ಬೆಳಗಾವಿ: ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಇಂದು ಬೆಳ್ಳಂಬೆಳಿಗ್ಗೆ ಬೆಳಗಾವಿಯ ಬಸವ ಕಾಲೋನಿಯಲ್ಲಿ ಚಾಯ್ ಪೇ ಚರ್ಚಾ ನಡೆಸುವ ಮೂಲಕ ಸಾರ್ವಜನಿಕರನ್ನು ಭೇಟಿ ಮಾಡಿ, ಮತಯಾಚನೆ ನಡೆಸಿದರು.
ಪ್ರಚಾರದ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ, ವಿಕಸಿತ ಭಾರತದತ್ತ ದಾಪುಗಾಲು ಹಾಕುತ್ತಿದ್ದು, ಮೋದಿಯವರು ಪ್ರಧಾನಿಯಾದ ಮೇಲೆ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದೆ. ದೇಶವನ್ನು ಇನ್ನು ಹೆಚ್ಚು ಅಭಿವೃದ್ಧಿ ಮಾಡಲು ಮೂರನೆ ಸಲ ಮೋದಿಯವರು ಪ್ರಧಾನಿ ಆಗಬೇಕು. ಆ ನಿಟ್ಟಿನಲ್ಲಿ ಬಿಜೆಪಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮತಯಾಚನೆ ಮಾಡಿದರು
ಈ ಸಂದರ್ಭದಲ್ಲಿ ಬಸವ ಕಾಲೋನಿಯ ಪ್ರಮುಖರಾದ ಡಾ. ರವಿ ಪಾಟೀಲ್, ಕೆ.ಐ. ಗಾಣಗೇರ, ಎಸ್.ಆರ್. ಪಾಟೀಲ, ಮೋಹನ ಹೂಗಾರ, ಬಸಪ್ಪ ಚಿಕಲದಿನ್ನಿ, ಪ್ರಕಾಶ ಕೋತ, ಪ್ರಮೋದ ಕೋತ, ಬಿ.ಎಂ. ಮುಗದುಮ್, ಚೇತನ ಬಡಿಗೇರ, ಆದರ್ಶ ಪೈಲ್ವಾನ್, ಸುರೇಶ ಬಂಡೆಪ್ಪನವರ, ರಮೇಶ ಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು.