ಬೆಳಗಾವಿ: ಇಂದು ಸಂಜೆ ಜೆಪಿ ನಡ್ಡಾ ಪೋನ ಮಾಡಿ ಜಗದೀಶ್ ಶೆಟ್ಟರ ಅವರನ್ನ ಗೆಲ್ಲಿಸಿ ಎಂದಿದ್ದಾರೆ ಎಂದು ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಬೆಳಗಾವಿ ಲೋಕಸಭೆಗೆ ಜಗದೀಶ್ ಶೆಟ್ಟರ್ ಹೆಸರು ಘೋಷಣೆಯಾಗುತ್ತಿದ್ದಂತೆ, ಹಾಲಿ ಸಂಸದೆ ಮಂಗಲಾ ಅಂಗಡಿ ಸುದ್ದಿಗೋಷ್ಠಿ ನಡೆಸಿದ್ರು. ಸಂಜೆ ನಡ್ಡಾ ಪೋನ ಮಾಡಿದ್ರು.
ಶೆಟ್ಟರ್ ಅವರನ್ನ ಹೆಚ್ಚಿನ ಮತಗಳಿಂದ ಆರಿಸಿ ತರಬೇಕೆಂದು ಹೇಳಿದ್ರು ಎಂದ ಮಂಗಲಾ ಅಂಗಡಿ, ಕಳೆದ ಬಾರಿ ಬೆಳಗಾವುಗೆ ಬಂದಾಗ ನಡ್ಡಾ ಮನೆಗೆ ಬಂದಿದ್ರು. ಆಗ ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಬೇಕು ಅಂತಾ ಹೇಳಿದ್ದೆ. ಈಗ ನಮ್ಮ ಕುಟುಂಬಕ್ಕೆ ಟಿಕೆಟ್ ಸಿಕ್ಕಿದೆ ಎಂದ್ರು.
ಈವರೆಗೆ ಅಂಗಡಿ ಕುಟುಂಬಕ್ಕೆ ಕಾರ್ಯಕರ್ತರು ಬಹಳ ಸಪೋರ್ಟ್ ಮಾಡಿದ್ದಾರೆ, ಅವರ ಪ್ರೀತಿ ಇರೋದಕ್ಕೆ ನಾನು ಆರಿಸಿ ಬಂದಿದ್ದೇನೆ. ನನಗೆ ಸಪೋರ್ಟ್ ಕೊಟ್ಟ ಹಾಗೆ ಶೆಟ್ಟರ್ ಅವರಿಗೆ ಸಪೋರ್ಟ್ ಮಾಡಿ ಎಂದು ಮನವಿ ಮಾಡಿದ್ರು.
ಯಾರಿಗೆ ಟಿಕೆಟ್ ಕೊಟ್ಟರು ಪ್ರಧಾನಿ ಮೋದಿಗಾಗಿ ಕೆಲಸ ಮಾಡಬೇಕು ಎಂದ ಮಂಗಲಾ ಅಂಗಡಿ, ಶೆಟ್ಟರ್ ಹೊರಗಿನವರು ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ತಾರೆ, ಅದನ್ನ ಕಾರ್ಯಕರ್ತರು ಪಾಲನೆ ಮಾಡ್ತಾರೆ. ನಮಗೂ ಕಾರ್ಯಕರ್ತರು ಪೋನ್ ಮಾಡಿ ಸಪೋರ್ಟ್ ಮಾಡ್ತಿದ್ದಾರೆ ಎಂದ್ರು.