ಕೂಗು ನಿಮ್ಮದು ಧ್ವನಿ ನಮ್ಮದು

ಹೆಗಡೆ ಅಲ್ಲಾ ಅವರಪ್ಪ ಹುಟ್ಟಿ ಬಂದ್ರೂ ಸಂವಿಧಾನ ಮುಟ್ಟೋಕ್ ಆಗಲ್ಲಾ: ಮಾಜಿ ಸಚಿವ ರಾಜೂಗೌಡ ವಾಗ್ದಾಳಿ

ಯಾದಗಿರಿ: ಹೆಗಡೆ ಅಲ್ಲ ಅವರಪ್ಪ ಹುಟ್ಟಿ ಬಂದ್ರೂ ಸಂವಿಧಾನ ಮುಟ್ಟೋದಕ್ಕೆ ಆಗಲ್ಲ ಎಂದು ಸಂವಿಧಾನ ತಿದ್ದುಪಡಿ ವಿಚಾರವಾಗಿ ಮಾತನಾಡಿರೋ ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ರಾಜೂಗೌಡ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ರಾಜೂಗೌಡ ಮಾತನಾಡುತ್ತ ಅವನ್ಯಾರೋ ಅಲ್ಲಿದ್ದು ಸಂವಿಧಾನದ ಬಗ್ಗೆ ಮಾತಾಡ್ತಾನೆ. ಅದರ ಹೊಡೆತ ನಮಗೆ ಬೀಳುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಾಬಾ ಸಾಹೇಬರ ಸಂವಿಧಾನವನ್ನ ರಕ್ಷಣೆ ಮಾಡುವಂತ ಕೆಲಸ ನರೇಂದ್ರ ಮೋದಿಯವ್ರು ಮಾಡ್ತಾರೆ ಎಂದ ರಾಜೂಗೌಡ, ಒಳ ಮೀಸಲಾತಿ ವಿಚಾರವನ್ನೂ ಪ್ರಸ್ತಾಪಿಸಿ ರಾಜ್ಯ ನಾಯಕರ ವಿರುದ್ದವೂ ಹರಿಹಾಯ್ದರು.

ಎಲ್ಲೋ ನಿಂತು ಒಳ ಮೀಸಲಾತಿ ಮಾಡಿದ್ರು. ನಾನು ನಿಮ್ಮ ಪರ ನಿಂತೆ, ಆದ್ರೆ ಅದರ ಏಟು ನನಗೆ ಬಿತ್ತು ಎಂದು ಫಲಾನುಭವಿಗಳ ಪ್ರಮುಖರ ಸಭೆಯಲ್ಲಿ ರಾಜೂಗೌಡ ಆಕ್ರೋಶ ಹೊರಹಾಕಿದ್ರು.

ಸುರಪುರ ವಿಧಾನಸಭೆಯ ಉಪ ಚುನಾವಣೆಯ ಕುರಿತು ಫಲಾನುಭವಿಗಳ ಪ್ರಮುಖರ ಸಭೆ ವೇಳೆ ಮಾತನಾಡಿದ ರಾಜೂಗೌಡ, ಲೋಕಸಭಾ ಚುನಾವಣೆಯ ಜೊತೆಗೆ ಸುರಪುರ ಕ್ಷೇತ್ರದ ಉಪ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದರು. ಹೀಗಾಗಿ ಉಪ ಚುನಾವಣೆ ಘೋಷಣೆಗೂ ಮುನ್ನವೇ ರಾಜೂಗೌಡ ಪ್ರಚಾರಕ್ಕೆ ಧುಮುಕಿದ್ದಾರೆ.

error: Content is protected !!