ಬೆಳಗಾವಿ: ಡಾಲ್ಬಿ ಕುಣಿತ ನೋಡುತಿದ್ದ ಸಾರ್ವಜನಿಕರ ಮೇಲೆ ಮನಸ್ಸೊ ಇಚ್ಚೆ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ನಾಗನೂರಲ್ಲಿ ನಡೆದಿದೆ.
ಕೊನೆಯ ಕಬ್ಬು ಕಟಾವು ಮಾಡಿ ಸ್ಥಳೀಯ ಕಬ್ಬು ಕಟಾವು ಗ್ಯಾಂಗ್ ನವರು ಕುಡಿದು ರಸ್ತೆ ಮೇಲೆ ಕುಣಿಯುತ್ತಾ ಸಾಗುತ್ತಿದ್ದಾಗ ಬದಿಗೆ ಬಂದ ಲಾರಿ ಚಾಲಕ ಸ್ವಲ್ಪ ಪಕ್ಕಕ್ಕೆ ಸರಿ ಅಂದ ತಪ್ಪಿಗೆ ಲಾರಿ ಚಾಲಕನನ್ನು ಎಳೆದು ಕಬ್ಬಿನ ಗ್ಯಾಂಗಿನವರು ಮನಸ್ಸೊ ಇಛ್ಚೆ ಹಲ್ಲೆ ಮಾಡುತಿದ್ದರು.
ರಸ್ತೆ ಪಕ್ಕ ನಿಂತು ಡಾಲ್ಬಿ ಕುಣಿತ ನೋಡುತಿದ್ದ ಸಾರ್ವಜನಿಕರು ಗ್ಯಾಂಗಿನವರನ್ನು ಪ್ರಶ್ನಿಸಿದ್ದಕ್ಕೆ ಅವರ ಮೇಲೆ ಹತ್ತಾರು ಜನ ಕಟ್ಟಿಗೆಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಸುಮಾರು 15 ಜನರಿರುವ ಕಬ್ಬಿನ ಗ್ಯಾಂಗಿನವರು ನಶೆಯಲ್ಲಿದ್ದು ಮನಸೊ ಇಚ್ಚೆ ಹಲ್ಲೆ ಮಾಡಿದ್ದರಿಂದ ಗಾಯಗೊಂಡ 5 ಜನರನ್ನು ಮೂಡಲಗಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಒರ್ವನ ಪರಿಸ್ಥಿತಿ ಚಿಂತಾಜನಕವಾಗಿದ್ದು ಮೂಡಲಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ರಾಜ್ಯದಲ್ಲಿ ಡಾಲ್ಬಿ ಸೌಂಡ ಹಚ್ಚುವದನ್ನು ನಿಷೇದ ಮಾಡಿದ್ದರೂ ಸಹ ಇವರಿಗೆ ಅನುಮತಿ ನೀಡಿದ್ದು ಯಾರು ಎಂಬುದನ್ನು ಜನ ಪ್ರಶ್ನಿಸುತಿದ್ದಾರೆ.