ಕೂಗು ನಿಮ್ಮದು ಧ್ವನಿ ನಮ್ಮದು

ಸಾಕು ಪ್ರಾಣಿಗಳನ್ನು ತಿಂದು ಆತಂಕ ಹುಟ್ಟಿಸಿದ್ದ ಹುಲಿ ಸೇರೆ: ಭಾರಿ ಗಾತ್ರದ ಹುಲಿ ನೋಡಲು ಬಂದ ಅಪಾರ ಜನಸ್ತೋಮ

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಎಚ್.ಡಿ.ಕೋಟೆ ಸರಗೂರು ತಾಲೂಕಿನ ಹೆಗ್ಗನೂರು ಗ್ರಾಮದ ಆಸುಪಾಸಿನಲ್ಲಿ ಕಾಣಿಸಿಕೊಂಡಿದ್ದ ಹುಲಿ, ಸಾಕು ಪ್ರಾಣಿಗಳನ್ನು ಕೊಂದು ತಿಂದು ಜನರಲ್ಲಿ ಆತಂಕ ಸೃಷ್ಟಿಸಿತ್ತು.

ಬೋನಿಗೆ ಬಿದ್ದ ಹುಲಿರಾಯ

ಸಾಕಾನೆ ಬಳಸಿಕೊಂಡು ಮುಂಜಾನೆಯಿಂದ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ, ಅರವಳಿಕೆ ತಜ್ಞರ ಸಹಾಯದಿಂದ ಹುಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಸರಗೂರು ತಾಲೂಕಿನ ಸರಗೂರು ಅರಣ್ಯ ವ್ಯಾಪ್ತಿಯಿಂದ ಆಹಾರ ಅರಸಿ ಬಂದಿರುವ ಬಾರಿ ಗಾತ್ರದ ಹುಲಿ ನೋಡಲು ಅಪಾರ ಜನಸ್ತೋಮ ಸೇರಿದೆ.

error: Content is protected !!