ಕಲಬುರಗಿ: ಪಿಯು ಪರೀಕ್ಷೆ ಬರೆಯುತ್ತಿದ್ದ ತಂಗಿಗೆ ನಕಲು ಕೊಡಲು ಸಹಕಾರ ಮಾಡಲ್ವಾ ಅಂತ ಪೋಲೀಸ್ ಪೇದೆಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಅಫಜಲಪುರ ತಾಲೂಕಿನ ಕರಜಗಿ ಪಿಯು ಪರೀಕ್ಷೆ ಕೇಂದ್ರದಲ್ಲಿ ಘಟನೆ ನಡೆದಿದ್ದು ಪೇದೆ ಪಂಡಿತ್ ಮೇಲೆ ಕೈಲಾಸ್ ಎಂಬಾತ ಹಲ್ಲೆ ಮಾಡಿದ್ದಾನೆ. ಮಾತ್ರವಲ್ಲ ಕೈಲಾಸ್ ಸ್ನೇಹಿತ ಸಮೀರ್ ಎಂಬಾತನೂ ಸಹಕರಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಅಫಜಲಪುರ ಪೋಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.