ಮಂಡ್ಯ: ತರಗತಿಗೆ ಹಾಜರಾಗದ ಬಗ್ಗೆ ಕಾಲೇಜು ಉಪನ್ಯಾಸಕ ಪೋಷಕರಿಗೆ ಮಾಹಿತಿ ನೀಡಿದ್ದಕ್ಕೆ ಕೋಪಗೋಡ ವಿದ್ಯಾರ್ಥಿಯೋರ್ವ ಉಪನ್ಯಾಸಕನಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಬಿಜಿ ನಗರದ ಡಿಪ್ಲೊಮಾ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, 17 ವರ್ಷದ ವಿದ್ಯಾರ್ಥಿ ಬೆದರಿಕೆ ಹಾಕಿದ್ದಾನೆ. ತರಗತಿಗೆ ಹಾಜರಾಗದ ಬಗ್ಗೆ ಉಪನ್ಯಾಸಕ ಪೋಷಕರಿಗೆ ಮಾಹಿತಿ ನೀಡಿದ್ದರಿಂದ ಆಕ್ರೋಶಗೊಂಡು ತರಗತಿಗೆ ಲಾಂಗ್ ತಂದಿದ್ದ ವಿದ್ಯಾರ್ಥಿ, ಉಪನ್ಯಾಸಕನಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದ.
ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಪ್ರಕರಣ ಸಂಬಂಧ ಬೆಳ್ಳೂರು ಪೊಲೀಸರು ವಿದ್ಯಾರ್ಥಿ ಕಡೆಯಿಂದ ತಪ್ಪೊಪ್ಪಿಗೆ ಬರೆಸಿಕೊಂಡು ಇನ್ಮುಂದೆ ಈ ರೀತಿ ಮಾಡದಂತೆ ಬುದ್ದಿ ಹೇಳಿದ್ದಾರೆ.