ಕೂಗು ನಿಮ್ಮದು ಧ್ವನಿ ನಮ್ಮದು

ಮತ್ತೊಂದು ಆಘಾತಕಾರಿ ಭವಿಷ್ಯ ನುಡಿದ ಕೋಡಿಮಠ ಶ್ರೀ: ಸಿದ್ದರಾಮಯ್ಯ ಸರ್ಕಾರಕ್ಕೆ ಶುಭ ಸೂಚನೆ

ಕೋಲಾರ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೋಡಿಮಠದ ಸ್ವಾಮೀಜಿ ನುಡಿದಿದ್ದ ಭವಿಷ್ಯ ನಿಜವಾಗಿದೆ. ಯಾವುದೇ ಪಕ್ಷಗಳು ಒಟ್ಟಾಗಿ ಹೋಗುವುದಿಲ್ಲ. ಪಕ್ಷಾಂತರಗಳು ಹೆಚ್ಚಲಿವೆ. ಆದ್ರೆ, ಒಂದೇ ಪಕ್ಷ ಅಧಿಕಾರವನ್ನು ಹಿಡಿಯಲಿದೆ ಎಂದು ಹೇಳಿದ್ದರು. ಅದರಂತೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಏಕಾಂಗಿಯಾಗಿ ಅಧಿಕಾರಕ್ಕೆ ಬಂದಿದೆ. ಇದರ ಮಧ್ಯೆ ಇದೀಗ ಕೋಡಿಮಠದ ಡಾ. ಶಿವಾನಂದ ಮಹಾ ಸ್ವಾಮೀಜಿ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಇಂದು ಕೋಲಾರ ತಾಲ್ಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಕೋಡಿಮಠ ಶ್ರೀ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಈ ಹಿಂದೆ ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಂದಿದೆ. ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತೆ ಎಂದು ಹೇಳಿದ್ದೆ ಅದರಂತೆ ರೈಲು ದುರಂತ ನಡೆದಿದೆ. ಇನ್ನೂ ಒಂದು ಗಂಡಾಂತರ ದೇಶಕ್ಕೆ ಕಾದಿದೆ. ಈ ವರ್ಷ ಅಚನಕ್ಕಾಗಿ ಗುಡುಗು ಮಿಂಚು, ಬರಲಿದೆ. ಎರಡು ಮೂರು ರಾಷ್ಟ್ರಗಳು ನೀರಿನಲ್ಲಿ ಮುಳುಗಡೆಯಾಗಲಿವೆ. ಎಲ್ಲೋ ನಡೆದ ಬಾಂಬ್ ದಾಳಿಯಿಂದ ಸಾಕಷ್ಟು ನಮಗೆ ಅನಾಹುತ ಸಂಭವಿಸಲಿದೆ ಎಂದು ಆಘಾತಕಾರಿ ಭವಿಷ್ಯ ನುಡಿದರು.

ಗಿಡ, ಮರ, ದೈವದ, ಆರಾಧ್ಯದ ಸಂಕೇತ. ಮತ್ತೆ ಕೈವಾರ ತಾತಯ್ಯನವರು ಹುಟ್ಟಿ ಬರುವ ಸಂಕೇತ ಇದೆ. ಅಂತಹ ಸೂಚನೆ ಈಗಾಗಲೇ ಸಿಕ್ಕಿದೆ. ಅದರಂತೆ ಬೆಟ್ಟದಲ್ಲಿ ಮೂನ್ಸೂಚನೆ ಸಿಕ್ಕಿದೆ. ರಾಜ್ಯದಲ್ಲಿ ಆದ್ಯಾತ್ಮಿಕವಾಗಿ ಅವರು ನಡೆಯುತ್ತಿದ್ದಾರೆ. ಹಾಗಾಗಿ ಅವರಿಗೆ ಒಳ್ಳೆಯದಾಗಲಿ‌. ಆಧ್ಯಾತ್ಮ ಬಿಟ್ಟು ಹೋದರೆ ಅವರಿಗೆ ದೈವವೇ ಉತ್ತರ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಬಗ್ಗೆ ಅಭಿಪ್ರಾಯ ತಿಳಿಸಿದರು.

ಇತ್ತೀಚೆಗೆ ಬಾಗಲಕೋಟೆಯ ಜಮಖಂಡಿಯಲ್ಲಿ ಮಾತನಾಡಿದ್ದ ಕೋಡಿಶ್ರೀ, ರಾಜಕೀಯ ಬೆಳವಣಿಗೆ ಬಗ್ಗೆ ಭವಿಷ್ಯ ನುಡಿದಿದ್ದರು. ರಾಜಕೀಯ ಅಸ್ಥಿರತೆ ಇದೆ. ಯಾವ ಪಕ್ಷವೂ ಕೂಡಿ ಹೋಗೋದು ಕಷ್ಟ. ಚುನಾವಣೆವರೆಗೂ ಏನು ಹೇಳುವುದಕ್ಕೆ ಆಗುವುದಿಲ್ಲ. ಎಲ್ಲಾ ಡಿವೈಡ್ ಆಗುವ ಲಕ್ಷಣ ಇದೆ‌, ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದರು. ಅದರಂತೆ ಇದೀಗ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಈ ಮೂಲಕ ಶ್ರೀಗಳ ಭವಿಷ್ಯ ನಿಜವಾಗಿದೆ.

error: Content is protected !!