ಜನರಿಗೆ ಹೆಚ್ಚು ಸಮಯ ಕೊಡದ ಕಾರಣ ಕಳೆದ ಬಾರಿ ಸೋಲು ಕಂಡಿದ್ದೆ ಎಂದು ಸಂವಾದ ಕಾರ್ಯಕ್ರಮದಲ್ಲಿ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ರು. ಚುನಾವಣೆಯಲ್ಲಿ 6 ಬಾರಿ ಗೆದ್ದಿದ್ದೇನೆ, ಮೂರು ಬಾರಿ ಸೋತಿದ್ದೇನೆ. ಮೂರು ಬಾರಿಯೂ ನನ್ನಿಂದ ನಾನೇ ಸೋತಿದ್ದೇನೆ. ಗೆದ್ದಾಗ ಮಂತ್ರಿ ಆಗುತ್ತಿದ್ದೆ, ಜನರಿಗೆ ಹೆಚ್ಚು ಸಮಯ ಕೊಡುತ್ತಿರಲಿಲ್ಲ.
ಕಾರ್ಯಕರ್ತರಿಂದ ದೂರವಾಗಿದ್ದ ಕಾರಣ ಸೋಲಾಯಿತು ಅಷ್ಟೇ. ಸೋತಾಗ ಕುಗ್ಗಿಲ್ಲ, ಗೆದ್ದಾಗ ಬೀಗಿಲ್ಲ. ಯಾವತ್ತೂ ಟಿಕೆಟ್ ಕೇಳಿಲ್ಲ, ನನ್ನ ಹೋರಾಟ ನೋಡಿ ಟಿಕೆಟ್ ನೀಡಿದ್ದಾರೆ. ನಾನು ತೆರೆದ ಪುಸ್ತಕ, ಯಾರು ಬೇಕಾದರೂ ನೋಡಬಹುದು. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ, ಆದರೆ ಪ್ರಚಾರ ಮಾಡಿಕೊಳ್ಳಲಿಲ್ಲ. ದುರಾದೃಷ್ಟವಶಾತ್ ಕಾಂಗ್ರೆಸ್ಸಿಗರು ನನ್ನ ಕೆಲಸದ ಪ್ರಚಾರ ಮಾಡಲಿಲ್ಲ. ನನ್ನ ಅವಧಿಯಲ್ಲಿ ಎಲ್ಲವನ್ನೂ ಕ್ರೋಡೀಕರಿಸಿ ಉತ್ತಮ ದಸರಾ ಮಾಡಿದ್ದೇನೆ. ನಿಜವಾದ ವೈಚಾರಿಕತೆ ಹಾಗೂ ಸಾಂವಿಧಾನಿಕ ದಸರಾ ಆಚರಣೆ ಮಾಡಿದ್ದೇನೆ ಎಂದು ಮೈಸೂರಿನಲ್ಲಿ ಸಮಾಜಕಲ್ಯಾಣ ಸಚಿವ ಡಾ.H.C.ಮಹದೇವಪ್ಪ ಹೇಳಿದ್ರು