ಕೂಗು ನಿಮ್ಮದು ಧ್ವನಿ ನಮ್ಮದು

ಸಂಗೊಳ್ಳಿ ರಾಯಣ್ಣ-ಛತ್ರಪತಿ ಶಿವಾಜಿ ಈ ದೇಶದ ಆಸ್ತಿ, ಇವರಿಗೆ ಅಪಮಾನವಾಗಲು ಬಿಡೊದಿಲ್ಲಾ | ಸಚಿವ ರಮೇಶ್ ಜಾರಕಿಹೊಳಿ‌

ಚಿಕ್ಕೋಡಿ: ಬೆಳಗಾವಿಯ ಪೀರನವಾಡಿಯಲ್ಲಿ ಸಂಗೋಳ್ಳಿ ರಾಯಣ್ಣ ಪ್ರತಿಮೆ ವಿವಾದ ‌ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚೀವ ರಮೇಶ ಜಾರಕಿಹೋಳಿ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಲಾಠಿ ಚಾರ್ಜ ಕುರಿತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದು, ನನಗೆ ಘಟನೆ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಇಲ್ಲ. ಈ ಬಗ್ಗೆ ಡಿಸಿ, ಎಸ್ಪಿ ಅವರ ಜೊತೆ ಮಾತನಾಡಿ ಕ್ರಮ ಕೈಗೊಳ್ಳುತ್ತೆವೆ.

ಕಾನೂನು ರೀತಿ ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತೆನೆ. ರಾಯಣ್ಣ ಅಭಿಮಾನಿಗಳ ಮೇಲೆ ಚಪ್ಪಲಿ ಎಸೆದಿರುವ ಆರೋಪ ಸುಳ್ಳು, ಏಳೆಂಟು ಜನರ ಗುಂಪು ಬಂದಿತ್ತು ಅವರನ್ನು ಚದುರಿಸಲು ಲಾಠಿ ಚಾರ್ಜ ಮಾಡಲಾಗಿದೆ. ಸಧ್ಯ ಪೀರನವಾಡಿಯಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಸಂಗೋಳ್ಳಿ ರಾಯಣ್ಣ ಮತ್ತು ಛತ್ರಪತಿ ಶಿವಾಜಿ‌ ಈ ದೇಶದ ಆಸ್ತಿ. ಅವರನ್ನು ಜಾತಿಗೆ ಸಿಮೀತ ಮಾಡುವದಿಲ್ಲ. ಅವರಿಗೆ ಯಾವುದೆ ಅಪಮಾನ ಆಗದಂತೆ ಸರಿಪಡಿಸುತ್ತೆವೆ ಎಂದಿದ್ದಾರೆ.

error: Content is protected !!