ಕೂಗು ನಿಮ್ಮದು ಧ್ವನಿ ನಮ್ಮದು

ಬೆಂಗಳೂರು ಬಾಂಬ್ ಬ್ಲಾಸ್ಟ್, ಮಾಸ್ಕ್, ಟೋಪಿ‌ ಹಾಕಿಕೊಂಡು ವ್ಯಕ್ತಿಯಿಂದ ಕೃತ್ಯ: ಸಿಎಂ ಸಿದ್ದರಾಮಯ್ಯ

ಮೈಸೂರು: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ ಆಗಿರುವುದು ನಿಜ. ಮಾಸ್ಕ್, ಟೋಪಿ‌ ಹಾಕಿಕೊಂಡು ವ್ಯಕ್ತಿಯೊಬ್ಬ ಬಸ್ ನಲ್ಲಿ ಬಂದಿದ್ದಾರೆ. ಟೈಮರ್ ಫಿಕ್ಸ್ ಮಾಡಿ ಬ್ಲಾಸ್ಟ್ ಮಾಡಿಸಿದ್ದಾರೆ.
ಪ್ರಾಣಾಪಾಯದಿಂದ ಕೆಲವರು ಪಾರಾಗಿದ್ದಾರೆ ಎಂದು ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಏನ್ ಹೇಳಿದ್ರು ಕೇಳಿ

ರಾಮಕೃಷ್ಣ ನಗರದ ಎದುರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ. ನಿನ್ನೆಯೇ ಡಿಸಿಎಂ, ಹೋಂ ಮಿನಿಸ್ಟರ್ ವಿಸಿಟ್ ಮಾಡಿದ್ದಾರೆ‌. ನಾನು ಕೂಡ ಈವತ್ತು ಆಸ್ಪತ್ರೆಗೆ ಹಾಗು ಘಟನಾ ಸ್ಥಳಕ್ಕೆ ಹೋಗುತ್ತೇನೆ. ಇದು ಸಂಘಟನೆಯ ಕೆಲಸವೋ ಇಲ್ಲವೋ ಗೊತ್ತಿಲ್ಲ. ಸೀರಿಯಸ್ ಆಗಿ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಅಲ್ಪ ಸಂಖ್ಯಾತರ ಓಲೈಕೆಗಾಗಿ ಈ ಥರ ನಡೆದಿದೆ ಎಂಬ ಬಿಜೆಪಿ ಹೇಳಿಕೆ ವಿಚಾರ. ಬಿಜೆಪಿಯವರ ಅವಧಿಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತಲ್ಲ ಅದೂ ಅಲ್ಪ ಸಂಖ್ಯಾತರ ಓಲೈಕೆ ಕಾರಣಕ್ಕೇ ಆಗಿತ್ತ..? ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡಬಾರದು. ಮಂಗಳೂರು ಬಾಂಬ್ ಬ್ಲಾಸ್ಟ್ ಹಾಗೂ ಬೆಂಗಳೂರು ಬ್ಲಾಸ್ಟ್ ಗೆ ಸಂಬಂಧವಿಲ್ಲ.

ಬ್ಲಾಸ್ಟ್ ಮಾಡಿದ್ದನ್ನು ಖಂಡಿಸುತ್ತೇನೆ.
ಬಾಂಬ್ ಬ್ಲಾಸ್ಟ್ ಸಂಬಂಧ ಇನ್ನೂ ಕೂಡ ತನಿಖೆ ನಡೆಯುತ್ತಿದೆ.
ವರದಿ ಬಳಿಕ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು‌ ಎಂದರು.

ಇದೆ ವೇಳೆ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇನ್ನೂ ಕೂಡ ಯಾವುದೇ ವರದಿ ಕೈ ಸೇರಿಲ್ಲ. ಎಫ್ ಎಸ್ ಎಲ್ ರಿಪೋರ್ಟ್ ಈವರಗೆ ಬಂದಿಲ್ಲ. ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ ಎಂದು ಬಿಜೆಪಿ ಟ್ವಿಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

error: Content is protected !!