ಕನ್ಯಾ ರಾಶಿ: ಇವರು ತುಂಬಾ ಸೂಕ್ಷ್ಮ ವ್ಯಕ್ತಿತ್ವ ಹೊಂದಿರುವ ಜನರು. ಜೀವನ ಪೂರ್ತಿ ಟ್ರೂ ಲವ್ ಗಾಗಿ ಹುಡುಕುತ್ತಾರೆ. ಎಲ್ಲದರಲ್ಲೂ ಪರಿಪೂರ್ಭತೆ ಬಯಸುವ ಇವರು, ಪ್ರೀತಿಯಲ್ಲೂ ಪರ್ಫೆಕ್ಟ್ ಆಗಿರಬೇಕು ಎಂದೇ ಬಯಸುವರು. ಆದರೆ ಇವರು ತಮಗೆ ಉತ್ತಮವಾದ ಜೋಡಿಯನ್ನು ಹುಡುಕಲು ವಿಫಲರಾಗುತ್ತಾರೆ. ಅವರು ಒಂದೇ ಸಂಬಂಧದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಲ್ಲ. ಮೇಲಿಂದ ಮೇಲೆ ಲವ್ ಬ್ರೇಕಪ್ ಅನುಭವಿಸುತ್ತಾರೆ.
ಧನು ರಾಶಿ: ಈ ಆಶಿಯವರು ಸಾಮಾನ್ಯವಾಗಿ ಒಬ್ಬಂಟಿಯಾಗಿರಲು ಬಯಸುತ್ತಾರೆ. ಏಕಾಂಗಿತನ ಆನಂದಿಸುತ್ತಾರೆ. ಇವರು ಸ್ವಾತಂತ್ರ್ಯ ಪ್ರಿಯರು. ಇವರನ್ನು ಯಾರಾದರೂ ಹೆಚ್ಚು ಪ್ರಶ್ನಿಸಿದರೆ ಉಸಿರುಗಟ್ಟುವಂಥ ವಾತಾವರಣ ಅನುಭವಿಸುತ್ತಾರೆ. ಈ ಏಕಾಂತದಲ್ಲಿರುವ ಭಾವನೆಯೇ ಅವರ ಪ್ರೇಮ ಸಂಬಂಧವನ್ನು ಹಾಳು ಮಾಡುತ್ತದೆ.
ಮಿಥುನ ರಾಶಿ: ಈ ರಾಶಿಯವರು ಸಹ ಉತ್ತಮ ಲವ್ ಲೈಫ್ ಹೊಂದಿರುವುದಿಲ್ಲ. ಇವರ ಪ್ರೀತಿ ಕೂಡ ಹೆಚ್ಚು ಕಾಲ ಬಾಳುವುದಿಲ್ಲ. ಇವರು ವರ್ಕ್ ಹೋಲಿಕ್ ಆಗಿರುತ್ತಾರೆ. ಇದರಿಂದಾಗಿ ತಮ್ಮ ಲವರ್‌ಗೆ ಸರಿಯಾದ ಸಮಯ ಕೊಡಲು ಆಗದೇ ಜಗಳಗಳು ಬರಲು ಶುರುವಾಗುತ್ತವೆ. ಇದರಿಂದಲೇ ಪದೆ ಪದೇ ಬ್ರೇಕಪ್ ಆಗುತ್ತವೆ.
ಕುಂಭ ರಾಶಿ: ತಮ್ಮದೇ ಆದ ಜಗತ್ತಿನಲ್ಲಿ ಮುಳುಗಿರುವ ರಾಶಿಯವರು ಇವರು. ಸೃಜನಾತ್ಮಕ ಮನಸ್ಸನ್ನು ಹೊಂದಿರುತ್ತಾರೆ. ತಮಗೆ ಬೇಕಾದಂತೆ ಇರಲು ಇಷ್ಟ ಪಡುತ್ತಾರೆ. ಪ್ರೀತಿಯ ಬಗ್ಗೆ ತಮ್ಮದೇ ಆದ ಕಲ್ಪನೆ ಹೊಂದಿರುತ್ತಾರೆ. ಇದರಿಂದಾಗಿ ಗೊಂದಲದಲ್ಲಿ ಬಿದ್ದು ಬ್ರೇಕಪ್ ಮಾಡಿಕೊಳ್ಳುತ್ತಾರೆ.