ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಗೊಂದಲಗಳು ಮುಗಿಯಲಾರವು. ಅರ್ಹ ಮಹಿಳೆಯರು ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಲು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗುರುವಾರ ಒಂದು ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿತ್ತು. ಅದರಲ್ಲೂ ಕೆಲ ಸಮಸ್ಯೆಗಳು ತಲೆದೋರಿದ್ದು ಅವುಗಳನ್ನು ಸರಿಪಡಿಸುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ವಿಧಾನ ಸೌಧದಲ್ಲಿರುವ ತಮ್ಮ ಕಚೇರಿ ಸುದ್ದಿಗಾರರನ್ನು ಉದ್ದೇಶಿಸಿ ಮಾತಾಡಿದ ಸಚಿವೆ, ಅರ್ಜಿ ನಮೂನೆಯೇನೂ ಬದಲಾಗದು, ನಿನ್ನೆ ಬಿಡುಗಡೆ ಮಾಡಿದ ಅರ್ಜಿಯೇ ಅಸಲಿ, ಆದರೆ ಅದರಲ್ಲಿ ಕೆಲ ತಿದ್ದುಪಾಟುಗಳನ್ನು ಮಾಡಲಾಗುವುದು ಎಂದು ಹೇಳಿದರು. ಜಾತಿ ಕಾಲಂ ಅನ್ನು ವರ್ಗ ಅಂತ ಬದಲಾಯಿಸಲಾಗುವುದು ಮತ್ತು ವಿಳಾಸದ ಕಾಲಂ ಚಿಕ್ಕದಾಗಿರುವುದರಿಂದ ವಿಸ್ತರಿಸಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.