ಕೂಗು ನಿಮ್ಮದು ಧ್ವನಿ ನಮ್ಮದು

ಬ್ರ್ಯಾಂಡ್ ಬೆಂಗಳೂರು ಮಾಡಿದಾಗಲೇ ಇದು ಬಾಂಬ್ ಬೆಂಗಳೂರು ಆಗುತ್ತೆ ಎಂದಿದ್ದೆ: ಯತ್ನಾಳ

ವಿಜಯಪುರ: ಭಯೋತ್ಪಾದಕರಿಗೆ ಕರ್ನಾಟಕ ಸುರಕ್ಷಿತ ತಾಣ ಎನಿಸಿದೆ. ಪಾಕಿಸ್ತಾನ ಪರ ಘೋಷಣೆ ಆದಾಗಲೇ ಇದನ್ನ ಹೇಳಿದ್ವಿ. ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಕೆ ಇಂಬು ಕೊಡ್ತಿದೆ. ಇದು ಹಿಂದೂಗಳ ಕೃತ್ಯ ಅಲ್ಲ ಇದಂತು ಸ್ಪಷ್ಟ ಎಂದು ಬೆಂಗಳೂರು ಬ್ಲಾಸ್ಟ್ ವಿಚಾರವಾಗಿ ವಿಜಯಪುರದಲ್ಲಿ ಶಾಸಕ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.

ಬ್ರಾಂಡ್ ಬೆಂಗಳೂರು ಮಾಡಿದಾಗಲೇ ಇದು “ಬಾಂಬ್ ಬೆಂಗಳೂರು” ಆಗತ್ತೆ ಎಂದಿದ್ದೆ. ಭಯೋತ್ಪಾದನೆ ನಿಲ್ಲಿಸೋಕೆ ಆಗದಿದ್ರೆ ಸಿಎಂ ಕೂಡಲೇ ರಾಜೀನಾಮೆ ಕೊಡಲಿ ಎಂದು ಯತ್ನಾಳ್ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ, ವಿಧಾನ ಸಭೆ ವಿಸರ್ಜನೆ ಮಾಡಲಿ. ಭಯೋತ್ಪಾದನೆ ತಡೆಯೊಕೆ ಆಗದೆ ಇದ್ರೆ ವಿಧಾನಸಭೆ ವಿಸರ್ಜಿಸಿ ಎಂದು ತಮ್ಮದೇ ಶೈಲಿಯಲ್ಲಿ ಯತ್ನಾಳ ಗುಡುಗಿದ್ದಾರೆ. ಗ್ಯಾರಂಟಿ ಗ್ಯಾರಂಟಿ ಎಂದು ಜನರ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ. ಗ್ಯಾರಂಟಿ ಆಸೆ ಹಚ್ಚಿ ಲೋಕಸಭೆ ಗೆಲ್ತೀನಿ ಅನ್ನೋದು ಮೂರ್ಖತನದಲ್ಲಿದ್ದಾರೆ ಎಂದಿದ್ದಾರೆ.

ಇನ್ನು ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಲು ಆಗದೆ ಇದ್ದರೆ, ಮುಂದೆ ದೊಡ್ಡ ಘಟನೆಯಾಗಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಯತ್ನಾಳ, ರಾಮೇಶ್ವರಂ ಹೊಟೇಲ್‌ನಲ್ಲಿ ನಡೆದಿದ್ದು ಒಂದು ಪ್ರಯೋಗ ಎಂದಿದ್ದಾರೆ.

ರಾಜ್ಯ ಭಯೋತ್ಪಾದಕರ ಪ್ರಯೋಗ ಶಾಲೆಯಾಗಿದೆ, ಇದಕ್ಕೆ ಅವಕಾಶ ಕೊಡಬಾರದು. ನಿಮಗೆ ಆಗದೆ ಇದ್ದರೆ ಮನೆಗೆ ಹೋಗಿ ಎಂದು ಆಗ್ರಹಿಸಿದ್ದಾರೆ.

ಹೊಟೇಲ್ ಟಾರ್ಗೆಟ್ ಆಗಿದ್ಯಾಕೆ.?

ಶುಕ್ರವಾರದ ದಿನವೇ ರಾಮೇಶ್ವರಂ ಹೆಸರಿನ ಹೊಟೇಲ್ ಟಾರ್ಗೆಟ್ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣ ಮಾಡಿದ ಬಳಿಕ ಹೀಗೆ ಮಾಡ್ತಿದ್ದಾರೆ. ಭಯೋತ್ಪಾದಕರ ನಾಶವಾಗುವ ಟೈಂ ಬಂದಿದೆ ಎಂದಿದ್ದಾರೆ.

ವಿಶೇಷ ಸೌಲಭ್ಯ ತೆಗೆಯಬೇಕು.

ದೇಶದಲ್ಲಿ‌ ಸಮಾನ ನಾಗರಿಕ ಸಂಹಿತೆ ಬರಬೇಕು ಎಂದ ಯತ್ನಾಳ. ಪಾಕಿಸ್ತಾನ ಮೇಲೆ ಪ್ರೀತಿ ಇದ್ದವರು ಅಲ್ಲಿಗೆ ಹೋಗಿ, ಗಾಂಧಿ ನೆಹರು ಕೊಟ್ಟಿದ್ದಾರೆ ಅಲ್ಲಿಗೆ ಹೋಗಿ, ಇಲ್ಲಿ ಇರೊ ಅವಶ್ಯಕತೆ ಇಲ್ಲ. ಇಲ್ಲಿನ ಅನ್ನ ತಿಂದು ಪಾಕಿಸ್ತಾನ್ ಘೋಷಣೆ ಕೂಗುವವರು ಅಲ್ಲಿ ಹೋಗ್ರಿ ಮಕ್ಕಳಿರ್ಯ್ಯಾ ಎಂದು ವಾಗ್ದಾಳಿ ನಡೆಸಿದ್ದಾರೆ.

ಸ್ಪೀಕರ್ ಯು.ಟಿ.ಖಾದರ್ ರನ್ನ ಹೊಗಳಿದ ಯತ್ನಾಳ್

ಸ್ಪೀಕರ್ ಯು.ಟಿ.ಖಾದರ ನಿಜವಾದ ದೇಶಪ್ರೇಮಿ. ಪಾಕ್ ಘೋಷಣೆ ಹಾಕಿದವರಿಗೆ ಬೇಕಾದ್ದ ಶಬ್ಧದಲ್ಲಿ ಬೈಯೊಕೆ‌ ಹೇಳಿದ್ರು. ಇಂಥವರು ಎಲ್ಲೆಲ್ಲೋ ಒಬ್ಬರು ದೇಶ ಪ್ರೇಮಿಗಳಿದ್ದಾರೆ.‌ ಪಾಕ್‌ ಮೇಲೆ‌ ಪ್ರೀತಿ ಇದ್ದವರು ಹೋಗಲಿ, ನಾವು ಹಿಂದೂಗಳು, ದಲಿತರು ಆನಂದವಾಗಿ ಇರ್ತೇವೆ. ಪಾಕ್ ಪರ ಘೋಷಣೆ ಕೂಗುವವರಿಗೆ ಇಲ್ಲಿ ಇರೋದಕ್ಕೆ ಯಾವುದೇ ಹಕ್ಕು ಇಲ್ಲ.

ಕಾಂಗ್ರೆಸ್ ನವರು ಅಯೋಗ್ಯ ನನ್ನ ಮಕ್ಕಳು.‌ ಈ ಘಟನೆಯನ್ನ ಭಜರಂಗದಳದ ಮೇಲೆ ಹಾಕ್ತಿದ್ರು. ಭಜರಂಗದಳವರಿದ್ದರು ಅವರ ಕುಮ್ಮಕ್ಕಿದೆ ಎಂತಿದ್ದರು. ಅವರು ಅಂತ ಅಯೋಗ್ಯರಿದ್ದಾರೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ರು.

error: Content is protected !!