಕೆಲ್ಲ ಫುಲ್ ಸ್ಟಾಪ್ ಹಾಕಿದೆ. ಹೌದು, ಕಲಬುರಗಿಯಲ್ಲಿ ಅಷ್ಟೇ ಯಾಕೆ ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಸರ್ಕಾರ ಜಾರಿಗೆ ತಂದಿದೆ ಇ-ಸಂಜೀವಿನಿ ಆ್ಯಪ್ ಅನ್ನೋ ಹೊಸ ಪ್ಲಾನ್. ನೀವು ಮಾಡಬೇಕಾಗಿರೋದು ಇಷ್ಟೆ. ಪ್ಲೇ ಸ್ಟೋರ್‌ಗೆ ಹೋಗಿ ಇ-ಸಂಜೀವಿನಿ ಆ್ಯಪ್ ರಿಜಿಸ್ಟಾರ್ ಮಾಡಿದ್ರೆ ನಿಮಗೆ ವೈದ್ಯರೇ ಆನ್ ಲೈನಲ್ಲಿ ಬಂದು ಮೆಡಿಸಿನ್ ಹೇಳ್ತಾರೆ. ಇದು ರಾಜ್ಯ ಆರೋಗ್ಯ ಇಲಾಖೆ ನೂತನವಾಗಿ ಈ ಯೋಜನೆ ಬಿಡುಗಡೆ ಮಾಡಿದ್ದು, ಈಗಾಗಲೇ ಲಕ್ಷಾಂತರ ಜನ ಇದರ ಸೇವೆ ಪಡೆಯಲು ಆರಂಭಿಸಿದ್ದಾರೆ.
ಅಂದಹಾಗೇ ಮಹಾಮಾರಿ ಕೊರೊನಾ ವೈರಸ್ ವಕ್ಕರಿಸಿದ ನಂತರ, ಜಿಲ್ಲಾಸ್ಪತ್ರೆಗೆ ಹೋದರೆ ಚಿಕಿತ್ಸೆ ಸಿಗುತ್ತಿಲ್ಲ. ಇನ್ನೂ ಖಾಸಗಿ ಆಸ್ಪತ್ರೆಗಳಿಗೆ ತೆರಳಿದ್ರೆ ಹತ್ತಾರು ಟೆಸ್ಟ್‌ಗಳು. ಅಬ್ಬಾ ಸಾಕಪ್ಪ ಸಾಕು ಅಂತಾ ಜನರು ಇರೋ ಬರೋ ಮಾತ್ರೆ ನುಂಗಿ ಮನೆಲಿ ಇರ್ತಾರೆ. ಆದರೆ ಇ-ಸಂಜೀವಿನಿ ಆಪಲ್ಲಿ ನೀವು ರಿಜಿಸ್ಟಾರ್ ಮಾಡಿದ್ರೆ ನಿಮಗೆ ಯಾವ ಸಮಸ್ಯೆ ಇದೆ ಅನ್ನೋ ಬಗ್ಗೆ ಕೇಳುತ್ತೆ. ಉದಾಹರಣೆಗೆ ಬರೀ ಜ್ವರ ಇತ್ತಂದ್ರೆ ಜನರಲ್ ಮೆಡಿಸಿನ್ ವಿಭಾಗಕ್ಕೆ ಕ್ಲಿಕ್ ಮಾಡಬೇಕು. ಹೀಗೆ ಕ್ಲಿಕ್ ಮಾಡಿದ್ರೆ ರಾಜ್ಯದ 240 ಕ್ಕೂ ಹೆಚ್ಚಿನ ಪರಿಣಿತ ವೈದ್ಯರು ಆನ್ ಲೈನಲ್ಲಿ ಇರ್ತಾರೆ.
ಕುಂತಲ್ಲೇ ಪ್ರಾಬ್ಲಂ ಕೇಳಿ ಬಿಡ್ತಾರೆ. ಕೋವಿಡ್ ಇರಲಿ ನಾನ್ ಕೋವಿಡ್ ಇರಲಿ ಸಲಹೆ ಹೇಳ್ತಾರೆ, ಮಾತ್ರೆನೂ ಮೆಸೇಜ್ ಮಾಡ್ತಾರೆ. ಹೀಗಾಗಿ ನೀವು ದವಾಖಾನೆಗೆ ಹೋಗೋದು ತಪ್ಪುತ್ತೆ. ಸದ್ಯ ಈ ಆರೋಗ್ಯ ಯೋಜನೆ ಜನರ ಪ್ರಶಂಸೆಗೆ ಪಾತ್ರವಾಗಿದೆ. ಒಟ್ಟಾರೆ ಜನರಿಗೆ ಆಸ್ಪತ್ರೆಗೆ ಅಡ್ಡಾಡೋದು ತಪ್ಪಿಸಲಿಕ್ಕೆ ಸರ್ಕಾರ ಈಗ ಮೊಬೈಲಲ್ಲೇ ಓಪಿಡಿ ಸೃಸ್ಟಿಯಾಗೋ ಪ್ಲಾನ್ ಮಾಡಿದೆ. ಆದ್ರೆ ನೆನಪಿರಲಿ ದೊಡ್ಡ ದೊಡ್ಡ ವಿಚಾರಕ್ಕೆ ಮಾತ್ರ ನೀವು ಆಸ್ಪತ್ರೆಗೆ ಹೋಗಲೇಬೇಕು.