ಮಗಳು ಪ್ರಿಯಾಂಕಾ ಚಿಕ್ಕೋಡಿ ಸ್ಪರ್ಧೆ ವಿಚಾರ, ಮೊದಲ ಬಾರಿಗೆ ಸುಳಿವು ನೀಡಿದ ಸಾಹುಕಾರ್.
ಬೆಳಗಾವಿ: ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಟಿಕೆಟ್ ಫೈನಲ್ ವಿಚಾರ ಬರುವ ಹತ್ತು ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಸೂಕ್ತ ಅಭ್ಯರ್ಥಿ ಆಯ್ಕೆಗಾಗಿ ತಡವಾಗಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಚಿಕ್ಕೋಡಿಯಿಂದ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆ!
ಇನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಅನ್ನೋ ಗೊಂದಲಕ್ಕೆ ಸಚಿವ ಸತೀಶ್ ಜಾರಕಿಹೊಳಿ ಬಹುತೇಕ ತೇರೆ ಎಳೆದಿದ್ದಾರೆ. ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿಯಿಂದ ಸ್ಪರ್ಧೆ ಮಾಡ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಸಚಿವ ಸತೀಶ್ ಜಾರಕಿಹೊಳಿ ಸಕಾರಾತ್ಮಕವಾಗಿ ಉತ್ತರಿಸುವ ಮೂಲಕ ಮಗಳನ್ನು ರಾಜಕೀಯ ಅಖಾಡಕ್ಕೆ ಕರೆತರಲು ಸನ್ನದ್ಧರಾಗಿದ್ದಾರೆ.
ಪ್ರಿಯಾಂಕಾ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಈಗಾಗಲೇ ಚರ್ಚೆಯಾಗಿದೆ. ಸಿಎಂ-ಡಿಸಿಎಂ ಬೆಳಗಾವಿಗೆ ಬಂದಾಗ ಈ ವಿಚಾರವಾಗಿ ಚರ್ಚಿಸಿದ್ದಾರೆ. ಮೊನ್ನಯೂ ಬೆಳಗಾವಿ ವಿಮಾನ ನಿಲ್ದಾಣದಲ್ಲಿಯೂ ಪ್ರಿಯಾಂಕಾ ಸ್ಪರ್ಧೆ ಬಗ್ಗೆ ಚರ್ಚೆಯಾಗಿದೆ. ಹತ್ತು ದಿನದಲ್ಲಿ ವಿಚಾರ ಮಾಡಿ ಹೇಳುವುದಾಗಿ ತಿಳಿಸಿದ್ದೇನೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನ ಮಾಡ್ತಿವಿ. ಬರುವ ಹತ್ತು ದಿನಗಳಲ್ಲಿ ಬೆಳಗಾವಿ-ಚಿಕ್ಕೋಡಿ ಅಭ್ಯರ್ಥಿಗಳ ಹೆಸರು ಫೈನಲ್ ಆಗಲಿದೆ ಎಂದಿದ್ದಾರೆ.