ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ ಬಿಡುಗಡೆ ಹಿನ್ನಲೆ ದೆಹಲಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿ ‘ ಎಐಬಿಪಿಯಿಂದ 5 ಸಾವಿರ ಕೋಟಿ ಅನುದಾನ ಪಡೆಯಲು ಸೂಚಿಸಿದೆ. ಹೀಗಾಗಿ ಹಣಕಾಸು ಇಲಾಖೆ ಜೊತೆಗೆ ಚರ್ಚಿಸಲು ನಿರ್ಧರಿಸಿದೆ ಎಂದರು.
ಈ ವೇಳೆ ಬಿಜೆಪಿಯ ರೇಣುಕಾಚಾರ್ಯ ಅವರು ಕಾಂಗ್ರೆಸ್ ಸೇರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ರಾಜಕೀಯದಲ್ಲಿ ಒಬ್ಬರನೊಬ್ಬರು ಭೇಟಿಯಾಗುವುದು ಸರ್ವೇ ಸಾಮಾನ್ಯ. ನಾನು ಪ್ರಧಾನ ಮಂತ್ರಿಗಳು ಬಂದಾಗ ಮಾತನಾಡಿಸುವುದು. ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಸಚಿವರನ್ನ ಸಿಎಂ ಭೇಟಿಯಾಗಿದ್ದರು ಇದೆಲ್ಲ ಇರುತ್ತದೆ ಎಂದಿದ್ದಾರೆ.