ಕೂಗು ನಿಮ್ಮದು ಧ್ವನಿ ನಮ್ಮದು

ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತು ಕಾರು ಅಪಘಾತ

ತುಕಾಲಿ ಸಂತು ಮಾಲಿಕತ್ವದ ಕಿಯಾ ಕಾರು ಹಾಗೂ ಅಟೋ ನಡುವೆ ಡಿಕ್ಕಿ.

ತುಮಕೂರು: ಬಿಗ್ ಬಾಸ್ ನ ತುಕಾಲಿ ಸಂತು ಕಾರಿಗೆ ಆಟೋ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ತುಕಾಲಿ ಸಂತುಗೆ ಸೇರಿದ ಕಿಯಾ ಕಾರಿಗೆ ಅಟೋ ಡಿಕ್ಕಿ ಹೊಡೆದಿದ್ದು, ತುಮಕೂರು ಜಿಲ್ಲೆಯ ಕುಣಿಗಲ್ ಬಳಿ ಈ ಘಟನೆ ನಡೆದಿದೆ.

ತುಕಾಲಿ ಸಂತು ಕಾರಿನ ಬಲಗಡೆ ಭಾಗಕ್ಕೆ ಅಟೋ ಡಿಕ್ಕಿ ಹೊಡೆದಿದ್ದು ಆಟೋ ಚಾಲಕ ಜಗದೀಶ್ ನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದ್ದು, ಅಟೋ ಭಾಗಶಃ ಜಖಂಗೊಂಡಿದೆ.

ಇನ್ನು ತುಕಾಲಿ ಸಂತು ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗುತ್ತಿದ್ದರು ಎನ್ನಲಾಗಿದ್ದು, ಅಟೋ ಕುಣಿಗಲ್ ನಿಂದ ಕುರುಡಿಹಳ್ಳಿ ಗೆ ಬರ್ತಿತ್ತು ಎನ್ನಲಾಗಿದೆ. ಆಟೋ ಚಾಲಕ ಮದ್ಯ ಸೇವಿಸಿದ್ದ ಎನ್ನಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ನೋವು ಸಂಭವಿಸಿಲ್ಲ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!